ADVERTISEMENT

ಉದ್ದೇಶಿತ ನವನಗರ ಬಸ್ ನಿಲ್ದಾಣ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 8:25 IST
Last Updated 20 ಅಕ್ಟೋಬರ್ 2012, 8:25 IST

ಬಾಗಲಕೋಟೆ: ನವನಗರದಲ್ಲಿ ರೂ. 8 ಕೋಟಿ ವೆಚ್ಚದಲ್ಲಿ ನಿರ್ಮಾಣ ವಾಗಲಿರುವ ಹೊಸ ಬಸ್ ನಿಲ್ದಾಣ ಸ್ಥಳಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜಕುಮಾರ ಜೈನ್ ನೇತೃತ್ವದ ಅಧಿಕಾರಿಗಳ ತಂಡ, ಶಾಸಕ ವೀರಣ್ಣ ಚರಂತಿಮಠ ಅವರೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. 

 ಹೊಸ ಬಸ್ ನಿಲ್ದಾಣವನ್ನು ಶೀಘ್ರ ನಿರ್ಮಿಸಿ ಜನಸೇವೆಗೆ ಅಣಿಗೊಳಿ ಸಬೇಕು.  ರಾಜ್ಯದಲ್ಲಿಯೇ ಮಾದರಿಯ ನಿಲ್ದಾಣವಾಗಿ ಕಾಲಮಿತಿಯಲ್ಲಿ ಪೂಣರ್ರ್ಗೊಳಿಸಲು ಚರಂತಿಮಠ ಸಲಹೆ ನೀಡಿದರು. ವ್ಯಾಪಾರ ನಡೆಸಲು 20 ಅಂಗಡಿಗಳುಳ್ಳ ಕಾಂಪ್ಲೆಕ್ಸ್‌ನ್ನು ನಿರ್ಮಿಸಿ ವ್ಯಾಪಾರಸ್ಥರಿಗೆ ಅವಕಾಶ ಕಲ್ಪಿಸಬೇಕೆಂದು ಅವರು ಹೇಳಿದರು. 

 ಹಳೆ ಬಸ್ ನಿಲ್ದಾಣದಲ್ಲಿ ಸಂಸ್ಥೆಯ ಒಡೆತನದಲ್ಲಿರುವ ಜಾಗೆಯಲ್ಲಿ ಕಾಂಪ್ಲೆಕ್ಸ್ ಕಟ್ಟಿದ್ದು ಪ್ರತಿ ತಿಂಗಳು ಸಂಸ್ಥೆಗೆ ಆದಾಯ ಬರುತ್ತಿದೆ, ಇದರಿಂದ ವ್ಯಾಪಾರಕ್ಕೂ ಅನುಕೂಲ ವಾಗಿ ಅನೇಕರಿಗೆ ಬದುಕಿನ ಮೂಲವಾಗಿ ನೆರವಾಗಿದೆ ಎಂದು ಅವರು ಹೇಳಿದರು. 

ಸಾರಿಗೆ ಸಂಸ್ಥೆಯ ಮುಖ್ಯ ಎಂಜನಿಯರ್ ಉಮಾಶಂಕರ, ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿ ರಮೇಶ ಘಟಕ ವ್ಯವಸ್ಥಾಪಕ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.