ADVERTISEMENT

ಶಿಸ್ತು ಮೀರಿದರೆ ಕ್ರಮ: ಡಿವಿಎಸ್

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 9:00 IST
Last Updated 21 ಜನವರಿ 2012, 9:00 IST

ದಾವಣಗೆರೆ: ~ಪಕ್ಷದಲ್ಲಿ ಸ್ವಲ್ಪಮಟ್ಟಿನ ಭಿನ್ನಾಭಿಪ್ರಾಯಗಳಿವೆ. ಅವುಗಳನ್ನು ಸರಿಮಾಡಿಕೊಳ್ಳುತ್ತೇವೆ. ಪಕ್ಷದಲ್ಲಿ ಕೆಲವರು ಶಿಸ್ತು ಮೀರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಪ್ರಮುಖರ ಸಮಿತಿ ಕರೆದು ತಡೆ ಹಾಕಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ತಿಳಿಸಿದರು.

ನಗರದ ಶಿವಾಜಿ ನಗರದ ದುರ್ಗಾಂಬಿಕಾ ವೃತ್ತದಲ್ಲಿ ನಿರ್ಮಿಸಿರುವ ಅಶ್ವಾರೂಢ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

~ಸದ್ಯ ಬಜೆಟ್ ಕುರಿತು ಚಿಂತನೆ ನಡೆಸಲಾಗುತ್ತಿದ್ದು, ಕಳೆದ ವರ್ಷಕ್ಕಿಂಥ ಈ ವರ್ಷ ಬಜೆಟ್ ಮೊತ್ತ ಶೇ. 10 ರಿಂದ 15ರಷ್ಟು ಹೆಚ್ಚಿಸಲಾಗುದು. ಪ್ರತ್ಯೇಕ ಯುವ ಬಜೆಟ್ ಮಂಡಿಸುವ ಕುರಿತು ಚಿಂತಿಸಿಲ್ಲ. ಆದರೆ, ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಲಾಗುವುದು~ ಎಂದರು.

ADVERTISEMENT

ಬಿಎಸ್‌ವೈ ವೈಯಕ್ತಿಕ ಪ್ರವಾಸ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಪಕ್ಷದಲ್ಲಿ ಯಾವುದೇ ಭಿನ್ನ ಮತವಿಲ್ಲ. ವೈಯಕ್ತಿಕ ಇಚ್ಚೆಯಂತೆ ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ. ಇದಕ್ಕೆ ಈಶ್ವರಪ್ಪ, ಸದಾನಂದಗೌಡರು ಸೇರಿಕೊಂಡರೆ ಅಭ್ಯಂತರವಿಲ್ಲ. ಸಮಾವೇಶ, ಸಭೆಗಳ ಮೂಲಕ ಪಕ್ಷವನ್ನು ಸಂಘಟಿಸುವ ಪ್ರಯತ್ನ ಮಾಡುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.