ADVERTISEMENT

ರೈತರ ಶೋಷಣೆ ತಪ್ಪಿಸಲು ರೈತಸಂಘ ಮನವಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ರಾಯಚೂರು: ಲಿಂಗಸಗೂರು, ಮುದಗಲ್, ಮಸ್ಕಿ ಹಾಗೂ ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಸಮಸ್ಯೆ ಹೋಗಲಾಡಿಸಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.

ರಾಯಚೂರು ಹತ್ತಿ ಮಾರುಕಟ್ಟೆ ಪ್ರಾಂಗಣದಲ್ಲಿ ವೇಬ್ರಿಜ್ ಇದ್ದು, ಅಲ್ಲಿಯೇ ತೂಕ ಮಾಡುವ ವ್ಯವಸ್ಥೆ ಮಾಡಬೇಕು, ಜಾನುವಾರು ಸಂತೆ ಅವ್ಯವಸ್ಥೆ ಇದೆ. ಬೇರೆಡೆ ಸ್ಥಳಾಂತರಿಸಿ ಮೂಲ ಸೌಕರ್ಯ ಕಲ್ಪಿಸಬೇಕು. ಜಾನುವಾರು ಸಂತೆಯಲ್ಲಿ ನಗರಸಭೆಯವರು ಪ್ರತಿ ಜಾನುವಾರುಗಳಿಗೆ 10 ರೂಪಾಯಿ ವಸೂಲಿ ಮಾಡುವುದನ್ನು ತಕ್ಷಣ ನಿಲ್ಲಿಸಬೇಕು ಎಂದರು.

ಲಿಂಗಸಗೂರು, ಮುದಗಲ್ ಮತ್ತು ಮಸ್ಕಿ ಮಾರುಕಟ್ಟೆಯಲ್ಲಿ ರೈತರು ಮಾರುಕಟ್ಟೆಗೆ ತಂದ ಮಾಲನ್ನು ಒಂದು  ಕೆ.ಜಿ ತೂಕದ ಚೀಲದಲ್ಲಿ ತೂಕ ಮಾಡಬೇಕು. ಈ ಮಾರುಕಟ್ಟೆಯಲ್ಲಿ ತೂಕದಲ್ಲಿ ಮೋಸ ಮಾಡುವ ವ್ಯಾಪಾರಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು.  ಎಪಿಎಂಸಿಯಲ್ಲಿ ಕುಡಿವ ನೀರು, ಶೌಚಾಲಯ ವ್ಯವಸ್ಥೆ ಆಗಬೇಕು. ತರಕಾರಿ ಸಗಟು ವ್ಯಾಪಾರವನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರ ಮಾಡಲೇಬೇಕು ಎಂದು ಒತ್ತಾಯಿಸಿದರು.

ಸಂಘಟನೆ ರಾಜ್ಯ ಉಪಾಧ್ಯಕ್ಷ ಚಾಮರಸ ಮಾಲಿಪಾಟೀಲ, ಲಕ್ಷ್ಮಣಗೌಡ ಕಡಗಂದೊಡ್ಡಿ, ಅಮರಣ್ಣ ಗುಡಿಹಾಳ, ಬೂದೆಯ್ಯಸ್ವಾಮಿ, ಯಂಕಪ್ಪ ಕಾರಬಾರಿ, ನರಸಪ್ಪ ಕುರುಬದೊಡ್ಡಿ, ಖಾಜಪ್ಪ ಅರಿಷಿಣಗಿ, ಈರೇಶಗೌಡ,  ಕೊಪ್ಪಣ್ಣ ಗೋನವಾಟ್ಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.