ADVERTISEMENT

ಮೂರು ಯಾತ್ರಾ ಸ್ಥಳಗಳಿಗೆ ರೈಲು

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 19:30 IST
Last Updated 7 ಜುಲೈ 2012, 19:30 IST

ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳಗಳಾದ ಶ್ರವಣಬೆಳಗೊಳ, ಶಿರಡಿ ಹಾಗೂ ನಂಜನಗೂಡಿಗೆ ತೆರಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಆರಂಭಿಸಲಾಗಿರುವ ಮೈಸೂರು- ಚಾಮರಾಜನಗರ, ಮೈಸೂರು- ಶ್ರವಣಬೆಳಗೊಳ ಹಾಗೂ ಮೈಸೂರು- ಸಾಯಿನಗರ ಶಿರಡಿ (ಸಾಪ್ತಾಹಿಕ) ರೈಲು ಸೇವೆಗಳಿಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಶನಿವಾರ ಚಾಲನೆ ನೀಡಿದರು.

ಮೈಸೂರು-ಸಾಯಿನಗರ ಶಿರಡಿ ರೈಲು (ಗಾಡಿ ಸಂಖ್ಯೆ: 16217/18) ಮೈಸೂರಿನಿಂದ ಸೋಮವಾರ ಬೆಳಿಗ್ಗೆ 5.30 ಗಂಟೆಗೆ ಹೊರಟು ಮಂಗಳವಾರ ಬೆಳಿಗ್ಗೆ 11.30 ಗಂಟೆಗೆ ಶಿರಡಿ ತಲುಪಲಿದೆ. ಮಂಗಳವಾರ ರಾತ್ರಿ 11.55 ಗಂಟೆಗೆ ಶಿರಡಿಯಿಂದ ಹೊರಟು ಗುರುವಾರ ಬೆಳಿಗ್ಗೆ 7.10 ಗಂಟೆಗೆ ಮೈಸೂರು ತಲುಪಲಿದೆ.

ಮೈಸೂರು, ಮಂಡ್ಯ, ಕೆಂಗೇರಿ, ಬೆಂಗಳೂರು ಸಿಟಿ, ಧರ್ಮಾವರಂ, ಗುಂತಕಲ್, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಬಾಗಲಕೋಟೆ, ವಿಜಾಪುರ, ಸೋಲಾಪುರ, ಅಹಮದನಗರ ಮಾರ್ಗವಾಗಿ ಶಿರಡಿ ತಲುಪಲಿದೆ. 2ಎಸಿ -2, 3ಎಸಿ-2, ಸ್ಲೀಪರ್-11, ಸಾಮಾನ್ಯ-3 ಹಾಗೂ 1 ಮಹಿಳಾ ಬೋಗಿ ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿದೆ.

ಮೈಸೂರು-ಶ್ರವಣಬೆಳಗೊಳ ರೈಲು (ಗಾಡಿ ಸಂಖ್ಯೆ: 56215/16) ಪ್ರತಿ ದಿನ ಬೆಳಿಗ್ಗೆ 11.35 ಗಂಟೆಗೆ ಮೈಸೂರಿನಿಂದ ಹೊರಟು ಮಧ್ಯಾಹ್ನ 3.20 ಗಂಟೆಗೆ ಶ್ರವಣಬೆಳಗೊಳ ತಲುಪಲಿದೆ. ಅಲ್ಲಿಂದ ಮಧ್ಯಾಹ್ನ 3.50 ಗಂಟೆಗೆ ಹೊರಟು ರಾತ್ರಿ 8.05 ಗಂಟೆಗೆ ಮೈಸೂರು ತಲುಪಲಿದೆ.

ಮೈಸೂರು- ಚಾಮರಾಜನಗರ ರೈಲು (ಗಾಡಿ ಸಂಖ್ಯೆ: 56208/09) ಪ್ರತಿ ದಿನ ಮಧ್ಯಾಹ್ನ 2.45 ಗಂಟೆಗೆ ಮೈಸೂರಿನಿಂದ ಹೊರಟು ಮಧ್ಯಾಹ್ನ 4.40 ಗಂಟೆಗೆ ಚಾಮರಾಜನಗರ ತಲುಪಲಿದೆ. ಅಲ್ಲಿಂದ ಸಂಜೆ 6 ಗಂಟೆಗೆ ಹೊರಟು ರಾತ್ರಿ 7.50 ಗಂಟೆಗೆ ಮೈಸೂರು ತಲುಪಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.