ADVERTISEMENT

ವಿಮಾನಯಾನ ಜತೆ ಕಾರ್ಗೊ ಸೇವೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ವಿಜಾಪುರ: ನಗರದಲ್ಲಿ ವಿಮಾನ ಯಾನದೊಂದಿಗೆ ಕಾರ್ಗೊ ಸೇವೆ (ಸರಕು ಸಾಗಾಣೆ)ಯನ್ನೂ ಆರಂಭಿಸಲು ಉದ್ದೇಶಿಸಲಾಗಿದೆ. ಉದ್ದೇಶಿತ ವಿಜಾಪುರ ವಿಮಾನ ನಿಲ್ದಾಣದ 200 ಎಕರೆಯಲ್ಲಿ ಕಾರ್ಗೊ ಸೇವಾ ಸಂಕೀರ್ಣ ಅಭಿವೃದ್ಧಿ ಪಡಿಸಲಾಗುವುದು ಎಂದು ಚೈನ್ನೈನ ಮಾರ್ಗ್ ಕಂಪೆನಿಯ ವಾಯುಯಾನ ಯೋಜನಾ ವಿಭಾಗದ ವ್ಯವಸ್ಥಾಪಕ ದೇಬಶಿಷ್ ಭೂಮಿಕಾ ಹೇಳಿದರು.

ಜಿಲ್ಲಾ ಆಡಳಿತ ಹಾಗೂ ಮಾರ್ಗ್ ಕಂಪೆನಿ ಸಹಯೋಗದಲ್ಲಿ ಶುಕ್ರವಾರ  ಉದ್ದೇಶಿತ ವಿಜಾಪುರ ವಿಮಾನ ನಿಲ್ದಾಣ ಕಾರ್ಗೊ ಸೇವೆಯ ವ್ಯವಹಾರಿಕ ಸಮುದಾಯ ಸಭೆಯಲ್ಲಿ ಮಾತನಾಡಿದರು.

ವಿಜಾಪುರ ಅತ್ಯುತ್ತಮ ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ ಕ್ಷೇತ್ರವಾಗಿದ್ದು ಕಾರ್ಗೊ ಸೇವೆ ಆರಂಭಿಸಿ ಇಲ್ಲಿನ ಕೃಷಿ, ತೋಟಗಾರಿಕೆ ಉತ್ಪನ್ನವನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ಯೋಜನೆ ಇದೆ ಎಂದರು.

ರಾಜ್ಯ ಸರ್ಕಾರ ಈಗಾಗಲೇ 720 ಎಕರೆ ಭೂಮಿ ನೀಡಿದ್ದು, ಇದರಲ್ಲಿ 500 ಎಕರೆಯಲ್ಲಿ ವಿಮಾನ ನಿಲ್ದಾಣ ಮತ್ತು 200 ಎಕರೆಯಲ್ಲಿ ಕಾರ್ಗೊ ಚಟುವಟಿಕೆಯ ಸೌಲಭ್ಯ ಅಭಿವೃದ್ಧಿಗೆ ಬಳಸಲಾಗುವುದು ಎಂದರು. ಪ್ರಭಾರ ಜಿಲ್ಲಾಧಿಕಾರಿ ಜಿ.ಎಸ್. ಜಿದ್ದಿಮನಿ, ಅಗತ್ಯ ಬಿದ್ದರೆ ನಿಲ್ದಾಣಕ್ಕೆ ಹೆಚ್ಚುವರಿ ಜಮೀನು ನೀಡುವುದಾಗಿ ಹೇಳಿದರು.

ಜಿಪಂ ಸಿಇಒ ಎ.ಎನ್. ಪಾಟೀಲ,  ಬಿ.ಎಲ್. ಪಾಟೀಲ, ವಿಠ್ಠಲಗೌಡ ಬಿರಾದಾರ, ಪಂಚಪ್ಪ ಕಲಬುರ್ಗಿ,  ಖೇಡ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.