ಮೈಸೂರು: ಅನ್ಯ ಜಾತಿ ಪುರುಷನೊಂದಿಗೆ ಮದುವೆಯಾದ ಸಹೋದರಿಯೊಂದಿಗೆ ಜಗಳ ತೆಗೆದು ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಮಹದೇವನನ್ನು ಪೊಲೀಸರು ಬುಧವಾರ ಮಧ್ಯರಾತ್ರಿ ಬಂಧಿಸಿದ್ದಾರೆ.
ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗುವಾಗ ಮಹದೇವನನ್ನು ಪೊಲೀಸರು ಬಂಧಿಸಿ ನಂತರ ನಜರ್‌ಬಾದ್ ಪೊಲೀಸರ ವಶಕ್ಕೆ ನೀಡಿದರು. ಮಹದೇವನನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿ, ಐದು ದಿನಗಳವರೆಗೆ ಪೊಲೀಸ್ ವಶಕ್ಕೆ ಪಡೆಯಲಾಯಿತು.
`ಕೊಲೆ ನಡೆದ ದಿನದಂದು ಹುಣಸೂರಿನ ಶಿವ ಎಂಬಾತ ತನ್ನ ಜೊತೆಗಿದ್ದ~ ಎಂದು ಮಹದೇವ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. `ಆದರೆ ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾನೆ ಎಂಬುದರ ಬಗ್ಗೆ ಇನ್ನೂ ಸುಳಿವು ನೀಡಿಲ್ಲ, ವಿಚಾರಣೆ ಮುಂದುವರಿದಿದೆ~ ಎಂದು ಪೊಲೀಸರು ತಿಳಿಸಿದರು.
ಚಾಮರಾಜನಗರ ತಾಲ್ಲೂಕಿನ ಕುದೇರು ಸರ್ಕಾರಿ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದ ಡಿ.ಕೆ.ಸ್ಮೃತಿ ವಾಸವಿದ್ದ ಆಲನಹಳ್ಳಿ ಬಡಾವಣೆಯ ಬಾಡಿಗೆ ಮನೆಗೆ ಕಳೆದ ಸೋಮವಾರ ಮಧ್ಯರಾತ್ರಿ ತೆರಳಿದ ಮಹದೇವ ಮದುವೆ ವಿಚಾರವಾಗಿ ಜಗಳ ತೆಗೆದು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದ.
ತುಮಕೂರು ವಿಶ್ವವಿದ್ಯಾನಿಲಯದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾದ ಸುದೀಪ್‌ಕುಮಾರ್ ಮತ್ತು ಸ್ಮೃತಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.