ADVERTISEMENT

ಸಂಶೋಧನೆ ಬಗ್ಗೆ ನಿರ್ಲಕ್ಷ್ಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST
ಸಂಶೋಧನೆ ಬಗ್ಗೆ ನಿರ್ಲಕ್ಷ್ಯ: ಪ್ರತಿಭಟನೆ
ಸಂಶೋಧನೆ ಬಗ್ಗೆ ನಿರ್ಲಕ್ಷ್ಯ: ಪ್ರತಿಭಟನೆ   

ಚಿಕ್ಕನಾಯಕನಹಳ್ಳಿ:  ರೈತರೊಬ್ಬರು ನಡೆಸಿರುವ ವೈಜ್ಞಾನಿಕ ಸಂಶೋ ಧನೆಯನ್ನು ಪರಾಮರ್ಶಿ ಸುವಲ್ಲಿ ಸರ್ಕಾರ ಹಾಗೂ ವಿಜ್ಞಾನಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ರೈತಸಂಘ ಹಾಗೂ ಹಸಿರುಸೇನೆ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಹಸಿರು ಸೇನೆ ಮುಖಂಡ ಕೆಂಕರೆ ಸತೀಶ್ ಮಾತನಾಡಿ, ವಾಯಭಾರ ಮಾಪನದ ದ್ರವದಲ್ಲಿ ವಿಶೇಷ ಜ್ಞಾನ ಅಡಗಿದೆ. ಇಲ್ಲಿ ನಡೆಯುವ ಎಲ್ಲ ಭೌತ ವಿದ್ಯಮಾನಗಳು ಸರಳ ತತ್ವದ ಸಂಬಂಧ ಹೊಂದಿದ್ದು, ಆಕಾಶಕಾಯ ಗಳ ಬಲಗಳ ಬಂಧನದಲ್ಲಿ ನಡೆಯು ತ್ತಿವೆ ಎಂದು ಸಂಶೋಧನೆ ನಡೆಸಿರುವ ತಾಲ್ಲೂಕಿನ ಮೇಲನಹಳ್ಳಿ ರೈತ ಜಿ.ಮಲ್ಲಿಕಾರ್ಜುನಯ್ಯ ಅವರು ಪುಸ್ತಕವನ್ನು ಹೊರತಂದಿದ್ದಾರೆ. ಆದರೆ ಈವರೆಗೆ ಸಂಶೋಧನೆಯನ್ನು ಪರಾಮರ್ಶಿಸಲು ಸರ್ಕಾರ ಹಾಗೂ ವಿಜ್ಞಾನಿಗಳು ಸೂಕ್ತರೀತಿಯಲ್ಲಿ ಸ್ಪಂದಿಸದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಆಪಾದಿಸಿದರು.

ನಗರದ ಕಾಲೇಜು, ಪ್ರೌಢಶಾಲೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಗೋಡೆಗಳ ಮೇಲೆ ಸ್ಥಳೀಯ ರೈತರೊಬ್ಬರು ಸಂಶೋಧಿಸಿದ ಭೌತಶಾಸ್ತ್ರದ ವಾಯುಭಾರ ನಿಯಮ ಆವಿಷ್ಕಾರದ ಮುಖ್ಯಾಂಶಗಳನ್ನು ಗೋಡೆಗಳ ಮೇಲೆ ಕರಪತ್ರಗಳನ್ನು ಅಂಟಿಸುವುದು ಹಾಗೂ ವಿದ್ಯಾರ್ಥಿಗಳಿಗೆ ಹಂಚುವ ಮೂಲಕ ಪ್ರಚಾರ ಆಂದೋಲನದ ನಡೆಸಿ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ ಸಂಘದ ಕಾರ್ಯಕರ್ತರು ಬೈಕ್‌ರ‌್ಯಾಲಿ ನಡೆಸಿದರು.

ರೈತ ವಿಜ್ಞಾನಿ ಮಲ್ಲಿಕಾರ್ಜುನಯ್ಯ, ತಿಮ್ಲಾಪುರದ ಶಂಕರಣ್ಣ, ಪ್ರಕಾಶ್, ಷಣ್ಮುಕಯ್ಯ, ಗಂಗಾಧರ್, ಜಗದೀಶ್, ಕೆ.ಪಿ.ಮಲ್ಲೇಶ್, ನಟರಾಜ್ ಮುಂತಾದವರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.