ADVERTISEMENT

ಕೆರೆಗೆ ನೀರು ತುಂಬಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:30 IST
Last Updated 1 ಅಕ್ಟೋಬರ್ 2012, 19:30 IST

ಜಮಖಂಡಿ: ತಾಲ್ಲೂಕಿನ ಸಿದ್ದಾಪುರ ಕೆರೆಗೆ ನೀರು ತುಂಬಿಸುವ ಯೋಜನೆಯ ನವೀಕರಣಕ್ಕೆ ಬೇಕಾದ 2.5 ಕೋಟಿ ರೂಪಾಯಿ ಪ್ರಸ್ತಾವಕ್ಕೆ ಮಂಜೂರಾತಿ ನೀಡಬೇಕು ಎಂದು ಒತ್ತಾಯಿಸಿ ಮಠಾಧೀಶರ ನೇತೃತ್ವದಲ್ಲಿ ರೈತರು ಸೋಮವಾರ ಇಲ್ಲಿ ಮೆರವಣಿಗೆ ನಡೆಸಿ ತಹಶೀಲ್ದಾರ್ ಜಿ.ಎಲ್.ಮೇತ್ರಿ ಅವರಿಗೆ ಮನವಿ ಸಲ್ಲಿಸಿದರು.

ಸಿದ್ದಾಪುರ, ಹುಲ್ಯಾಳ, ಹುಣಸಿಕಟ್ಟಿ, ಲಿಂಗನೂರ, ಬುದ್ನಿ, ಗಣಿ, ಕೊಣ್ಣೂರ ಹಾಗೂ ಮರೇಗುದ್ದಿ ಗ್ರಾಮಗಳಿಂದ ಬಂದಿದ್ದ ನೂರಾರು ರೈತರು ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿ ಕಾರ್ಯಾಲಯದ ಆವರಣದಲ್ಲಿ ಬಹಿರಂಗ ಸಭೆ ನಡೆಸಿದರು.

ಸುಶೀಲಕುಮಾರ ಬೆಳಗಲಿ, ಇಲಾಹಿ ಕಂಗನೊಳ್ಳಿ, ಮಾಜಿ ಶಾಸಕ ಬಾಬುರಡ್ಡಿ ತುಂಗಳ ರೈತರನ್ನು ಉದ್ದೇಶಿಸಿ ಮಾತನಾಡಿದರು. ಮರೇಗುದ್ದಿಯ ಗುರುಪಾದ ಶ್ರೀಗಳು, ಹುಲ್ಯಾಳ ಗುರುದೇವಾಶ್ರಮ ಹರ್ಷಾನಂದ ಶ್ರೀಗಳು, ಕೊಣ್ಣೂರಿನ ಹೊರಗಿನ ಮಠದ ಪ್ರಭುದೇವರು ಶ್ರೀಗಳು, ಹುಣಸಿಕಟ್ಟಿಯ ಸಂಗಯ್ಯ ಶ್ರೀಗಳು ನೇತೃತ್ವ ವಹಿಸಿದ್ದರು. ರಾಜು ಪೂಜಾರಿ, ಉಮೇಶ ಕೋರಿ, ಮಲ್ಲಪ್ಪ ತುಬಚಿ, ಪಂಡಿತ ಕೋರಿ, ಶ್ರೀಶೈಲ ಮರನೂರ   ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.