ADVERTISEMENT

ಜನರ ಹಿತ ಕಾಪಾಡಲು ರಾಜಕಾರಣಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 9:45 IST
Last Updated 7 ಫೆಬ್ರುವರಿ 2012, 9:45 IST

ಹುನಗುಂದ: ಇಂದಿನ ಆಧುನಿಕ ಅಬ್ಬ ರದ ದಿನಗಳಲ್ಲಿ ಸಾಮಾನ್ಯರ ಬದುಕು ದುಸ್ತರಗೊಳ್ಳುತ್ತಿದೆ. ಆಡಳಿತದಲ್ಲಿನ ನಾಯಕರಿಗೆ ದೂರದೃಷ್ಟಿಯ ಕೊರತೆ ಯಿದೆ. ಅವರು ಬಹುಜನರ ಹಿತವನ್ನು ಮರೆಯುತ್ತಿದ್ದಾರೆ. ಅಭಿವೃದ್ಧಿಯಲ್ಲೂ ಇಲ್ಲದ ರಾಜಕೀಯ ತಂದು ಪ್ರಜಾ ಪ್ರಭುತ್ವವನ್ನು ಅಣುಕಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಪಿ.ನಾಡಗೌಡ ಹೇಳಿದರು.

ಅವರು ಇಲ್ಲಿನ ಮೌಲಾನಾ ಅಬುಲ್ ಕಲಾಂ ಆಜಾದ್ ಅಸೋಸಿ ಯೇಷನ್, ಆಜಾದ್ ಭವನದಲ್ಲಿ ಈದ್ ಮಿಲಾದ್ ಅಂಗವಾಗಿ ಭಾನು ವಾರ ಹಮ್ಮಿಕೊಂಡಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಕೋಮು ಸೌಹಾರ್ದತಾ ಸಮಾವೇಶದಲ್ಲಿ 2012ರ ಕೋಮು ಸೌಹಾರ್ದತಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಮುಖ್ಯ ಅತಿಥಿ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಯುವ ಜನಾಂಗ ಜನಮುಖಿ ಕಾರ್ಯಗಳಲ್ಲಿ ತೊಡಗಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, ಆಜಾದ್ ಅವರ ಬದುಕು ಮತ್ತು ಸಾಧನೆ ಬಗ್ಗೆ ವಿವರಿಸಿದರು. ರಾಜ್ಯ ಆಹಾರ ನಿಗಮದ ಮಾಜಿ ಅಧ್ಯಕ್ಷ ಉಸ್ಮಾನ್ ಗಣಿ ಹುಮನಾಬಾದ್ ತಾಲ್ಲೂಕಿನ ಕೋಮು ಸೌಹಾರ್ದದ ಅವಲೋಕನ ಮಾಡಿದರು.

ಇಲಕಲ್ಲ ಡಾ.ಮಹಾಂತ ಸ್ವಾಮಿ ಗಳು, ಗುರುಮಹಾಂತ ಸ್ವಾಮಿಗಳು ಮತ್ತು ವಿಜಾಪುರ ಹಜರತ್ ಸಯ್ಯದ್ ಅಸದುಲ್ಲಾ ಹುಸೇನ್ ಜಹಾಗೀರದಾರ ಸಾನ್ನಿಧ್ಯ ವಹಿಸಿದ್ದರು.

ಆಜಾದ್ ಪಬ್ಲಿಕ್ ಶಾಲೆಯ ಅಧ್ಯಕ್ಷ ನಿಯಾಜ್ ಅಹಮ್ಮದ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಹಜ್ ಸಮಿತಿ ಸದಸ್ಯ ಎಚ್.ಎಂ. ಇಮಾಮಿ ನಿಯಾಜಿ ಮುಖ್ಯ ಅತಿಥಿಗಳಾಗಿದ್ದರು. ಹಿರಿಯ ಪತ್ರಕರ್ತ ಅಬ್ದುಲ್ ಹಕೀಂ  ಅಭಿನಂದನಾ ಭಾಷಣ ಮಾಡಿದರು.

ಇಲಕಲ್ಲ ಲಿಮ್ರಾ ಸಂಸ್ಥೆ ಅಧ್ಯಕ್ಷ ಅಬ್ದುಲ್ ರಜಾಕ್ ತಟಗಾರ, ಪ.ಪಂ. ಸದಸ್ಯ ಅಬ್ದುಲ್ ರಜಾಕ್ ರೇಶ್ಮಿ, ತಾ.ಪಂ. ಸದಸ್ಯ ಸಯ್ಯದ್ ಹುಸೇನ್ ಪೀರ್ ಖಾದ್ರಿ ಮತ್ತು ಪಿಎಸ್‌ಐ ಎಸ್.ಜಿ.ಗುಡಿಮನಿ ಅವರನ್ನು ಸತ್ಕರಿಸ ಲಾಯಿತು.

ಸಂಸ್ಥೆ ಅಧ್ಯಕ್ಷ ಜಬ್ಬಾರ್ ಕಲಬುರ್ಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮೆಹಬೂಬ ಸರಕಾವಸ ಸ್ವಾಗತಿಸಿದರು. ಕಾರಿ ಜುಲ್ಫಿ ಕರ್ ಕುರಾನ್ ಪಠಣ ಮಾಡಿದರು. ಶಕುಂತಲಾ ಗಡೇದಗೌಡರ ವಚನ ಪ್ರಾರ್ಥನೆ ಮಾಡಿದರು. ಮಹ್ಮದ್ ಶೊಯಬ್ ಖತೀಬ್ ನಾಥ್ ಹೇಳಿ ದರು. ಕೌಸರ್ ಮಕ್ಕಾಬಾಯಿ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.