ADVERTISEMENT

ವಿಜಾಪುರ: ಮಕ್ಕಳ ಪುಸ್ತಕ ಮೇಳಕ್ಕೆ ಜಿಲ್ಲಾಧಿಕಾರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2011, 19:30 IST
Last Updated 22 ಮಾರ್ಚ್ 2011, 19:30 IST

ವಿಜಾಪುರ: ಇಲ್ಲಿಯ ಗಂಡುಮಕ್ಕಳ ಉರ್ದು ಶಾಲೆ ನಂ.5ರಲ್ಲಿ ಹಮ್ಮಿಕೊಂಡಿರುವ ಮಕ್ಕಳ ಪುಸ್ತಕ ಮೇಳಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಚಾಲನೆ ನೀಡಿದರು.ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿರುವ ಈ ಎರಡು ದಿನಗಳ ಪುಸ್ತಕ ಮೇಳದಲ್ಲಿ ಶಾಲಾ ಗ್ರಂಥಾಲಯಗಳಿಗೆ ಉಪಯುಕ್ತವಾದ ಮಕ್ಕಳ ಪುಸ್ತಕಗಳಿವೆ. ವಿವಿಧ ಪ್ರಕಾಶಕರನ್ನು ಆಹ್ವಾನಿಸಲಾಗಿದ್ದು, ಶೇ. 20ರ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡಲಾಗುತ್ತಿದೆ ಎಂದು ಡಿಡಿಪಿಐ ಎ.ಸಿ. ಹಿರೇಮಠ ಹೇಳಿದರು.
 

ಶಾಲಾ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಗೆ ಅನುಕೂಲವಾಗುವಂತೆ ಉನ್ನತ ಪ್ರಾಥಮಿಕ ಶಾಲೆಗಳಿಗೆ 10 ಸಾವಿರ ಹಾಗೂ ಪ್ರಾಥಮಿಕ ಶಾಲೆಗಳಿಗೆ 3 ಸಾವಿರದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅನುದಾನ ನೀಡಿದೆ. 1881 ಶಾಲೆಗಳು ಪುಸ್ತಕ ಖರೀದಿಯಲ್ಲಿ ಭಾಗವಹಿಸಲಿವೆ ಎಂದರು.
 

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎನ್. ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಎಂ. ಸಿಂಧೂರ, ವಿಜಾಪುರ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವೈ. ಕೊಣ್ಣೂರ, ಕ್ಷೇತ್ರ ಸಮನ್ವಯಾಧಿಕಾರಿ ಐ.ಎಫ್. ಅರಳಿಮಟ್ಟಿ, ಶಿಕ್ಷಕರ ಸಂಘದ ಎ.ಬಿ. ಬೇವನೂರ, ಅರ್ಜುನ ಲಮಾಣಿ, ಜುಬೇರಾ ಕೆರೂರ, ಸಜ್ಜನ ಇತರರು ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.