ADVERTISEMENT

ಬೊಂತಿ ತಾಂಡಾದಲ್ಲಿ ಸಂಭ್ರಮದ ಕಳಸಾರೋಹಣ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಔರಾದ್: ತಾಲ್ಲೂಕಿನ ಬೊಂತಿ ತಾಂಡಾದಲ್ಲಿ ನಿರ್ಮಿಸಲಾದ ಭವಾನಿ ಮತ್ತು ಸಂತ ಸೇವಾಲಾಲ ದೇವಾಲಯದ ಕಳಸಾರೋಹಣ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ಜರುಗಿತು.

ಈ ನಿಮಿತ್ತ ನಡೆದ ಕಾರ್ಯಕ್ರಮ ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ ಉದ್ಘಾಟಿಸಿ ಬಂಜಾರಾ ಸಮಾಜ ಬಾಂಧವರು ಅತ್ಯುತ್ತಮ ಶಿಕ್ಷಣ ಪಡೆಯಬೇಕು, ಶಿಕ್ಷಣ ಇದ್ದಲ್ಲಿ ಎಲ್ಲಿಯಾದರೂ ಬದುಕಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಭು ಚವ್ಹಾಣ್ ಮಾತನಾಡಿ, ಭಕ್ತಿ ಇದ್ದಲ್ಲಿ ದೇವರು ಇದ್ದಾನೆ ಎಂದು ನಾನು ಅಚಲವಾಗಿ ನಂಬಿದ್ದೆೀನೆ. ಈ ಕಾರಣ ದೇವಾಲಯ ಕಟ್ಟಿಸಿದ್ದೆೀನೆ ಎಂದರು.

ಸಾನ್ನಿಧ್ಯ ವಹಿಸಿದ ಪೌರಾದೇವಿ ರಾಮರಾವ ಮಹಾರಾಜರು, ಬಂಜಾರಾ ಸಮಾಜಕ್ಕೆ ಬಹಳ ದೊಡ್ಡ ಇತಿಹಾಸ ಇದೆ. ಇಂಥ ಸಮಾಜದಿಂದ ಬಂದ ಲಂಬಾಣಿ ಬಾಂಧವರು ಅತ್ಯುತ್ತಮ ಕೆಲಸ ಮಾಡುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು.

ತಂಬಲೂರು ಶಿವಾನಂದ ಶಿವಾಚಾರ್ಯರು ಆಶೀರ್ವಚನ ನೀಡಿ, ಔರಾದ್ ತಾಲ್ಲೂಕು ಈಗ ಅಭಿವೃದ್ಧಿಯ ಪಥದಲ್ಲಿ ಸಾಗಿದೆ ಎಂದರು.
ಶಂಭುಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿದರು. ಬಿಡಿಎ ಅಧ್ಯಕ್ಷ ಬಾಬುರಾವ ಮದಕಟ್ಟಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರಿರಂಗ ಪರಿಹಾರ, ಎಪಿಎಂಸಿ ಅಧ್ಯಕ್ಷ ವೆಂಕಟರಾವ ಡೊಂಬಾಳೆ, ಬಿಜೆಪಿ ಅಧ್ಯಕ್ಷ ಸುರೇಶ ಭೋಸ್ಲೆ,  ಜಿಲ್ಲಾ ಪಂಚಾಯ್ತಿ ಸದಸ್ಯ ಕಾಶಿನಾಥ ಜಾಧವ್, ಬಸವರಾಜ ಪಾಟೀಲ ಕೊಳ್ಳೂರ್, ಗುರುನಾಥ ಕೊಳ್ಳೂರ, ರವಿ ಮೀಸೆ, ಬಂಡೆಪ್ಪ ಕಂಟೆ, ಪ್ರಕಾಶ ಟೊಣ್ಣೆ, ಬಾಬುರಾವ ಠಾಕೂರ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಮಹಿಳೆಯರು ಸೇರಿದಂತೆ ವಿವಿಧ ತಾಂಡಾಗಳಿಂದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಕ್ತಿ ಭಾವ ಮೆರೆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.