ADVERTISEMENT

ಸ್ಥಳೀಯರಿಗೆ ಉದ್ಯೋಗ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 9:37 IST
Last Updated 7 ಜನವರಿ 2018, 9:37 IST

ಕಲಬುರ್ಗಿ: ನಗರ ಹೊರವಲಯದ ನಂದೂರು ಬಳಿ ಇರುವ ಮಾನಸ ದೇವಿ ಬಿಸ್ಕತ್ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಒತ್ತಾಯಿಸಿ ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಘೋಷಣೆ ಕೂಗಿದರು.

‘ಕಂಪನಿ ಆರಂಭವಾಗಿ 3 ವರ್ಷಗಳಾಗಿವೆ. ಆದರೆ ಕನ್ನಡಿಗರಿಗೆ ಶೇ 30ರಷ್ಟು ಮಾತ್ರ ಉದ್ಯೋಗ ನೀಡಲಾಗಿದ್ದು, ಅನ್ಯ ರಾಜ್ಯದವರಿಗೆ ಹೆಚ್ಚಿನ ಉದ್ಯೋಗ ನೀಡಲಾಗಿದೆ. ಸ್ಥಳೀಯರಿಂದ 12 ಗಂಟೆ ಕೆಲಸ ಮಾಡಿಸಿಕೊಂಡು ತಿಂಗಳಿಗೆ ₹5 ಸಾವಿರ ಸಂಬಳ ನೀಡುತ್ತಿದ್ದಾರೆ.

ಆದರೆ ಅನ್ಯ ರಾಜ್ಯದವರಿಗೆ ₹9 ಸಾವಿರ ಸಂಬಳ ಕೊಡುತ್ತಿದ್ದಾರೆ. ಆದ್ದರಿಂದ ಕಂಪನಿ ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಸೇನೆಯ ಪದಾಧಿಕಾರಿಗಳಾದ ಅಮೃತ ಪಾಟೀಲ ಸಿರನೂರ, ರವಿ ಒಂಟಿ, ಸಿದ್ದು ಕಂದಗಲ್, ಭರತ ಭೂಷಣ, ಶ್ರೀನಿವಾಸ ಶೇಷಗಿರಿ, ವಸಂತ, ಆಕಾಶ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.