ADVERTISEMENT

‘ಕೆರೆಗಳು ಗ್ರಾಮೀಣ ಸಂಸ್ಕೃತಿಯ ಜೀವಾಳ’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 5:08 IST
Last Updated 9 ಅಕ್ಟೋಬರ್ 2017, 5:08 IST

ಮಹಾಲಿಂಗಪುರ: 'ಗ್ರಾಮೀಣ ಬದುಕಿನಲ್ಲಿ ಕೆರೆಗಳಿಗೆ ಮಹತ್ವದ ಸ್ಥಾನವಿದೆ. ಕೆರೆಗಳಿದ್ದಲ್ಲಿ ಸಂಸ್ಕೃತಿ ಇದೆ, ಫಲವತ್ತತೆ ಇದೆ ಹಾಗೂ ಸಮೃದ್ಧತೆ ಇದೆ' ಎಂದು ಸಚಿವೆ ಉಮಾಶ್ರೀ ಹೇಳಿದರು. ಸಮೀಪದ ಚಿಮ್ಮಡ ಗ್ರಾಮದಲ್ಲಿ ಕೆರೆ ಸುಧಾರಣೆ ಕಾಮಗಾರಿಯ 2016-17ನೇ ಸಾಲಿನ ಕೆರೆಗಳ ಆಧುನೀಕರಣ ಪ್ರಧಾನ ಕಾಮಗಾರಿ ಯೋಜನೆಯಡಿ ಮಂಜೂರಾದ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಚಿಮ್ಮಡದ ಕೆರೆ ಜನರ ನಿರಾಸಕ್ತಿಯಿಂದ ನಿರುಪಯುಕ್ತ ಕೆರೆಯಾಗಿದೆ. ಕೆರೆ ಮಾಡಲು ಹಲವು ತಾಂತ್ರಿಕ ತೊಂದರೆ ನಿವಾರಣೆಯಾಗಬೇಕಾಗಿದೆ ಎಂದು ವಿವರ ನೀಡಿದರು.
ವಿರಕ್ತ ಮಠದ ಪ್ರಭು ಸ್ವಾಮೀಜಿ ಮಾತನಾಡಿ ‘ಹೆಚ್ಚು ರೈತರು ವಾಸ ಮಾಡುವ ಪ್ರದೇಶವಾಗಿರುವುದರಿಂದ ಪ್ರತಿಸಲ ಬರಗಾಲದಲ್ಲೂ ತೀವ್ರ ತೊಂದರೆಯಾಗುತ್ತಿತ್ತು. ಕೆರೆಯನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿಕೊಂಡು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು’ ಎಂದು ಅವರು ಹೇಳಿದರು.

ಪ್ರಮುಖರಾದ ಸಂಗಪ್ಪ ಹಲ್ಲಿ, ಮಲ್ಲಪ್ಪ ಸಿಂಗಾಡಿ, ಪರಪ್ಪ ಜಾಡಗೌಡ, ಶಂಕರ ಬಟಕುರ್ಕಿ, ಎಸ್.ಎ.ಪಾಟೀಲ, ದುಂಡಪ್ಪ ಜಾಧವ, ಎಸ್.ಎಂ.ಉಳ್ಳೆಗಡ್ಡಿ, ಬೀಮಸಿ ಸಸಾಲಟ್ಟಿ, ದಶರಥ ಬಿಳ್ಳೂರ, ಬೀರಪ್ಪ ಹಳೆಮನಿ, ಆರ್.ವೈ. ಮುಗಳಖೋಡ, ಅಶೋಕ ದಡೂತಿ, ನೂರಸಾಬ ನದಾಫ, ವಿಜಯಕುಮಾರ, ವಿಠ್ಠಲ ಹೊಸಮನಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.