ADVERTISEMENT

ಮಹಿಳೆಯರದ್ದೇ ಪ್ರಾಬಲ್ಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ಗದಗ: ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಮಾತ್ರವಲ್ಲದೆ ರಾಜ್ಯ ರಾಜಕೀಯದಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ದೊರೆಯಲಿದೆ. ಅವರ ನಿರ್ದೇಶನದಲ್ಲಿಯೇ ಸರ್ಕಾರಗಳು ನಡೆಯಲಿವೆ ಎಂದು ಕೋಡಿಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದರು.

ಮಂಗಳವಾರ ನಗರದ ನೀಲಮ್ಮತಾಯಿ ಆಧ್ಯಾತ್ಮ ವಿದ್ಯಾಶ್ರಮದಲ್ಲಿ ಆಯೋಜಿಸಿದ್ದ ಸತ್ಸಂಗ ಸಮ್ಮೇಳನದಲ್ಲಿ ಪಾಲ್ಗೊಂಡ ಅವರು ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ 2020ರ ವರೆಗೂ ರಾಜ್ಯದಲ್ಲಿ ಏಕಪಕ್ಷೀಯ ಆಡಳಿತ ಸಾಧ್ಯವಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ಅನಿವಾರ್ಯ. ಅಂತೆಯೇ ಮಹಿಳೆಯರಿಗೆ ಆದ್ಯತೆ ದೊರೆಯಲಿದ್ದು, ಅಧಿಕಾರ ಚುಕ್ಕಾಣಿ ಹಿಡಿಯುವ ಸಾಧ್ಯತೆಇಲ್ಲದಿಲ್ಲ ಎಂದು ಭವಿಷ್ಯ ನುಡಿದರು.

ರಾಜ್ಯದಲ್ಲಿ ಮುಂದೆ ಮಳೆ-ಬೆಳೆ ಚೆನ್ನಾಗಿರುತ್ತದೆ. ಆದರೆ ರಾಜಕೀಯದಲ್ಲಿನ ಮಳೆ-ಬೆಳೆ ಮಾತ್ರ ಅಷ್ಟು ಚೆನ್ನಾಗಿರುವುದಿಲ್ಲ. ಅಂತೆಯೇ ಇನ್ನು ಮುಂದೆ ಬೆಂಕಿಯ ಹಾವಳಿ ಹೆಚ್ಚಾಗಲಿದೆ. ದ್ವೇಷ, ಅಸೂಯೆಗಳ ಜೊತೆಗೆ ರೋಗ-ರುಜಿನ, ಪ್ರಕೃತಿ ವಿಕೋಪ ಹೆಚ್ಚಾಗಲಿವೆ. ಈಶಾನ್ಯ ಭಾಗದಲ್ಲಿ ಯುದ್ಧ ಭೀತಿ ಇದ್ದು, ಭಯೋತ್ಪಾದಕರ ಹಾವಳಿ ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.