ADVERTISEMENT

ಮದ್ಯದಿಂದ ದೂರವಿರಲು ಕರೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 19:30 IST
Last Updated 7 ಜನವರಿ 2012, 19:30 IST

ಗೋಣಿಕೊಪ್ಪಲು: `ದೃಢವಾದ ಆತ್ಮವಿಶ್ವಾವಿದ್ದರೆ ಕುಡಿತದಿಂದ ದೂರವಿರಲು ಸಾಧ್ಯ. ಕುಂಟುಂಬದ ನೆಮ್ಮದಿ ಹಾಗೂ ಸುಖ ಶಾಂತಿಗಾಗಿ ಮದ್ಯಮುಕ್ತ ಜೀವನ ನಡೆಸುವುದು ಅಗತ್ಯ~ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕೋಳೆರ ದಯಾ ಚಂಗಪ್ಪ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘ, ಪೊನ್ನಂಪೇಟೆ ಸದ್ಗುರು ಸಾಯಿಶಂಕರ ಟ್ರಸ್ಟ್, ನವಜೀವನ ಸಮಿತಿ ಸಂಯುಕ್ತವಾಗಿ ಹುದಿಕೇರಿ ಕೊಡವ ಸಮಾಜದಲ್ಲಿ ಶನಿವಾರ ಆಯೋಜಿಸಿರುವ 472 ನೇ ಮದ್ಯವರ್ಜನ ಶಿಬಿರದಲ್ಲಿ ಮಾತನಾಡಿದ ಅವರು ~ಕುಡಿತ ಮನುಷ್ಯನ ಬದುಕನ್ನು ನಾಶ ಮಾಡುತ್ತದೆ. ಯಾವುದೇ ಚಟಕ್ಕೆ ಬಲಿಯಾಗದೇ ಉತ್ತಮ ಹವ್ಯಾಸ ರೂಢಿಸಿಕೊಂಡು ಬದುಕಿನಲ್ಲಿ ನೆಮ್ಮದಿ ಕಂಡುಕೊಳ್ಳಲು ಮುಂದಾಗಬೇಕು~ ಎಂದು ಸಲಹೆ ನೀಡಿದರು.

ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೆಪ್ಪುಡಿರ ಪೊನ್ನಪ್ಪ ಮಾತನಾಡಿ ಕುಡಿತದಿಂದ ದೇಹದ ಅಂಗಾಂಗಗಳೆಲ್ಲ ಹಾನಿಗೊಳಗಾಗುತ್ತವೆ. ದುಡಿದ ಹಣವನ್ನು ಕುಡಿತಕ್ಕೆ ಕಳೆದು ಹಣ ಹಾಗೂ ಆರೋಗ್ಯ ಹಾಳು ಮಾಡಿಕೊಳ್ಳಬಾರದು. ವೈದ್ಯರ ಸಲಹೆ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು~ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.
 
ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಶ್ರೀಹರಿ, ಸಾಯಿಶಂಕರ ಟ್ರಸ್ಟ್ ಅಧ್ಯಕ್ಷ ಕೋಳೆರ ಝರು ಗಣಪತಿ ಮಾತನಾಡಿದರು. ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ಕೋದಂಡ ಸನ್ನು ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯೆ ಊರ್ಮಿಳಾ, ಗ್ರಾಮ ಪಂಚಾಯಿತಿ ಸದಸ್ಯ ಸೂರಜ್‌ಯವಜನಸೇವಾ ನಿವೃತ್ತ ಅಧಿಕಾರಿ ಮುದ್ದಪ್ಪ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.