ADVERTISEMENT

ತಾಳೆ ರೈತರಿಗೆ ಲಾಭದಾಯಕ ಬೆಳೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 8:20 IST
Last Updated 8 ಅಕ್ಟೋಬರ್ 2011, 8:20 IST
ತಾಳೆ ರೈತರಿಗೆ ಲಾಭದಾಯಕ ಬೆಳೆ
ತಾಳೆ ರೈತರಿಗೆ ಲಾಭದಾಯಕ ಬೆಳೆ   

ಗುಳೇದಗುಡ್ಡ: ತಾಳೆ ಬೆಳೆ ರೈತರಿಗೆ ಲಾಭದಾಯಕ ಬೆಳೆಯಾಗಿದೆ ಎಂದು ಪ್ರಗತಿಪರ ರೈತ ರವಿ ಪಟ್ಟಣಶೆಟ್ಟಿ ಹೇಳಿದರು.

ಅವರು ಈಚೆಗೆ ಕೋಟೆಕಲ್ ಗ್ರಾಮದ ಸಿತಿಮನಿ ತೋಟದಲ್ಲಿ ಜಿ.ಪಂ. ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿದ್ದ ರೈತರಿಗೆ ತಾಳೆ ಬೆಳೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೈತರು ತಾಳೆ ಬೆಳೆಯನ್ನು ಸಾವಯವ ಗೊಬ್ಬರ ಬಳಸಿ ಬೆಳೆಯುವ ಪ್ರಯತ್ನ ಮಾಡಬೇಕೆಂದು ಹೇಳಿದರು.
ತೋಟಗಾರಿಕೆ ಇಲಾಖೆ ತಾಂತ್ರಿಕ ಸಹಾಯಕ ಅಧಿಕಾರಿ ಎಂ.ಬಿ. ಪಾಟೀಲ ಅವರು ತಾಳೆ ಬೆಳೆಯುವ ವಿಧಾನ ಹಾಗೂ ಸರಕಾರದ ಸೌಲಭ್ಯ, ಸಹಾಯಧನ ಕುರಿತು ಮಾತನಾಡಿದರು.

ಎಸ್.ಜಿ. ಬಿರನೂರ, ಶಂಕ್ರಪ್ಪ ಕಳ್ಳಿಗುಡ್ಡ, ಶಿವಯ್ಯ ಸರಗಣಾಚಾರಿ ಹಾಗೂ ಕೃಷಿ ಪ್ರಶಸ್ತಿ ಪುರಸ್ಕೃತ ಶಿವಪ್ಪ ಹಾದಿಮನಿ ಮಾತನಾಡಿದರು. ಕೆ.ಬಿ. ಸೀತಿಮನಿ ಅಧ್ಯಕ್ಷತೆ ವಹಿಸಿದ್ದರು.

ಕೋಟೆಕಲ್ ಜಿ.ಎಸ್. ದೇಸಾಯಿ, ಯಮನೂರಪ್ಪ ಅರಮನಿ, ಎಂ. ಎಚ್. ದಾಲರೂಟಿ, ಪ್ರಕಾಶ ಮುಗಳಕೋಡ, ಧರ್ಮರಾಜ ದಬೇದ್ ಹಾಗೂ ಕೋಟೆಕಲ್, ಮುರುಡಿ, ಗುಳೇದಗುಡ್ಡ, ತೋಗುಣಶಿ, ಹಾನಾಪೂರ ಗ್ರಾಮದ ರೈತರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.