ADVERTISEMENT

ಕೂಡಲಸಂಗಮ ಅಭಿವೃದ್ಧಿಗೆ ₹139 ಕೋಟಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2017, 7:47 IST
Last Updated 8 ಜುಲೈ 2017, 7:47 IST
ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮ ಅಭಿವೃದ್ಧಿಗೆ ಸಿದ್ಧಪಡಿಸಿದ ನೀಲ ನಕ್ಷೆ
ದೆಹಲಿ ಅಕ್ಷರಧಾಮ ಮಾದರಿಯಲ್ಲಿ ಕೂಡಲಸಂಗಮ ಅಭಿವೃದ್ಧಿಗೆ ಸಿದ್ಧಪಡಿಸಿದ ನೀಲ ನಕ್ಷೆ   

ಕೂಡಲಸಂಗಮ: ಬಸವಣ್ಣನ ವಿಚಾರ ಗಳನ್ನು ಜಗತ್ತಿಗೆ ಬಿತ್ತರಿಸುವ ಉದ್ದೇಶ ದಿಂದ ಕೂಡಲಸಂಗಮ, ಬಸವನ ಬಾಗೇವಾಡಿ ಹಾಗೂ ಚಿಕ್ಕ ಸಂಗಮದ ಅಭಿವೃದ್ಧಿಗೆ ಸರ್ಕಾರ ₹139.61 ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿ, ಅನುದಾನ ಬಿಡುಗಡೆ ಮಾಡಿರುವುದು ಬಸವ ಭಕ್ತರಿಗೆ ಸಂತಸ ಉಂಟು ಮಾಡಿದೆ.

ಲಿಂಗಾಯತರ ಧರ್ಮ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದ ಈ ಸುಕ್ಷೇತ್ರಕ್ಕೆ ದಿವಗಂತ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ 1998ರಲ್ಲಿ ₹ 36 ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ನಾಂದಿ ಹಾಡಿದ್ದರು.

ದೆಹಲಿಯ ಅಕ್ಷರಧಾಮ ಮಾದರಿ ಯಲ್ಲಿ ಕೂಡಲಸಂಗಮದ ಅಭಿವೃದ್ಧಿ ಹಾಗೂ ಚಿಕ್ಕ ಸಂಗಮ, ಬಸವನ ಬಾಗೇ ವಾಡಿಯಲ್ಲಿ ಅವಶ್ಯವಿರುವ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವ ಸಲುವಾಗಿ ಬೆಂಗಳೂರಿನ ಆರ್ಕಾಪ್ ಅಸೋಷಿ ಯೇಶನ್ ಪ್ರೈವೇಟ್ ಲಿಮಿಟೆಡ್ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಿತ್ತು. ಈ ವರದಿ ಯನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಸರ್ಕಾರಕ್ಕೆ ಸಲ್ಲಿಸಿತ್ತು. ಸರ್ಕಾರ ಈ ವರದಿಯನ್ನು ಆಧರಿಸಿ 3 ಹಂತದ ಯೋಜನೆಯಲ್ಲಿ ಮೊದಲ ಹಂತದ ಯೋಜನೆ ಅನುದಾನ ಬಿಡುಗಡೆ ಮಾಡಿದೆ.

ADVERTISEMENT

₹ 369 ಕೋಟಿ ವೆಚ್ಚದ ಯೋಜನಾ ವರದಿಯನ್ನು ಸರ್ಕಾರ ಮೂರು ಹಂತದಲ್ಲಿ ಅಭಿವೃದ್ಧಿ ಪಡಿಸಲಿದೆ. ಮೊದಲ ಹಂತದ ಯೋಜನೆಗೆ ₹139. 61ಕೋಟಿ, 2ನೇ ಹಂತದಲ್ಲಿ ₹ 94.28 ಕೋಟಿ, 3ನೇ ಹಂತದಲ್ಲಿ ₹134.21 ಕೋಟಿ ಯೋಜನೆ ಸಿದ್ದಪಡಿಸಿದೆ.

ಪ್ರಸಕ್ತ ವರ್ಷದ ಬಜೆಟ್‌ನಲ್ಲಿ ಮೊದಲ ಹಂತದ ಕಾಮಗಾರಿಗಾಗಿ ₹139.61 ಕೋಟಿ ಹಣವನ್ನು ಸರ್ಕಾರದ ಅನುದಾನದ ಮೂಲಕ ₹44.94 ಕೋಟಿ, ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಕ ₹94.67 ಕೋಟಿ ಬಿಡುಗಡೆ ಮಾಡಿದೆ.

ಯೋಜನೆಗಳು: ಕೂಡಲಸಂಗಮದಲ್ಲಿ ಬಸವ ಅಂತರರಾಷ್ಡ್ರೀಯ ಕೇಂದ್ರದ ಕಟ್ಟಡ ಮಾರ್ಪಾಡು, ಹೆಚ್ಚುವರಿ ಕಟ್ಟಡ, ಛತ್ರ, ಕಲ್ಯಾಣ ಮಂಟಪ, ಮಿನಿ ಥಿಯೇಟರ್, ಓರಿಯಂಟೇಶನ್ ಕೇಂದ್ರ, ಶರಣ ಗ್ರಾಮ ನಿರ್ಮಾಣವಾಗಲಿದೆ. ಬಸವನ ಬಾಗೇವಾಡಿಯಲ್ಲಿ ಕಲ್ಯಾಣ ಮಂಟಪ, ಮಾಹಿತಿ ಕೇಂದ್ರ ನಿರ್ಮಾಣ, ಚಿಕ್ಕ ಸಂಗಮದಲ್ಲಿ ಬ್ರಿಜ್‌ ಕಮ್ ಬ್ಯಾರೇಜ್, ಮೂರು ಮುಖ್ಯ ದ್ವಾರಗಳು, ಛತ್ರ, ಅತಿಥಿ ಗೃಹ, ಸ್ನಾನ ಘಟ್ಟದ ನಿರ್ಮಾಣವಾಗಲಿದೆ.

ಎರಡನೇ ಹಂತದ ಯೋಜನೆಗಳು: 2ನೇ ಹಂತದ ಯೋಜನೆಗಳು ಕೂಡಲ ಸಂಗಮಕ್ಕೆ ಸಿಮೀತವಾಗಿವೆ. ಈ ಹಂತ ದಲ್ಲಿ ಗಣ್ಯರ ಅತಿಥಿಗೃಹ,ಛತ್ರ, ಕಲ್ಯಾಣ ಮಂಟಪ, ವಾಣಿಜ್ಯ ಮಳಿಗೆ, ಊಟದ ಮನೆ, ಸಾಂಸ್ಕೃತಿಕ ಭವನ, ಹಳ್ಳಿ ಮಾರುಕಟ್ಟೆ ನಿರ್ಮಾಣದ ಯೋಜನೆ ಇದೆ. 3ನೇ ಹಂತದ ಯೋಜನೆಗಳು ಕೂಡಾ ಕೂಡಲಸ ಂಗಮಕ್ಕೆ ಸಮೀತ ಗೊಂಡಿವೆ. ಈ ಹಂತದಲ್ಲಿ ಕಾಯಕ ಗ್ರಾಮ, ಕಾಯಕ ನಗರ, ಯಾತ್ರಿ ನಿವಾಸ, ವಾಣಿಜ್ಯ ಸಂಕಿರ್ಣ ನಿರ್ಮಿಸುವ ಯೋಜನೆ ಇದೆ.

ಅಕ್ಷರ ಧಾಮ ಮಾದರಿ ಯಲ್ಲಿ ಕೂಡಲಸಂಗಮ ಅಭಿವೃದ್ಧಿ ಪಡಿಸಲು ಯೋಜನೆಗೆ ಸಂಪುಟದ ಒಪ್ಪಿಗೆ ದೊರೆತಿದೆ. ಶೀಘ್ರದಲ್ಲೇ ಈ ಯೋಜನೆಗೆ ಚಾಲನೆ ಕೊಡಲಾಗುವುದು ಎಂದು ಸಚಿವ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.

ದೆಹಲಿ ಅಕ್ಷರಧಾಮದ ಮೂಲಕ ಭಾರತೀಯ ಸಂಸ್ಕೃತಿ ಪರಂಪರೆ ಜಗತ್ತಿಗೆ ಪರಿಚಿತವಾಗಿದೆ. ಅದೇ ಮಾದ ರಿಯಲ್ಲಿ ಸರ್ಕಾರ ಕೂಡಲಸಂಗಮ ಮೂಲಕ ಶರಣ ಸಂಸ್ಕೃತಿ, ಪರಂಪರೆ, ಕಾಯಕ ಪರಿಕಲ್ಪನೆ, ಶರಣರ ಜೀವನ ಚರಿತ್ರೆಯನ್ನು ಜಗತ್ತಿಗೆ ಭಿತ್ತರಿಸುವ ಕಾರ್ಯ ಈ ಯೋಜನೆಯ ಮೂಲಕ ನಡೆಯಬೇಕು ಎಂಬುದು ಕೂಡಲ ಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಜಗದ್ಗುರು ಮಾತೆ ಮಹಾದೇವಿ ಅವರ ಆಶಯವಾಗಿದೆ. ರಾಜ್ಯ ಸರ್ಕಾರ ₹139 ಕೋಟಿ ಬಿಡುಗಡೆ ಮಾಡಿದ್ದು, ನಾಡಿನ ಬಸವಾಭಿಮಾನಿ ಗಳಿಗೆ ಸಂತಸ ತಂದಿದೆ ಎಂದು ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು.

* * 

ಕೂಡಲಸಂಗಮ ಅಭಿವೃದ್ಧಿ ಯ ಉದ್ದೇಶದಿಂದ ಈ ಕ್ಷೇತ್ರದ ಅಭಿವೃದ್ಧಿಗೆ 139 ಕೋಟಿ ಅನುದಾನಕ್ಕೆ ಅನು ಮೋದನೆ ಕೊಟ್ಟು ಕಾಮಗಾರಿಗೆ ಹಣ ಬಿಡುಗಡೆ ಮಾಡಿದ್ದು ಸಂತೋಷ
ವಿಜಯಾನಂದ ಕಾಶಪ್ಪನವರ
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.