ADVERTISEMENT

ಕಠಿಣ ಪರಿಶ್ರಮದಿಂದ ಯಶ: ಶಿರೋಳ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 6:35 IST
Last Updated 4 ಜೂನ್ 2011, 6:35 IST

ಬಾಗಲಕೋಟೆ:  ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ಶ್ರದ್ಧೆ, ಸಮಯಪಾಲನೆ ಹಾಗೂ ಕಠಿಣ ಪರಿಶ್ರಮ ಅತ್ಯಗತ್ಯ ಎಂದು ಎಸ್.ಸಿ. ನಂದಿಮಠ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ವಿ.ಆರ್.ಶಿರೋಳ ಹೇಳಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಎಸ್.ಸಿ.ನಂದಿಮಠ ಕಾನೂನು ಮಹಾವಿದ್ಯಾಲಯದ ಲೀಡ್ ಘಟಕದ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಕಲಾಂ, ಅಣ್ಣಾ ಹಜಾರೆ ಅವರು ಉನ್ನತ ಸಾಧನೆ ಮಾಡಲು ಅವರ ಕುಟುಂಬದ ಹಿನ್ನೆಲೆ ಅಥವಾ ಶ್ರೀಮಂತಿಕೆ ಕಾರಣವಲ್ಲ; ಅವರ ಪರಿಶ್ರಮದಿಂದ ಅವರ ಮೇಲೆ ಬರಲು ಸಾಧ್ಯವಾಯಿತು ಎಂದು ವಿವರಿಸಿದರು.
ಎಬಿವಿಪಿ ಜಿಲ್ಲಾ ಪ್ರಮುಖ ಬಸವರಾಜ ಕುಬಕಡ್ಡಿ ಮತ್ತಿತರರು  ಉಪಸ್ಥಿತರಿದ್ದರು.

ನಗರ ಉಪಾಧ್ಯಕ್ಷ ಡಾ.ಜಗನ್ನಾಥ ಚವಾಣ ಸ್ವಾಗತಿಸಿದರು. ಮಹೇಶ್ವರಿ ಭದ್ರಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಶ್ರೀದೇವಿ ಸೂಡಿಶೆಟ್ಟರ ವಂದಿಸಿದರು.

ಆರೋಗ್ಯವಂತ ಮಗು ಸ್ಪರ್ಧೆ ನಾಳೆ
ಬಾಗಲಕೋಟೆ: ಬವಿವ ಸಂಘದ ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಭಾನುವಾರ(ಜೂ.5) ಬೆಳಿಗ್ಗೆ 10ರಿಂದ ಅಕ್ಕನಬಳಗದಲ್ಲಿ `ಆರೋಗ್ಯವಂತ ಮಗು~ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಆಸಕ್ತ ಪಾಲಕರು ಅಂದು ಬೆಳಿಗ್ಗೆ 9ರಿಂದ 10 ಗಂಟೆಯೊಳಗೆ 50 ರೂಪಾಯಿ ಶುಲ್ಕವನ್ನು ಭರಿಸಿ ಮಗುವಿನ ಹೆಸರು ನೋಂದಾಯಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸುವ ಮಗುವಿನ ಲಸಿಕೆ ಮಾಹಿತಿಪತ್ರವನ್ನು ಕಡ್ಡಾಯವಾಗಿ ತರಬೇಕು ಎಂದು ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ರಾಜೇಶ್ವರಿ ಕಂಠಿ(9535210290) ಅಥವಾ ನಂದಾ ಪಾಟೀಲ(9844998221) ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.