ADVERTISEMENT

ಶರೀಫಗಿರಿಯಲ್ಲಿ ಭಾವೈಕ್ಯದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2011, 18:55 IST
Last Updated 15 ಮಾರ್ಚ್ 2011, 18:55 IST

ಶಿಗ್ಗಾಂವ: ಹಿಂದೂ-ಮುಸ್ಲಿಂ ಭಾವೈಕ್ಯದ ಸಂಕೇತವಾದ ಸಂತ ಶಿಶುವಿನಹಾಳ ಶರೀಫರ ಜಾತ್ರಾ ಮಹೋತ್ಸವ ಮಂಗಳವಾರ ತಾಲ್ಲೂಕಿನ ಶಿಶುವಿನಹಾಳ ಗ್ರಾಮದ ಶರೀಫಗಿರಿಯಲ್ಲಿ ಸಡಗರ ಸಂಭ್ರಮದಿಂದ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಭಾವೈಕ್ಯ ಧ್ವಜಾರೋಹಣ, ಶಿಶುವಿನಹಾಳ ದೇವಸ್ಥಾನದಿಂದ ಶರೀಫಗಿರಿವರೆಗೆ ಕಳಸದ ಮೆರವಣಿಗೆ, ರಥಕ್ಕೆ ಕಳಸಾರೋಹಣ ಮಾಡಿದ ನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶರೀಫರ ರಥೋತ್ಸವ ನಡೆಯಿತು.

ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಲಕ್ಷ್ಮೇಶ್ವರ, ಕಾರವಾರ ಸೇರಿದಂತೆ ಶಿಶುವಿನಹಾಳ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಜನರು ಚಕ್ಕಡಿ, ಟ್ಯ್ರಾಕ್ಟರ್, ಟೆಂಪೊ ಹಾಗೂ ಟ್ಯಾಕ್ಸಿಗಳಲ್ಲಿ ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಶರೀಫರ ಕರ್ತೃ ಗದ್ದುಗೆಗೆ ಯುವಕರು ದೀಡ್ ನಮಸ್ಕಾರ ಹಾಕುವುದು, ಮಕ್ಕಳ ತುಲಾಭಾರ ನಡೆಸುವದು, ಪ್ರಸಾದ ಸೇವೆ ಸಲ್ಲಿಸುವದು ಹೀಗೆ ಭಕ್ತರು ವಿವಿಧ ಹರಕೆ ಸೇವೆಗಳನ್ನು ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.