ADVERTISEMENT

ಉತ್ತರಕ್ಕಾಗಿ ಉಪವಾಸ ಬೆಂಬಲಿಸಿ ಬೈಕ್ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2012, 7:30 IST
Last Updated 13 ಮಾರ್ಚ್ 2012, 7:30 IST

ಬಾಗಲಕೋಟೆ: ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಶಾಸಕ ಬಿ. ಶ್ರಿರಾಮುಲು ಇದೇ 13 ರಿಂದ 14ರ ವರೆಗೆ ಗದಗದಲ್ಲಿ ಹಮ್ಮಿಕೊಂಡಿ ರುವ `ಉತ್ತರಕ್ಕಾಗಿ ಉಪವಾಸ~ ಸತ್ಯಾಗ್ರಹದ ಬೆಂಬಲಾರ್ಥ ವಾಗಿ ಸೋಮವಾರ ನಗರದಲ್ಲಿ ಶ್ರಿರಾಮುಲು ಅಭಿಮಾನಿಗಳು ಬೈಕ್ ರ‌್ಯಾಲಿ ನಡೆಸಿದರು.

ನಗರದ ಬಸವೇಶ್ವರ ವೃತ್ತದಿಂದ ಆರಂಭಗೊಂಡ ಬೈಕ್ ರ‌್ಯಾಲಿ ಬಸವೇಶ್ವರ ಕಾಲೇಜು ರಸ್ತೆ ಮೂಲಕ ಟೀಕಿನಮಠ, ಬಸವೇಶ್ವರ ಬ್ಯಾಂಕ್, ವಲ್ಲಭಭಾಯಿ ಚೌಕಿ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ವಿದ್ಯಾಗಿರಿ ಮತ್ತು ನವನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಎಪಿಎಂಸಿ ವೃತ್ತದಲ್ಲಿ ಮುಕ್ತಾಯಗೊಂಡಿತು.
ರಾಜ್ಯದ  ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಯಾಗಬೇಕು. ಉತ್ತರ ಕರ್ನಾಟಕ ಭಾಗಕ್ಕೂ ಅಭಿವೃದ್ಧಿ ಯೋಜನೆಗಳು ಹರಿದುಬರಬೇಕು.
 
ಅತಿವೃಷ್ಟಿ, ಅನಾವೃಷ್ಟಿಗಳನ್ನು ಜನರು ಸಮರ್ಥವಾಗಿ ಎದುರಿಸಿ ನಿಲ್ಲುವಂತಹ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿಕೊಡ ಬೇಕು ಎಂಬ ಉದ್ದೇಶದಿಂದ ಕೈಗೊಂಡಿ ರುವ ಶ್ರೀರಾಮುಲು ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಲಾಯಿತು. ಶ್ರಿರಾಮುಲು ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಹಂಗರಗಿ, ಎಸ್.ಗೌಡರ, ಬಸವರಾಜ ಗವಿಮಠ, ಸುರೇಶ ವಾಲಿಕಾರ, ರಾಜಶೇಖರ ಘಂಟಿ ರ‌್ಯಾಲಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.