ADVERTISEMENT

ಸಿದ್ಧರಾಜಶ್ರೀ ಜಯಂತಿ: ರಕ್ತದಾನ ಶಿಬಿರ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಹುಮನಾಬಾದ್: ಸರ್ವಧರ್ಮ ಸಮನ್ವಯತೆಗೆ ಹೆಸರಾದ ಇಲ್ಲಿನ ಮಾಣಿಕನಗರ ಮಾಣಿಕಪ್ರಭು ಸಂಸ್ಥಾನದ ಪೀಠಾಧಿಪತಿ ಲಿಂ. ಸಿದ್ಧರಾಜ ಶ್ರೀಗಳ 74ನೇ ಜಯಂತಿ ಆಚರಣೆ ಸ್ಮರಣಾರ್ಥ ಮಾಣಿಕ ಪಬ್ಲಿಕ್ ಶಾಲೆಯಲ್ಲಿ ಬುಧವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾನ ಪೀಠಾಧಿಪತಿ ಜ್ಞಾನರಾಜಶ್ರೀ `ರಕ್ತದಾನವು ಜೀವದಾನಕ್ಕೆ ಸಮಾನ. ಅಪಘಾತಕ್ಕೀಡಾದ ಮತ್ತು ಕ್ಯಾನ್ಸರ್, ಹಿಮೋಫಿಲಿಯಾ, ಥ್ಯಾಲಸೀಮಿಯಾರೋಗಿಗಳು, ಗರ್ಭಿಣಿಯರು ರಕ್ತದಾನಿಗಳನ್ನು ಅವಲಂಬಿಸಿರುತ್ತಾರೆ~ ಎಂದರು.

ಸಿದ್ಧರಾಜ ಶ್ರೀಗಳ ಜನ್ಮದಿನ ಆಚರಣೆ ಸ್ಮರಣಾರ್ಥ ರಕ್ತದಾನ ಶಿಬಿರ ಏರ್ಪಡಿಸಿರುವ ಮಾಣಿಕ ಪಬ್ಲಿಕ್ ಶಾಲೆ ಸಿಬ್ಬಂದಿ ಕಾರ್ಯ ಶ್ಲಾಘನೀಯ , ಇಂಥ ಜನೋಪಯೋಗಿ ಚಟುವಟಿಕೆ ನಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದು ಸಂಸ್ಥಾನದ ಚೇತನರಾಜ ಪ್ರಭು ತಿಳಿಸಿದರು.
 
ಪ್ರಾಚಾರ್ಯರಾದ ಸುಮಂಗಲಾ ಜಹಾಗಿರ್ದಾರ, ಆರ್.ಎನ್. ಜಾಧವ್, ಕೌಸ್ತುಭ ಜಹಾಗಿರ್ದಾರ, ಬೀದರ್ ಹಿರಿಯ ಆರೋಗ್ಯ ಶುಶ್ರೂಷಕಿ ಲಲಿತಾ, ಡಾ.ರಿತೇಶ ಸುಲೇಗಾಂವಕರ್, ಡ್ಯಾನಿಯೇಲ್, ಮಹೇಶ, ಆರೀಫ್‌ಅಲಿ, ಸಮಾಜ ಕಾರ್ಯಕರ್ತ ಭೀಮರಾವ ಪೊಲೀಸ್ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.