ADVERTISEMENT

ಗಮನ ಸೆಳೆದ ಗೊಂಬೆ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 5:13 IST
Last Updated 1 ಅಕ್ಟೋಬರ್ 2017, 5:13 IST
ಬನಹಟ್ಟಿಯ ವಂದನಾ ಮೋಹನ ಪತ್ತಾರ ಅವರ ಮನೆಯಲ್ಲಿ ದಸರಾ ಹಬ್ಬದ ನಿಮಿತ್ತವಾಗಿ ವೈವಿಧ್ಯಮಯವಾದ ಗೊಂಬೆಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಬನಹಟ್ಟಿಯ ವಂದನಾ ಮೋಹನ ಪತ್ತಾರ ಅವರ ಮನೆಯಲ್ಲಿ ದಸರಾ ಹಬ್ಬದ ನಿಮಿತ್ತವಾಗಿ ವೈವಿಧ್ಯಮಯವಾದ ಗೊಂಬೆಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.   

ರಬಕವಿ ಬನಹಟ್ಟಿ: ಸ್ಥಳೀಯ ವಿಠ್ಠಲ ಮಂದಿರದ ಹತ್ತಿರದ ವಂದನಾ ಮೋಹನ ಪತ್ತಾರ ಅವರ ಮನೆಯಲ್ಲಿ ದಸರಾ ನಿಮಿತ್ತವಾಗಿ ಗೊಂಬೆಗಳ ಪ್ರದರ್ಶನ ಸಾಕಷ್ಟು ಗಮನ ಸೆಳೆಯಿತು.ನೂರಾರು ವೈವಿಧ್ಯಮಯವಾದ ಗೊಂಬೆಗಳನ್ನು ಪ್ರದರ್ಶನಕ್ಕೆ ಇಡಲಾಯಿತು.

ಸುಂದರವಾದ ಮಂಟಪ ನಿರ್ಮಾಣ ಮಾಡಿ ಅಲ್ಲಿ ಶಿವನ ಧ್ಯಾನಾಸಕ್ತ ಮೂರ್ತಿ ಗಮನ ಸೆಳೆಯುವಂತೆ ಇತ್ತು. ಅನ್ನಪೂರ್ಣಾ ಪತ್ತಾರ ಈ ಎಲ್ಲ ಗೊಂಬೆಗಳನ್ನು ಸುಂದರವಾಗಿ ಜೋಡಿಸಿಟ್ಟಿದ್ದರು.

ದಸರಾ ಹಬ್ಬದ ಸಂಭ್ರಮ: ನಗರದಲ್ಲಿ ಶನಿವಾರ ಆಯುಧ ಪೂಜಾ ಮತ್ತು ಬನ್ನಿ ಕೊಡುವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು. ಒಂಬತ್ತು ದಿನಗಳ ಕಾಲ ನಗರದ ಅನೇಕ ಕಡೆಗಳಲ್ಲಿ ದೇವಿ ಪುರಾಟ ಪಠಣ, ವಿಶೇಷ ಪೂಜೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ವಿವಿಧ ದ್ವಿಚಕ್ರ ವಾಹನಗಳ ಕಂಪನಿಗಳ ವಾಹನಗಳ ಮಾರಾಟ ಜೋರಾಗಿತ್ತು. ದಸರಾ ಹಬ್ಬದ ನಿಮಿತ್ತವಾಗಿ ಹೂ, ಮಾಲೆಗಳ, ಕಬ್ಬು, ಮಾವಿನ ತೋರಣಗಳ ವ್ಯಾಪಾರ ಜೋರಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.