ADVERTISEMENT

ಸ್ವರತಾರಾ ಲೋಕದಲ್ಲಿ ಮಿಂಚಿದ ಸಿತಾರ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 9:55 IST
Last Updated 7 ಫೆಬ್ರುವರಿ 2011, 9:55 IST

ಹುಬ್ಬಳ್ಳಿ: ನಗರದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ದೇಶಪಾಂಡೆ ಫೌಂಡೇಷನ್ ಕಚೇರಿ ಆವರಣ ಭಾನುವಾರ ತಾರೆಗಳಿಂದಲೇ ತುಂಬಿತ್ತು. ಅಲ್ಲೆಲ್ಲ ಸ್ವರಗಳ ಮೋಹಕ ಅಲೆ ಎದ್ದಿತ್ತು. ರಾಗ-ತಾಳ-ಲಯ, ಮೂಲೆ ಮೂಲೆಯಲ್ಲಿ ಲಾಸ್ಯವಾಡಿತ್ತು. ದಿನವಿಡೀ ನಡೆದ ಸಂಗೀತ ಸ್ಪರ್ಧೆಯಿಂದ ಸೃಷ್ಟಿಯಾಗಿದ್ದ ಸ್ವರಗಳ ತಾರಾ ಲೋಕದಲ್ಲಿ ಸಂಜೆಗತ್ತಲಲ್ಲಿ ಮಿಂಚಿದ್ದು ಐದು ಮಂದಿ ಸಿತಾರ್ ಕಲಾವಿದರು.ದೇಶಪಾಂಡೆ ಫೌಂಡೇಷನ್‌ನ ಫೆಲೋಷಿಪ್ ಪ್ರೋಗ್ರಾಮ್ ಅಡಿಯಲ್ಲಿ ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಷನ್ ಹಮ್ಮಿಕೊಂಡಿದ್ದ ಶಾಸ್ತ್ರೀಯ ಸಂಗೀತ ಸ್ಪರ್ಧೆ, ಅಪರೂಪದ ವಾತಾವರಣವನ್ನು ನಿರ್ಮಾಣ ಮಾಡಿತ್ತು.

 ರಾಗಾಲಾಪದ ಮೋಡಿಯ ನಡುವೆ ವಾದ್ಯಗಳ ಲಯ, ಮೋಹಕ ಸ್ವರ ಸಾಮ್ರಾಜ್ಯವನ್ನು ಅಲ್ಲಿ ಸೃಷ್ಟಿಸಿತ್ತು.ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಪ್ರೋತ್ಸಾಹಿಸುವ ಹಾಗೂ ಸಾರ್ವಜನಿಕರಿಗೆ ಸಂಗೀತದ ಒಲವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಪರ್ಧಾಳುಗಳ ಸಂಖ್ಯೆ ಅರ್ಧ ಶತಕ ದಾಟಿತ್ತು. ಮೂವರು ಅಂಧರು ಕೂಡ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರತಿಭೆ ಮೆರೆದಿದ್ದರು.ಇಡೀ ದಿನ ನಡೆದ ಕಾರ್ಯಕ್ರಮದ ಹಿಂದೆ ಬಹುಮಾನ ಗೆಲ್ಲುವ ಛಲದ ಹಿನ್ನೆಲೆ ಇದ್ದರೆ ಕೊನೆಗೆ ನಡೆದ ಸಿತಾರ್ ವಾದನ ಮನಸೂರೆಗೊಂಡಿತು.ಐದು ಮಂದಿ ಎಳೆಯ ಕಲಾವಿದರು ನಡೆಸಿಕೊಟ್ಟ ಕಾರ್ಯಕ್ರಮ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು.

ಇವರುಧಾರವಾಡದಕಲಕೇರಿಯಕಲಕೇರಿಸಂಗೀತವಿದ್ಯಾಲಯದ’ವಿದ್ಯಾರ್ಥಿಗಳು.ತುಕಾರಚೌಹಾಣ್,ಗಾಮಣ್ಣ ಹುಲಿಕಟ್ಟಿ, ದೂಲು ಅದವಳ್ಕರ್, ವೀರೇಶ ಈರಪ್ಪನವರ್ ಹಾಗೂ ಸಂಗೀತ ಚೌದರಿ ಈ ‘ಪಂಚ ಸಿತಾರಗಳು’.ಇವರ ಪೈಕಿ ವೀರೇಶ ಎಂಟನೇ ತರಗತಿ ಓದುತ್ತಿದ್ದರೆ.

ಗಾಮಣ್ಣಹಾಗೂದೂಲುಪಿಯುಸಿವಿದ್ಯಾರ್ಥಿಗಳು.ತಬಲಾಸಾಥ್ನೀಡಿದದಯಾನಂದ ಸುತಾರ ಪದವಿ ವಿದ್ಯಾರ್ಥಿ ಹಾಗೂ ಪ್ರಶಾಂತ ಹಾರೋಗೇರಿಮಠ ಹತ್ತನೇ ತರಗತಿ ವಿದ್ಯಾರ್ಥಿ. 
ಕೆ.ಸಿ.ಡಿ. ಕಾಲೇಜಿನ ಪ್ರಾಂಶುಪಾಲ ಪಂ. ಹಮೀದ್ ಖಾನ್ ಅವರ ಶಿಷ್ಯಂದಿರಾರ ಇವರ ‘ಪಂಚ ಸಿತಾರ್’ ಕಾರ್ಯಕ್ರಮ, ಏಳು ತಂತಿಗಳ ವಾದ್ಯದ ನಾದ ಮಾಧುರ್ಯವನ್ನು ಪ್ರೇಕ್ಷಕರ ಹೃದಯಕ್ಕೆ ಧಾರೆ ಎರೆಯುವಲ್ಲಿ ಯಶಸ್ವಿಯಾಯಿತು.

ಮಧುರ, ಲಲಿತ ರಾಗವಾದ ಕೀರವಾಣಿಯಲ್ಲಿ ಅರ್ಧ ತಾಸು ಕಾರ್ಯಕ್ರಮ ಪ್ರಸ್ತುತಪಡಿಸಿದ ಭರವಸೆಯ ಕಲಾವಿದರ ಧ್ರುತ್ ಗತ್, ಪ್ರೇಕ್ಷಕರ ಹೃದಯವನ್ನು ಅಷ್ಟೇ ವೇಗದಲ್ಲಿ ಆಕ್ರಮಿಸಿಕೊಳ್ಳುವಲ್ಲಿ ಸಫಲವಾಯಿತು. ಕೃಷ್ಣ ಸುತಾರ ಸಹಗಾಯನದ ‘ಸಾಥ್’ ನೀಡಿದರು.
...
.ಬೆಳಿಗ್ಗೆ ನಡೆದ ಸ್ಪರ್ಧೆಯಲ್ಲಿ ಶಾಸ್ತ್ರೀಯ ಗಾಯನ, ಲಘು ಸಂಗೀತ ಹಾಗೂ ವಾದ್ಯಗಳೆಂಬ ಮೂರು ವಿಭಾಗಗಳಿದ್ದವು. ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ ಹಾಗೂ ಬೆಳಗಾವಿಯ ವಿವಿಧ ಸಂಗೀತ ಶಾಲೆಗಳಿಂದ ಸ್ಪರ್ಧಾಳುಗಳು ಆಗಮಿಸಿದ್ದರು.  ಬಸವರಾಜ ಹಿರೇಮಠ ಹಾಗೂ ಸಂತೋಷ ಒಡೆಯರ (ತಬಲಾ), ಎಚ್.ಆರ್. ಪಾಟೀಲ (ಹಾರ್ಮೋನಿಯಂ) ಸ್ಪರ್ಧಾಳುಗಳಿಗೆ ಸಾಥ್ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.