ADVERTISEMENT

ಹೆಣ್ಣಿನ ಸೃಷ್ಟಿ- ವಿವಿಧ ಸಂಸ್ಕೃತಿಗಳಲ್ಲಿ ನಾನಾ ಕಥಾನಕ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಗಂಗಾವತಿ: ಪ್ರಕೃತಿಯಲ್ಲಿ ಹೆಣ್ಣು ಸೃಷ್ಟಿಯಾಗಿದ್ದೆ ಒಂದು ಕೌತುಕದ ಸಂಗತಿ. ಹೆಣ್ಣಿನ ಸೃಷ್ಟಿಯ ಬಗ್ಗೆ ವಿಶ್ವದ ನಾನಾ ಸಂಸ್ಕೃತಿಯಲ್ಲಿ ವಿಭಿನ್ನ ಕಥಾನಕಗಳಿವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ. ಶೈಲಜಾ ಹಿರೇಮಠ ಹೇಳಿದರು.

ನಗರದ ಆನೆಗೊಂದಿ ರಸ್ತೆಯಲ್ಲಿರುವ ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಧಾಕೃಷ್ಣ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಸಹಜವಾಗಿ ಪ್ರಕೃತಿ, ಮೃದು, ಸೌಂದರ್ಯ, ಕೋಮಲತೆ, ನವಿರು ಮೊದಲಾದವುಗಳಿಗೆ ಮಹಿಳೆಯನ್ನು ಹೋಲಿಸಲಾಗುತ್ತದೆ ಎಂದು ಹಲವು ವಿವರಣೆ ನೀಡಿದರು. ಆದಿ ಪ್ರಾಚೀನತೆಯಿಂದ ಇಂದಿನ ಅಧುನಿಕ ಕಾಲದವರೆಗಿನ ಹೆಣ್ಣನ್ನು ದೈಹಿಕ ನೆಲೆಯಿಂದಲೇ ಗುರುತಿಸಲಾಗುತ್ತಿದೆಯೆ ವಿನಹ ಅವಳ ಬೌದ್ಧಿಕ ವಿಕಾಸನ ಮೇಲಲ್ಲ. ಇಂದಿನ ಸರ್ಕಾರಗಳು ಕೂಡ ವಯಸ್ಕಳನ್ನು ಗುರುತಿಸಲು ಪ್ರಾಚೀನ ವಿಧಾನವನ್ನೆ ಅನುಸರಿಸುತ್ತಿವೆ ಎಂದು ವಿಷಾದಿಸಿದರು. 

ತಹಶೀಲ್ದಾರ್ ಸಿ.ಡಿ. ಗೀತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಹೆಣ್ಣು ಪುರುಷನ ಸರಿಸಮಾನ ಸ್ಥಾನಕ್ಕೆ ಏರಿದ್ದಾಳೆ. ಆರ್ಥಿಕ ಸ್ವಾವಲಂಬನೆ ಸಾಧಿಸದ ಹೊರತು ಹೆಣ್ಣು ಸ್ವತಂತ್ರಳಲ್ಲ ಎಂಬ ಕೊರಗು ಇಂದಿನ ಬಹುತೇಕ ಅಧುನಿಕ ಮಹಿಳೆಯರನ್ನು ಕಾಡುತ್ತಿದೆ ಎಂದರು.

ಪ್ರಾಚಾರ್ಯ ಬಿ.ಕೆ. ವೆಂಟಕರಮಣ ರೆಡ್ಡಿ, ಸಹ ಪ್ರಾಧ್ಯಾಪಕರಾದ ಹಸನಮಿಯಾ, ವೈ.ಬಿ. ಅಂಗಡಿ, ಐ.ಬಿ. ಅಂಗಡಿ ಇದ್ದರು. ಸರಸ್ವತಿ ಜಾಪನೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಟಗಿ ಶೀಬಾರಾಣಿ ಸ್ವಾಗತಿಸಿದರು. ಉಪನ್ಯಾಸಕ ಜಗದೀಶ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.