ADVERTISEMENT

ಜನಸ್ತೋಮದ ಮಧ್ಯೆ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 6:35 IST
Last Updated 10 ಅಕ್ಟೋಬರ್ 2011, 6:35 IST

ಬಾಗಲಕೋಟೆ: ರಾಷ್ಟ್ರೀಯ ಸ್ವಯಂ ಸೇವಕರಿಂದ ನಗರದಲ್ಲಿ ಭಾನುವಾರ ನಡೆದ ಅದ್ದೂರಿ ಪಥಸಂಚಲನ  ನಡೆಯಿತು.

ನಗರದ ನಾವಲಗಿ ಜಿನ್ನಿಂಗ್‌ನಿಂದ ಆರಂಭಗೊಂಡ ಪಥಸಂಚಲನ ಎರಡು ಮಾರ್ಗಗಳಲ್ಲಿ ಸಾಗಿತು.
ಟೆಂಗಿನಮಠ ಮಾರ್ಗವಾಗಿ ಬಸವೇಶ್ವರ ಬ್ಯಾಂಕ್, ಪಂಕಾ ಮಸೀದಿ ರಸ್ತೆ, ಅಂಬಾಭವಾನಿ ರಸ್ತೆ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ಬಸವೇಶ್ವರ ವೃತ್ತಕ್ಕೆ ಆಗಮಿಸಿತು.

ಮತ್ತೊಂದು ಗಣವೇಷಧಾರಿಗಳ ಪಥಸಂಚಲನ ಬಸ್‌ನಿಲ್ದಾಣ ರಸ್ತೆ, ರೈಲು ನಿಲ್ದಾಣ ರಸ್ತೆ ಮೂಲಕ ಕೆ
ರೂಡಿ ರಸ್ತೆ ಮಾರ್ಗವಾಗಿ  ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸವೇಶ್ವರ ವೃತ್ತದಲ್ಲಿ ಪರಸ್ಪರ ಏಕಕಾಲಕ್ಕೆ ಸಮಾ ಗಮಗೊಂಡಿತು. ಬಳಿಕ ಕಾರ್ಯಕ್ರಮ ನಡೆಯುವ ಬಸವೇಶ್ವರ ಕಾಲೇಜ್ ಮೈದಾನ ತಲುಪಿತು.

ಎರಡು ಅಶ್ವಾರೂಢ ಗಣವೇಷಧಾ ರಿಗಳು ಹಾಗೂ ಎರಡು ವಾಹನಗಳಲ್ಲಿ ಆರ್‌ಎಸ್‌ಎಸ್ ನಾಯಕರ ಭಾವಚಿತ್ರದ ಮೆರವಣಿಗೆಯ ವಿಶೇಷವಾಗಿತ್ತು.

ಜನಸ್ತೋಮ: ನಗರದಲ್ಲಿ ನಡೆದ ಆರ್.ಎಸ್.ಎಸ್.ಪಥಸಂಚಲನ ವೀಕ್ಷಿಸಲು ನಗರ ಸೇರಿದಂತೆ  ಜಿಲ್ಲೆ ವಿವಿಧೆಡೆಯಿಂದ ಆಗಮಿಸಿದ್ದರು.  ದೇಶ ಭಕ್ತಿ ಘೋಷಣೆ ಮೊಳಗಿಸಿದರು. ಪಥ ಸಂಚನದಲ್ಲಿ ಪಾಲ್ಗೊಂಡ ಗಣವೇಷ ಧಾರಿಗಳಿಗೆ ಹೂ ಎರಚಿ ಶುಭಕೋರಿ ದರು. ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಿ ಮೆರವಣಿಗೆಯನ್ನು ಸ್ವಾಗತಿಸಲಾಯಿತು.

ದೇಶಭಕ್ತರ ವೇಷ: ಬಸ್‌ನಿಲ್ದಾಣ ರಸ್ತೆ ಸರ್ಕಲ್ ಬಳಿ ವಿವೇಕಾನಂದ, ಶಿವಾಜಿ, ರಾಣಿ ಚೆನ್ನಮ್ಮ, ಸುಭಾಷ ಚಂದ್ರಭೋಸ್ ಸೇರಿದಂತೆ ಮತ್ತಿತರ ದೇಶಭಕ್ತರ ವೇಷಧರಿಸಿ ಮಕ್ಕಳು ಗಮನ ಸೆಳದರು.

ಆರ್.ಎಸ್.ಎಸ್.ಪಥಸಂಚಲನ ಸಾಗುವ ರಸ್ತೆಯ ಇಕ್ಕೆಲದಲ್ಲಿ  ಪೊಲೀಸ್ ಇಲಾಖೆ ಭಾರಿ ಭದ್ರತೆಯನ್ನು ಏರ್ಪಡಿಸಿತ್ತು.

ಶಾಸಕ ವೀರಣ್ಣ ಚರಂತಿಮಠ, ಶ್ರಿಕಾಂತ ಕುಲಕರ್ಣಿ, ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ಪಿ.ಎಚ್.ಪೂಜಾರ ಗಣವೇಷ ಧರಿಸಿ ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಡಾ.ಸಿ.ಎಸ್.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಡಾ.ಸುಭಾಷ ಪಾಟೀಲ್, ನಗರಸಭೆ ಉಪಾಧ್ಯಕ್ಷ ಶರಣಪ್ಪ ಗುಳೇದ ಮತ್ತಿತರರು ಆರ್.ಎಸ್.ಎಸ್.ಪಥಸಂಚಲನ ಸಂದ ರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.