ADVERTISEMENT

ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಸ್ತೆ ಓಟ ಇಂದು

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 10:15 IST
Last Updated 1 ಜುಲೈ 2012, 10:15 IST

ಬಾಗಲಕೋಟೆ: ಕೆ.ಎ.ನೆಟ್ಟಕಲ್ಲಪ್ಪ ಸ್ಮಾರಕ ರಾಜ್ಯ ಮಟ್ಟದ ರಸ್ತೆ ಓಟ ಸ್ಪರ್ಧೆ ಇದೇ 1ರಂದು ಪ್ರಥಮ ಬಾರಿಗೆ `ಮುಳುಗಡೆ ನಗರಿ~ ಬಾಗಲಕೋಟೆ ಯಲ್ಲಿ ನಡೆಯಲಿದೆ.

ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಬಾಗಲ ಕೋಟೆ ಜಿಲ್ಲೆ ಸೇರಿದಂತೆ ಹುಬ್ಬಳ್ಳಿ, ಮಂಗಳೂರು, ಗುಲ್ಬರ್ಗ, ರಾಯ ಚೂರು, ಗದಗ, ಉತ್ತರ ಕನ್ನಡ, ಬೆಳ ಗಾವಿ, ವಿಜಾಪುರ, ಕೊಪ್ಪಳ, ಮೈಸೂರು, ಬೆಂಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿ ರುವ ನೂರಾರು ಅಥ್ಲೀಟ್‌ಗಳು ನಗರ ದಲ್ಲಿ ಬೀಡುಬಿಟ್ಟಿದ್ದಾರೆ.

ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅಥ್ಲೀಟ್‌ಗಳಿಗೆ ಶನಿವಾರ ನಗರದ ಬಿವಿವಿ ಸಂಘದ ಬೀಳೂರು ಗುರು ಬಸವ ಅಜ್ಜನ ಗುಡಿ ಬಳಿ `ಚೆಸ್ಟ್ ನಂಬರ್~ ವಿತರಿಸಲಾ ಯಿತು.

ಪುರುಷರ ವಿಭಾಗಕ್ಕೆ ಚಾಲನೆ: ಪುರುಷರ ವಿಭಾಗದ 12 ಕಿ.ಮೀ. ರಸ್ತೆ ಓಟಕ್ಕೆ ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ನಗರದ ಬಿವಿವಿ ಸಂಘದ ಮುಖ್ಯ ಪ್ರವೇಶ ದ್ವಾರದ ಮುಂಭಾಗ ಬೆಳಿಗ್ಗೆ 7 ಗಂಟೆಗೆ ಚಾಲನೆ ನೀಡಲಿದ್ದಾರೆ.
ಮಹಿಳೆಯರ ವಿಭಾಗ: ಮಹಿಳೆಯರ ವಿಭಾಗದ 6 ಕಿ.ಮೀ. ರಸ್ತೆ ಓಟಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ವೀಣಾ ಪ್ರಕಾಶ ಎಮ್ಮಿ ನಗರದ ವಿದ್ಯಾಗಿರಿಯ ಮೆಲ್ನಾಡ್ ಸರ್ಕಲ್ (ಬಿವಿವಿ ಎಂಜಿನಿಯರಿಂಗ್ ಕಾಲೇಜು ವೃತ್ತ)ದಲ್ಲಿ ಬೆಳಿಗ್ಗೆ 7.30ಕ್ಕೆ ಚಾಲನೆ ನೀಡಲಿದ್ದಾರೆ.

ಬಾಲಕರ ವಿಭಾಗ: ಬಾಲಕರ ವಿಭಾಗದ 2.5ಕಿ.ಮೀ. ರಸ್ತೆ ಓಟಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಗುಂಡಪ್ಪ ನಗರದ ದಡ್ಡೇನವರ ಕ್ರಾಸ್‌ನಲ್ಲಿ ಬೆಳಿಗ್ಗೆ 8.15ಕ್ಕೆ ಚಾಲನೆ ನೀಡಲಿದ್ದಾರೆ.
ಬಾಲಕಿಯರ ವಿಭಾಗ: ಬಾಲಕಿಯರ ವಿಭಾಗದ ರಸ್ತೆ ಓಟಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಎಂ. ಮಡಿವಾಳ  ಚಾಲನೆ ನೀಡಲಿದ್ದಾರೆ.

ರಸ್ತೆ ಓಟ ಸಾಗುವ ಮಾರ್ಗ: ಪುರುಷರ ಓಟದ ಸ್ಪರ್ಧೆ ನಗರದ ಬಿವಿವಿ ಸಂಘದ ಮುಖ್ಯ ಪ್ರವೇಶ ದ್ವಾರದಿಂದ ಆರಂಭಗೊಂಡು ಸ್ಟೇಷನ್ ರೋಡ್ ಮೂಲಕ ದಡ್ಡೇನವರ ಆಸ್ಪತ್ರೆ ಕ್ರಾಸ್, ವಿದ್ಯಾಗಿರಿ ರಸ್ತೆ, ಮಹಾರಾಜ ಗಾರ್ಡನ್ ಮಾರ್ಗವಾಗಿ ವಿದ್ಯಾಗಿರಿ ಎಂಜಿನಿಯ ರಿಂಗ್ ವೃತ್ತ(ಮೆಲ್ನಾಡ್ ಸರ್ಕಲ್) ಸುತ್ತಿಕೊಂಡು ಮರಳಿ ಅದೇ ಮಾರ್ಗವಾಗಿ ಬಿವಿವಿ ಸಂಘದ ಮುಖ್ಯ ಪ್ರವೇಶದ್ವಾರಕ್ಕೆ ತಲುಪುವ ಮೂಲಕ ಸ್ಪರ್ಧೆ ಕೊನೆಗೊಳ್ಳಲಿದೆ.

ಮಹಿಳೆಯರ ಓಟದ ಸ್ಪರ್ಧೆಯು ವಿದ್ಯಾಗಿರಿ ಎಂಜಿನಿಯರಿಂಗ್ ಕಾಲೇಜು ವೃತ್ತದಿಂದ ಆರಂಭಗೊಂಡು ಬಿವಿವಿ ಸಂಘದ ಮುಖ್ಯಪ್ರವೇಶದ್ವಾರದ ಬಳಿ ಕೊನೆಗೊಳ್ಳಲಿದೆ. ಬಾಲಕ -ಬಾಲಕಿ ಯರ ಓಟದ ಸ್ಪರ್ಧೆಯು ದಡ್ಡೇನವರ ಆಸ್ಪತ್ರೆ ಕ್ರಾಸ್‌ನಿಂದ ಆರಂಭಗೊಂಡು ಬಿವಿವಿ ಸಂಘದ ಮುಖ್ಯ              ಪ್ರವೇಶ ದ್ವಾರದ ಬಳಿ   ಕೊನೆಗೊಳ್ಳಲಿದೆ.

ಬಹುಮಾನ ವಿತರಣೆ: ನಗರದ ಬಿವಿವಿ ಸಂಘದ ಮಿನಿ  ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯುವ ಕಾರ್ಯ ಕ್ರಮದಲ್ಲಿ ಶಾಸಕ ವೀರಣ್ಣ ಚರಂತಿಮಠ,  ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ ಮತ್ತು ಎಸ್‌ಪಿ ವರಿಷ್ಠಾಧಿಕಾರಿ ಈಶ್ವರ ಚಂದ್ರ ವಿದ್ಯಾಸಾಗರ ಹಾಗೂ           ಯುವ ಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಕೆ.ನಂದನೂರ ನಗದು ಬಹುಮಾನ ವಿತರಣೆ ಮಾಡ ಲಿದ್ದಾರೆ.

ಸಹಕಾರ: ರಸ್ತೆ ಓಟದ ಸ್ಪರ್ಧೆ ಯನ್ನು ಸುಗಮವಾಗಿ ನಡೆಸಲು ಬಸವೇಶ್ವರ ವಿದ್ಯಾವರ್ಧಕ ಸಂಘ, ಜಿಲ್ಲಾ ಪೊಲೀಸ್, ಆರೋಗ್ಯ         ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ      ಇಲಾಖೆ ಸಹಕರಿಸಿವೆ ಎಂದು ಡೆಕ್ಕನ್ ಅಥ್ಲೇಟಿಕ್ ಕ್ಲಬ್‌ನ ಸಂಘಟನಾ ಕಾರ್ಯದರ್ಶಿ ಅನಂತರಾಜು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.