ADVERTISEMENT

ದಲಿತ ಬಾಲಕಿ ಕೊಲೆ: ಗಲ್ಲುಶಿಕ್ಷೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 6:32 IST
Last Updated 30 ಡಿಸೆಂಬರ್ 2017, 6:32 IST
ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಶುಕ್ರವಾರ ಗುಳೇದಗುಡ್ಡ ಮಾದಿಗ ಸಮಾಜದ ಸಂಘಟನಾಕಾರರು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಎಸ್. ರವಿಚಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು
ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಶುಕ್ರವಾರ ಗುಳೇದಗುಡ್ಡ ಮಾದಿಗ ಸಮಾಜದ ಸಂಘಟನಾಕಾರರು ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ ಎಸ್. ರವಿಚಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು   

ಗುಳೇದಗುಡ್ಡ: ವಿಜಯಪುರದಲ್ಲಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ ಆರೋಪಿಗಳನ್ನು ಗಲ್ಲುಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ, ಸ್ಥಳೀಯ ಮಾದಿಗ ಸಮಾಜದ ಸಂಘಟನಾಕಾರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಹೊಸ ಅಂಬಾಭವಾನಿ ಗುಡಿಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ದಾ್‌ ಕಚೇರಿಗೆ ಬಂದು ರಾಜ್ಯಪಾಲರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಾಲ್ಲೂಕು ತಹಶೀಲ್ದಾರ್‌ ಎಸ್. ರವೀಚಂದ್ರ ಅವರಿಗೆ ಸಲ್ಲಿಸಿದರು.

ಮಾದಿಗ ಸಮಾಜದ ಮುಖಂಡ ರಡ್ಡಿ ಎಚ್. ನಡುವಿನಮನಿ ಮಾತನಾಡಿ, ದಲಿತ ಬಾಲಕಿಯ ಘಟನೆಗೆ ಕಾರಣವಾದ ಕಾಮುಕರನ್ನು ಗಲ್ಲುಶಿಕ್ಷೆಗೆ ಒಳಪಡಿಸಬೇಕು. ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಕಾನೂನಿನ ನೆರವು ನೀಡಬೇಕು. ದಲಿತ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ರಕ್ಷಣೆ ಮತ್ತು ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಯಮನಪ್ಪ ನಡುವಿನಮನಿ, ನಾಗಪ್ಪ ಗಚ್ಚಿನಮನಿ, ಪಿ.ಎಂ. ನಡುವಿನಮನಿ, ವಿ.ಎಸ್. ಕೆಳಗಿನಓಣಿ, ಪಿ.ಟಿ. ಮಾದರ, ದುರಗೇಶ ಹಾದಿಮನಿ, ಬಿ.ಕೆ. ಮಾದರ, ಡಿ.ವೈ. ಮಾದರ, ಹುಚ್ಚಪ್ಪ ಮಾದರ, ರಂಗನಾಥ ಹೊಸಮನಿ, ಆರ್.ಆರ್. ಹಾದಿಮನಿ, ಪಡಿಯಪ್ಪ ಹಾದಿಮನಿ, ಪಿ.ಕೆ. ದೊಡಮನಿ, ರಮೇಶ ದಡ್ಡಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.