ADVERTISEMENT

ಪಡಿತರ ಅಂಗಡಿ ಮೇಲೆ ನಿಗಾ ಇರಲಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 7:45 IST
Last Updated 1 ಮಾರ್ಚ್ 2012, 7:45 IST

ಬೀಳಗಿ: ಆಹಾರ ಧಾನ್ಯಗಳನ್ನು ಪೂರೈಸುವ ನ್ಯಾಯ ಬೆಲೆ ಅಂಗಡಿಗಳು ಸರಕಾರ ನಿಗದಿಪಡಿಸಿದ ದರ, ಪ್ರಮಾಣ, ಗುಣಮಟ್ಟದ ಪಡಿತರ ಹಂಚುವ ಬಗ್ಗೆ ಜಾಗೃತಿ ಸಮಿತಿ ಸದಸ್ಯರು ನಿಗಾ ಇಡಬೇಕೆಂದು ತಹಶೀಲ್ದಾರ್ ಎಲ್.ಬಿ. ಕುಲಕರ್ಣಿ ಹೇಳಿದರು.

ತಾಲ್ಲೂಕಿನ ಕೊರ್ತಿ ಸಮುದಾಯ ಭವನದಲ್ಲಿ ಬುಧವಾರ ನಿರ್ದಿಷ್ಟ ಗುರಿಯ ಸಾರ್ವಜನಿಕ ವಿತರಣಾ ಪದ್ಧತಿಯಡಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ ಮಟ್ಟದ ಜಾಗೃತಿ ಸಮಿತಿಯ ಸದಸ್ಯರಿಗಾಗಿ ಏರ್ಪಡಿಸಿದ್ದ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಹಶೀಲ್ದಾರರ ಕಚೇರಿಯಿಂದ ಬಿಡುಗಡೆಯಾದ ಆಹಾರ ಧಾನ್ಯದ ಮಾಹಿತಿ ಪ್ರತಿ ಗ್ರಾಮ ಪಂಚಾಯಿತಿಗೂ, ಜಾಗೃತಿ ಸಮಿತಿ ಸದಸ್ಯರಿಗೂ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ತಾ.ಪಂ. ಇಒ ಡಾ.ಆರ್.ಸಿ. ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಪಡಿತರ ಧಾನ್ಯ ವಿತರಣೆಯಲ್ಲಿ ಅವ್ಯವಹಾರ ನಡೆಯದೇ, ಪಾರದರ್ಶಕವಾಗಿರಬೇಕು ಎಂದರು.

ತಾ. ಪಂ. ಉಪಾಧ್ಯಕ್ಷ ಹನುಮಂತ ಮಾದರ, ಗೀತಾ ಹೊಳಬಸಪ್ಪ ಕಂಬಾರ, ಅನ್ನಪೂರ್ಣಾ ನವಲಗಣ್ಣ, ರಮೇಶ ಹುಣಸೀಕಟ್ಟಿ, ಆಹಾರ ಇಲಾಖೆ ಉಪ ತಹಶೀಲ್ದಾರರಾದ ಬಿ.ಎಂ. ಹೆಗ್ಗಳಗಿ, ಎನ್.ಎ. ಪಾಟೀಲ ಉಪಸ್ಥಿತರಿದ್ದರು.
ಎಸ್.ಆರ್. ಗಯ್ಯಾಳಿ ಸ್ವಾಗತಿಸಿದರು. ಬಿ.ಎಸ್. ಕೊಪ್ಪಳ ವಂದಿಸಿದರು. ಪಿ.ಎಸ್. ಸೋಮನಕಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.