ADVERTISEMENT

ಹುಬ್ಬಳ್ಳಿಯಲ್ಲಿ ಆಕರ್ಷಕ ನೃತ್ಯ ಸಂಜೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 10:15 IST
Last Updated 7 ಫೆಬ್ರುವರಿ 2011, 10:15 IST

ಹುಬ್ಬಳ್ಳಿ: ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಗುರು ವಿದುಷಿ ಸಹನಾ ಭಟ್ ಅವರಿಂದ ಭಾನುವಾರ ಸಂಜೆ ಸವಾಯಿ ಗಂಧರ್ವ ಹಾಲ್‌ನಲ್ಲ ಆಕರ್ಷಕನೃತ್ಯಕಾರ್ಯಕ್ರಮನಡೆಯಿತು.

‘ಕಾದಿರುವಳು ಶಬರಿ’ ಏಕ ವ್ಯಕ್ತಿ ಪ್ರದರ್ಶನ ನೀಡಿದ ಅವರು ಪ್ರೇಕ್ಷಕರನ್ನು ಹಿಡಿದಿಟ್ಟರು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಸೂಜಿ ಬಿದ್ದರೂ ಕೇಳುತ್ತಿತ್ತು. ಸಹನಾ ನೃತ್ಯಕ್ಕೆ ಹಿನ್ನೆಲೆ ಗಾಯನ ನೀಡಿದ ವಿದ್ವಾನ್ರ ಮೇಶಚಡಗಅವರ ಹಾಡುಗಾರಿಕೆಸಭಿಕರನ್ನುಕಟ್ಟಿಹಾಕಿತ್ತು.ಇದಕ್ಕೂಮುನ್ನಕಲಾಕೇಂದ್ರದವಿದ್ಯಾರ್ಥಿಗಳಿಂದನಡೆದನೃತ್ಯಕಾರ್ಯಕ್ರಮಪ್ರೇಕ್ಷಕರಚಪ್ಪಾಳೆ ಗಿಟ್ಟಿಸಿತು.

ಪುರಸ್ಕಾರ: ಕಾರ್ಯಕ್ರಮದಲ್ಲಿ ನೃತ್ಯ ಕೇಂದ್ರದ ವಿದ್ಯಾರ್ಥಿಗಳಾದ ದೀಪಾ ಆರ್.ಹೆಗಡೆ ಹಾಗೂ ಸಂಪ್ರೀತಾ ಎಂ.ಭಟ್ ಅವರಿಗೆ ಪ್ರಸಕ್ತ ಸಾಲಿನ ರವಿ ದಾತಾರ್ ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ಈ ಪುರಸ್ಕಾರವು ತಲಾ ಮೂರು ಸಾವಿರ ರೂಪಾಯಿ ನಗದು ಹಾಗೂ ಪ್ರಶಂಸಾ ಪತ್ರವನ್ನು ಒಳಗೊಂಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಶಾಸಕ ಸಂತೋಷ ಲಾಡ, ಸಂಗೀತ ನೃತ್ಯ ಅಕಾಡೆಮಿ ಸದಸ್ಯ ವಸಂತ ಸವದಿ, ಗಂಗೂಬಾಯಿ ಹಾನಗಲ್ ಮ್ಯುಸಿಕ್ ಫೌಂಡೇಷನ್ ಅಧ್ಯಕ್ಷ ಮನೋಜ ಹಾನಗಲ್, ನಿರ್ಮಲಾ ದಾತಾರ್ ಮೊದಲಾದವರು ಉಪಸ್ಥಿತರಿದ್ದರು. ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.