ಮದ್ದೂರು: ಹಾಲಿನ ಖರೀದಿ ದರವನ್ನು ಇಳಿಸಿರುವುದನ್ನು ಖಂಡಿಸಿ ಸೋಮವಾರ ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರು ಗೆಜ್ಜಲಗೆರೆ ಮನ್‌ಮುಲ್ ಡೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಮನ್‌ಮುಲ್ ಆಡಳಿತ ಮಂಡಳಿ ವಿರುದ್ಧ ಘೋಷಣೆ ಮೊಳಗಿಸಿದ ಕಾರ್ಯಕರ್ತರು, ಬೆಳಿಗ್ಗೆ 11ಗಂಟೆಯಿಂದ ಸಂಜೆ 4ಗಂಟೆಯವರೆಗೆ ಧರಣಿ ನಡೆಸಿದರು. ನಂತರ ಮನ್‌ಮುಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಿದರು.
ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎಚ್. ಕೆ.ರಮೇಶರಾಜು ಮಾತನಾಡಿ, ಕುಡಿಯುವ ನೀರಿಗೆ 20ರಿಂದ 22ರೂಪಾಯಿ ದರ ನಿಗದಿ ಮಾಡಿರುವಾಗ ಹಾಲಿನ ದರವನ್ನು 2ರೂಪಾಯಿ ಇಳಿಕೆ ಮಾಡಿರುವುದು ಸರಿಯಲ್ಲ. ಬರಗಾಲ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಮೇವಿಗೆ ತೊಂದರೆಯಾಗಿದ್ದು, ಪಶು ಆಹಾರದ ಬೆಲೆಯು ದುಪ್ಪಟ್ಟು ಏರಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ತಾಲ್ಲೂಕು ಅಧ್ಯಕ್ಷ ಹೆಮ್ಮನಹಳ್ಳಿ ಅಶ್ವಥ್ ಮಾತನಾಡಿ, ವಿದೇಶದಿಂದ ಆಮದು ಆಗುವ ಹಾಲು ಇನ್ನಿತರ ಉತ್ಪಾದನೆಯ ಆಮದು ವಸ್ತು ನಿಷೇಧಿಸಬೇಕು. ಅಲ್ಲದೇ ಆಮದಿನ ಮೇಲೆ ಹೆಚ್ಚಿನ ಸುಂಕ ವಿಧಿಸಬೇಕು. ಎಂದು ವಿನಂತಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.