ADVERTISEMENT

ಶಿವಸ್ವಾಮಿಗೆ ಪ್ರೊ .ಎಂಡಿಎನ್ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 19:30 IST
Last Updated 6 ಫೆಬ್ರುವರಿ 2012, 19:30 IST

ಮಂಡ್ಯ: ರೈತ ಕ್ರಾಂತಿಯ ಹರಿಕಾರ ದಿ. ಪ್ರೊ. ಎಂ.ಡಿ.ನಂಜುಂಡಸ್ವಾಮಿ ಹೆಸರಿನಲ್ಲಿ ನೀಡುವ ಅಂತರರಾಷ್ಟ್ರೀಯ ಪ್ರಶಸ್ತಿಗೆ ಸ್ವಿಡ್ಜರ್‌ಲೆಂಡ್‌ನ ಪೀಪಲ್ಸ್ ಗ್ಲೋಬಲ್ ಆಕ್ಷನ್ ಸಂಸ್ಥೆ ಸಂಸ್ಥಾಪಕ ಒಲಿವಿಯರ್ ಡೆ. ಮಾರ್ಸೆಲಸ್ ಹಾಗೂ ತಮಿಳುನಾಡಿನ ವ್ಯವಸಾಯಗಳ್ ಸಂಘಂ ಸಂಸ್ಥಾಪಕ ಡಾ. ಶಿವಸ್ವಾಮಿ ಭಾಜನರಾಗಿದ್ದಾರೆ.

ಪ್ರೊ.ಎಂಡಿಎನ್ ಅವರ ಹುಟ್ಟುಹಬ್ಬದ ದಿನವಾದ ಫೆ. 13ರಂದು, ಬೆಂಗಳೂರಿನ ಶಿಕ್ಷಕರ ಸದನದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು. ಪ್ರೊ. ಎಂ.ಡಿ.ನಂಜುಂಡಸ್ವಾಮಿ ಪ್ರತಿಷ್ಠಾನ ಹಾಗೂ ದಕ್ಷಿಣ ಭಾರತ ರೈತ ಸಂಘಟನೆಗಳ ಒಕ್ಕೂಟ ನೀಡುವ ಈ ಪ್ರಶಸ್ತಿಯು `ಎಂಡಿಎನ್-1~ ತಳಿಯ ಬತ್ತದ ಕಿಟ್, ಪ್ರಶಸ್ತಿ ಫಲಕ, ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.

ಪುಸ್ತಕ ಬಿಡುಗಡೆ:
ಇದೇ ಸಂದರ್ಭದಲ್ಲಿ `ವಿಧಾನಸಭೆಯಲ್ಲಿ ಪ್ರೊ. ಎಂಡಿಎನ್~ ಮತ್ತು `ರೈತರನ್ನು ಉದ್ದೇಶಿಸಿ ಪ್ರೊ. ಎಂಡಿಎನ್~ ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು. ಚಿತ್ರದುರ್ಗದ ಮುರುಘರಾಜೇಂದ್ರ  ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಸಾನ್ನಿಧ್ಯವಹಿಸಲಿದ್ದಾರೆ ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.