ADVERTISEMENT

ಹಿಪ್ಪುನೇರಳೆಗೆ ಹಿಟ್ಟುತಿಗಣೆ ಕಾಟ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 19:30 IST
Last Updated 2 ಜೂನ್ 2011, 19:30 IST

ಹಳೇಬೀಡು: ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಹಿಪ್ಪುನೇರಳೆ ಮಾತ್ರವಲ್ಲದೆ 70 ವಿವಿಧ ಸಸ್ಯಗಳಿಗೆ ಹಿಟ್ಟುತಿಗಣೆ ಕೀಟ (ಪಪಾಯ ಮಿಲಿಬಗ್) ಆಕ್ರಮಣ ಮಾಡಿದೆ. ರೈತರು ಈ ಕೀಟ ನಿವಾರಣೆಗೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಹಾಯ ರೇಷ್ಮೆ ನಿರ್ದೇಶಕ ಎಂ.ಆರ್.ಮುರುಳೀಧರ್ ತಿಳಿಸಿದರು.

ರಾಜಗೆರೆ ಗ್ರಾಮದ ಶಿವಣ್ಣ ಅವರ ಹಿಪ್ಪುನೇರಳೆ ತೋಟದಲ್ಲಿ ರೇಷ್ಮೆ ಇಲಾಖೆ ಆಶ್ರಯದಲ್ಲಿ ಗುರುವಾರ ನಡೆದ ರೇಷ್ಮೆ ಕೃಷಿ ಪ್ರಾತ್ಯಕ್ಷಿಕೆ ಹಾಗೂ ಸುವರ್ಣ ಭೂಮಿ ಫಲಾನುಭವಿಗಳಿಗೆ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು. ರೇಷ್ಮೆ ನಿರೀಕ್ಷಕ ಎಂ.ನಾರಾಯಣಸ್ವಾಮಿ, ರೈತರಾದ ಶಾಂತೇಗೌಡ, ಸುರೇಶ್ ಈ ಸಂದರ್ಭದಲ್ಲಿ ಮಾತನಾಡಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT