ADVERTISEMENT

‘ಪರಿಸರ ಉಳಿಸಿ ಮಾನವ ಬದುಕು ಹಸಿರಾಗಿಸಿ’

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 8:33 IST
Last Updated 6 ಜೂನ್ 2017, 8:33 IST
ಗುಳೇದಗುಡ್ಡದಲ್ಲಿ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಕೋ ಕ್ಲಬ್ ಹಾಗೂ ಅರಣ್ಯ ಇಲಾಖೆ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಶಾಲಾ ಆವರಣದಲ್ಲಿ ಪುರಸಭೆ ಅಧ್ಯಕ್ಷ ಶಿವುಕುಮಾರ ಹಾದಿಮನಿ ಅವರು ಸಸಿ ನೆಟ್ಟು ನೀರು ಹಾಕುವ ಮೂಲಕ ಚಾಲನೆ ನೀಡಿದರು
ಗುಳೇದಗುಡ್ಡದಲ್ಲಿ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಇಕೋ ಕ್ಲಬ್ ಹಾಗೂ ಅರಣ್ಯ ಇಲಾಖೆ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಶಾಲಾ ಆವರಣದಲ್ಲಿ ಪುರಸಭೆ ಅಧ್ಯಕ್ಷ ಶಿವುಕುಮಾರ ಹಾದಿಮನಿ ಅವರು ಸಸಿ ನೆಟ್ಟು ನೀರು ಹಾಕುವ ಮೂಲಕ ಚಾಲನೆ ನೀಡಿದರು   

ಮಹಾಲಿಂಗಪುರ: ವೇಗದ ಬದುಕಿನಲ್ಲಿ ಪರಿಸರ ಕಡೆಗಣಿಸುತ್ತಿರುವ ಮಾನವನ ಜೀವನ ಶೈಲಿ ಮುಂದೊಂದು ದಿನ ಅವನಿಗೇ ಮುಳ್ಳಾಗಬಹುದು, ಮನುಷ್ಯ ಪರಿಸರದ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸದಿದ್ದರೆ ಜೀವಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪ್ರಭಾವ ಉಂಟಾಗುತ್ತದೆ, ಪರಿಸರ ಉಳಿಸಿ ಮಾನವ ಬದುಕನ್ನು ಹಸಿರಾಗಿಸಿ ಎಂದು ಗೋದಾವರಿ ಬಯೋ ರಿಫೈನರೀಸ್ ಮುಖ್ಯ ವ್ಯವಸ್ಥಾಪಕ ಭಾಲಚಂದ್ರ ಬಕ್ಷಿ ಹೇಳಿದರು.

ಸಮೀಪದ ಸಮೀರವಾಡಿಯ ಕೆ.ಜೆ. ಸೋಮಯ್ಯ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಖಾನೆಯ ಸಿಇಒ ಎಸ್‌.ಎನ್. ಬಬಲೇಶ್ವರ ಮಾತನಾಡಿ ‘ನಿಸರ್ಗವು ನಮ್ಮ ದಿನನಿತ್ಯದ ಬೇಡಿಕೆ ಈಡೇರಿಸುವ ಕಾಮಧೇನು, ನಮ್ಮ ಪರಿಸರದ ಮರ ಕಲ್ಪವೃಕ್ಷವಿದ್ದಂತೆ, ಕಲ್ಲು ಮಣ್ಣುಗಳಲ್ಲಿ ದೇವರನ್ನು ಹುಡುಕುವುದಕ್ಕಿಂತ ನಮ್ಮ ಬದುಕಿಗೆ ಜೀವದ್ರವ್ಯ ನೀಡುವ ಜೀವಂತ ಮರಗಳಲ್ಲಿ ದೇವರನ್ನು ಕಾಣೋಣ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿ.ಕೆ. ಖಿಲಾರಿ, ಡಾ.ಸುಂದರ, ಸೂರ್ಯ ಪ್ರಕಾಶ, ಬಿ.ಎಂ. ಕುರಿ, ಸುಹಾಸ ಘೋಡಗೆ, ಡಾ.ವಿಜಯ ಕುಮಾರ ಕಣವಿ, ಆನಂದಕುಮಾರ, ಸೂರ್ಯಬಾಬು, ಪಿ. ಎನ್. ದೇಸಾಯಿ, ಸಂತೋಷ ಗಾಂವಕರ, ಮಲ್ಲಿಕಾರ್ಜುನ ಜಂಬೂರ, ಬಸವರಾಜ ಪೂಜಾರ, ರಾಜು ನದಾಫ್, ಎಚ್.ಎಸ್. ಭಜಂತ್ರಿ, ಪ್ರಕಾಶ ಬೋಂದ್ರೆ ಇದ್ದರು. ಪ್ರಾಚಾರ್ಯ ಸಿ. ಅನಿಲಕುಮಾರ ಸ್ವಾಗತಿ ಸಿದರು, ದಿಲೀಪ ಜೋಶಿ ನಿರೂಪಿಸಿ ದರು. ಶಿಕ್ಷಕಿ ತಬಸ್ಸುಮ್ ಘೋರಿ ವಂದಿಸಿದರು. 500 ಸಸಿ ನೆಡಲಾಯಿತು.

ADVERTISEMENT

ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ
ಬಾದಾಮಿ: ಅರಣ್ಯವನ್ನು ನಾಶ ಮಾಡು ವುದರಿಂದ ಮಳೆಗಾಲ ಕಡಿಮೆಯಾಗು ತ್ತದೆ. ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬ ನಾಗರಿಕನು ಪರಿಸರವನ್ನು ಸಂರಕ್ಷಿಸಬೇಕು ಎಂದು ನ್ಯಾಯಾಧೀಶ ಆರ್‌.ಎಂ.ಶಿರೂರ ಹೇಳಿದರು. ಇಲ್ಲಿನ ಎಪಿಎಂಸಿ ಆವರಣದಲ್ಲಿ ಸೋಮವಾರ ನಿಸರ್ಗ ಬಳಗ, ಪ್ರಾದೇಶಿಕ ಅರಣ್ಯ ಇಲಾಖೆ ಮತ್ತು ಸಾಮಾಜಿಕ ಅರಣ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಸಸಿ ನೆಡುವುದರ ಮೂಲಕ ಚಾಲನೆ ನೀಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿಜಯಕುಮಾರ ಬೇಟಗಾರ,ಪುರಸಭೆ ಅಧ್ಯಕ್ಷ ಫಾರೂಕ್‌ಅಹ್ಮದ್‌ ದೊಡಮನಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಮಹಾಂತೇಶ ಹಟ್ಟಿ, ಅರಣ್ಯ ಇಲಾಖೆ ಅಧಿಕಾರಿಗಳಾದ ವಿ.ಪಿ ಹಾಡಲಗೇರಿ, ಆರ್‌.ಎಸ್‌. ಪ್ಯಾಟಿಗೌಡರ, ನಿಸರ್ಗ ಬಳಗದ ಎಸ್‌.ಎಚ್‌. ವಾಸನ, ಅನಿಲ ಚಪ್ಪಲಗಾವ, ಎಂ.ಎಸ್‌.ಪೀರಜಾದೆ, ವೀರಣ್ಣ ಕಲ್ಯಾಣಿ, ಡಾ. ಎಸ್‌.ಎ. ಗಂಗಲ, ಪಿ.ಎ. ಹಿರೇಮಠ, ನಿರ್ಮಲಾ ರತ್ನಾಕರ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಎಸ್‌.ಜಿ. ಶಿವಪ್ಪಯ್ಯನಮಠ ಮೊದಲಾದವರು ಇದ್ದರು. 

‘ಪರಿಸರ ರಕ್ಷಣೆ ಮನೋಭಾವನೆ ಮಕ್ಕಳಲ್ಲಿ ಬೆಳೆಸಿ’
ರಬಕವಿ–ಬನಹಟ್ಟಿ: ಇಂದಿನ ಮಕ್ಕಳಲ್ಲಿ ಗಿಡ ಮರ ಬೆಳೆಸುವುದರ ಜೊತೆಗೆ ಅವು ಗಳನ್ನು ರಕ್ಷಣೆ ಮಾಡುವ ಮನೋ ಭಾವನೆ ಬೆಳೆಸುವ ಕಾರ್ಯವಾಗಬೇಕು ಎಂದು ಸ್ಥಳೀಯ ಸಿವಿಲ್‌ ನ್ಯಾಯಾಧೀಶ ರವೀಂದ್ರ ಹೊನೋಲೆ ತಿಳಿಸಿದರು. ಅವರು ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಮೀಪದ ನಾವಲಗಿ ಗ್ರಾಮದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತೇರದಾಳ ವಿಭಾಗದ ಅರಣ್ಯ ಇಲಾಖೆ ಹಾಗೂ ರಾಣಿ ಚನ್ನಮ್ಮ ಶಾಲೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಮಖಂಡಿಯ ಆರ್‌ಎಫ್‌ಓ ಎಸ್‌.ಜಿ.ಸಂಗಲಾಕರ ಮಾತನಾಡಿದರು. ಹಿರಿಯ ವಕೀಲ ಎಂ.ಜಿ.ಕೆರೂರ ಪರಿಸರ ಕಾನೂನು ಕುರಿತು ಮಾತನಾಡಿದರು. ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬಳಗಾರ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಸ್‌.ಎಂ. ಫಕೀರಪುರ, ಸುರೇಶ ಗೊಳಸಂಗಿ, ಎಸ್‌.ಎಸ್‌.ಸಿದ್ದಾಪುರ, ಹರ್ಷವರ್ಧನ ಪಟವರ್ಧನ, ಹನಮಂತ ಸವದಿ, ಶಂಕರ ಧರಿಗೌಡರ, ಸುಜಾತಾ ನಿಡೋಣಿ, ಮುತ್ತಪ್ಪ ಕೋಲೂರು, ಶಿವ ಕುಮಾರ ಷಣ್ಮುಖ, ಭೀಮಶಿ ಯಲ್ಲಟ್ಟಿ ಇದ್ದರು. ಅರಣ್ಯ ಇಲಾಖೆ ಅಧಿಕಾರಿಗಳಾದ ಆರ್‌.ಟಿ.ನ್ಯಾಮಗೌಡ, ಎಸ್‌.ಐ.ನಿಂಬಾಳೆ ಮತ್ತು ಮಲ್ಲು ನಾವಿ ಇದ್ದರು. ಆರತಿ ಸಿಂಗೆ ಸ್ವಾಗತಿಸಿದರು. ಸಾವಿತ್ರಿ ತೇಲಿ ವಂದಿಸಿದರು. ಸುಶೀಲಾ ಕಲ್ಲೊಳ್ಳಿ ನಿರೂಪಿಸಿದರು.

ಸಸಿ ನೆಡುವ ಕಾರ್ಯ 
ಗುಳೇದಗುಡ್ಡ: ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛ ವಾಗಿಟ್ಟುಕೊಳ್ಳಬೇಕು. ಮನೆಗೊಂದು ಗಿಡ ನೆಟ್ಟು ಅದರ ಸಂರಕ್ಷಣೆಗೆ ಎಲ್ಲರೂ ಕಾಳಜಿಯಿಂದ ರಕ್ಷಣೆ ಮಾಡಿದರೆ ಮಾತ್ರ ಮರ ಹೆಮ್ಮರವಾಗಿ ಬೆಳೆದು ನಮ್ಮೆಲ್ಲರಿಗೂ ನೆರಳನ್ನು ಕೊಡುವುದರ ಜೊತೆಗೆ ನಿಸರ್ಗದ ಸಮತೋಲನ ಕಾಪಾಡಿದಂತಾಗುತ್ತದೆ ಎಂದು ಪುರ ಸಭೆ ಅಧ್ಯಕ್ಷ ಶಿವಕುಮಾರ ಹಾದಿಮನಿ ಹೇಳಿದರು. ಅವರು ಸೋಮವಾರ ಸ್ಥಳೀಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಇಕೋ ಕ್ಲಬ್ ಹಾಗೂ ಅರಣ್ಯ ಇಲಾಖೆ ವತಿಯಿಂದ ನಡೆದ ವಿಶ್ವ ಪರಿಸರ ದಿನಾ ಚರಣೆ ನಿಮಿತ್ತ ಶಾಲಾ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಿಕ್ಷಕ ಸಂತೋಷ ಪಟ್ಟಣಶೆಟ್ಟಿ, ಅರಣ್ಯ ರಕ್ಷಕ ಶ್ರೀಧರ ಬಡಿಗೇರ ಮಾತ ನಾಡಿದರು. ಉಪಪ್ರಾಚಾರ್ಯ ಮನೋಹರ ಎಂ. ಚಲವಾದಿ ಅಧ್ಯಕ್ಷತೆ ವಹಿಸಿದ್ದರು. ಉಪ ವಲಯ ಅರಣ್ಯಾಧಿಕಾರಿ ಕೆ.ಎನ್.ನಾಡಗೌಡರ, ಅರಣ್ಯ ರಕ್ಷಕ ವಿಜಯಕುಮಾರ ನಾಯಕ, ಎ.ಎಂ.ಮುಲ್ಲಾ, ಬಿ.ಎಂ.ಕೊಡಗಲಿ, ಎಸ್.ಐ. ನಿಂಬಾಳ ಹಾಗೂ ಇಕೋ ಕ್ಲಬ್ ಸಂಚಾಲಕ ಪಿ.ಸಿ.ಬೆಟಗೇರಿ, ಲಲಿತಾ ಐ. ಅಂಗಡಿ, ಶಿಕ್ಷಕ ಚನಬಸಪ್ಪ ಕುರುಬರ,  ಮಲ್ಲಿಕಾರ್ಜುನ ರಾಜನಾಳ, ಎಸ್.ಎ.ಹೂಗಾರ, ಲಕ್ಷ್ಮಿ ಗುಗ್ಗರಿಗೌಡರ, ಪ್ರೇಮಾ ಮೂಲಂಗಿ, ಶಮೀಂ ಆರಾ ಬೇಸಗರ, ಶಾರದಾ ಚಳ್ಳಗಿಡದ, ಲತಾ ಪತ್ತಾರ, ವಿಶಾಲಾ ದೇಶಪಾಂಡೆ, ಪರಶುರಾಮ ಬಾಣದ,  ಎ.ಬಿ. ನದಾಫ್, ಈರಮ್ಮ ಹಾಲಬಾವಿ, ಪಾತಿಮಾ ನದಾಫ್, ಮಲ್ಲಮ್ಮ ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು. ಶಿಕ್ಷಕ ಚನಬಸಪ್ಪ ಕುರುಬರ ಸ್ವಾಗತಿಸಿದರು.  ಜಯಶ್ರೀ ಆಲೂರ ನಿರೂಪಿಸಿದರು. ವಿ.ಬಿ. ನಾಯಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.