ADVERTISEMENT

ಗಮನ ಸೆಳೆದ ‘ಭಾರತಕ್ಕಾಗಿ ಓಟ’

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 6:52 IST
Last Updated 12 ಸೆಪ್ಟೆಂಬರ್ 2013, 6:52 IST

ಬಾಗಲಕೋಟೆ: ಸ್ವಾಮಿ ವಿವೇಕಾ­ನಂದರ 150ನೇ ವರ್ಷಾ­ಚರಣೆ ಸಮಿತಿಯಿಂದ ನಗರದಲ್ಲಿ ಬುಧವಾರ ‘ಭಾರತಕ್ಕಾಗಿ ಓಟ’ ಕಾರ್ಯಕ್ರಮ ನಡೆಯಿತು.

ನಗರದ ಚರಂತಿಮಠದಿಂದ ಆರಂಭ­ಗೊಂಡ ‘ಭಾರತಕ್ಕಾಗಿ ಓಟ’ವು ಪಶು ಚಿಕಿತ್ಸಾಲಯ, ಟೀಕಿನಮಠ, ಬಸವೇಶ್ವರ ಬ್ಯಾಂಕ್, ಪೊಲೀಸ್ ಚೌಕಿ, ಎಂ.ಜಿ. ರಸ್ತೆ, ಬಸವೇಶ್ವರ ವೃತ್ತದ ಮೂಲಕ ಸಾಗಿ ಮರಳಿ ಚರಂತಿಮಠದ ಶಿವಾನುಭವ ಮಂಟಪ ತಲುಪಿತು.

ಗದಗ- ಬಾಗಲಕೋಟೆ ರಾಮಕೃಷ್ಣ ಆಶ್ರಮದ ಸಂತೋಷಾನಂದ ಸ್ವಾಮಿ, ಬವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ವಿಧಾನಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಸಂಗಪ್ಪಣ್ಣ ಕುಪ್ಪಸ್ತ, ಆರ್‌ಎಸ್‌ಎಸ್‌ ನಗರ ಕಾರ್ಯವಾಹ ವಿಜಯ ಸುಲಾಕೆ, ವಿಶ್ವ ಹಿಂದೂ ಪರಿಷತ್‌ನ ಪ್ರಮುಖರಾದ ಗಣೇಶ ಶಿಂತ್ರೆ,  ಜಿಲ್ಲಾ ಸಂಚಾಲಕ ಶಿವು ಮೇಲ್ನಾಡ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂತೋಷ ಹೊಕ್ರಾಣಿ, ಪ್ರಧಾನ ಕಾರ್ಯದರ್ಶಿ ಜಯಂತ ಕುರಂದವಾಡ, ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ನರೇಶ, ನಗರ ಕಾರ್ಯದರ್ಶಿ ವೀರೇಂದ್ರ­­ಗೌಡ ಪಾಟೀಲ, ಬಾಗಲಕೋಟೆ ತಾಲ್ಲೂಕು ಅಧ್ಯಕ್ಷ ಉಮೇಶ ಪೂಜಾರಿ, ದತ್ತು ಲೋನಾರ, ಬಸವರಾಜ ಯಂಕಂಚಿ, ಅಶೋಕ ಮುತ್ತಿನಮಠ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಚಾಲಕರಾದ ಡಾ. ಸಿ.ಎಸ್. ಪಾಟೀಲ, ಕಿರಣ ಪವಾಡಶೆಟ್ಟರ, ಮೋಹನ ದೇಶಪಾಂಡೆ, ಸರಸ್ವತಿ ಕುರಬರ, ಕಿರಣ ಪವಾಡಶೆಟ್ಟರ, ಬಸವರಾಜ ಕುಬಕಡ್ಡಿ, ಹುಡೇದ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.