ಹಾವೇರಿ: `ವೀರಶೈವರ ಎದುರು ದಲಿತರನ್ನು ಎತ್ತಿ ಕಟ್ಟುವ ಮೂಲಕ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರು ವೀರಶೈವ ಸಮುದಾಯವನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದ್ದಾರೆ~ ಎಂದು ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಲಿಂಗಾಯತರು ಬಂಡೆದ್ದರೆ ದಲಿತರೂ ಸಂಘರ್ಷಕ್ಕಿಳಿಯಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ವೀರಶೈವರು ಹೇಡಿಗಳಲ್ಲ ಎಂಬುದನ್ನು ಪರಮೇಶ್ವರ ಅರ್ಥ ಮಾಡಿಕೊಳ್ಳಬೇಕುಎಂದರು.
ಪರಮೇಶ್ವರ ಅವರ ಹೇಳಿಕೆ ವೀರಶೈವ ಸಮುದಾಯವನ್ನು ಅವಮಾನ ಮಾಡುವುದರ ಜತೆಗೆ ಒಂದು ಸಮುದಾಯವನ್ನು ಇನ್ನೊಂದು ಸಮುದಾಯದೊಂದಿಗೆ ಎತ್ತಿಕಟ್ಟುವ ದುರುದ್ದೇಶ ಹೊಂದಿದಂತಿದೆ. ಇಂತಹ ಹೇಳಿಕೆ ಪಕ್ಷದ ಬೆಳವಣಿಗೆಗೆ ಮಾರಕವಾಗಲಿದೆ. ಆದಕಾರಣ ಹೇಳಿಕೆಯನ್ನು ವಾಪಸ್ಸು ಪಡೆದು, ವೀರಶೈವ ಸಮುದಾಯದ ಕ್ಷಮೆ ಕೇಳಬೇಕೆಂದು ಪಾಟೀಲ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.