ADVERTISEMENT

ಬದಾಮಿ: ಬಂಡಾ ಬಯದ ಬೇಗೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 8:46 IST
Last Updated 10 ಏಪ್ರಿಲ್ 2013, 8:46 IST

ಗುಳೇದಗುಡ್ಡ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮೊದಲ ಹಂತದ ಅಭ್ಯರ್ಥಿಗಳ ಹೆಸರು ಘೋಷಣೆ ಹೊರಬಿದ್ದಿದೆ.

ಬದಾಮಿ ವಿಧಾನಸಭಾ ಕ್ಷೇತ್ರದ  ಅಧಿಕೃತ ಅಭ್ಯರ್ಥಿಗಳ ಹೆಸರು ಘೋಷಿ ಸಲಾಗಿದೆ. ಅದರಲ್ಲಿ ವಿಶೇಷ ವಾಗಿ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ ಕಾಂಗ್ರೆಸ್‌ನ ಹಿರಿಯ ಮುಖಂಡ ಮಾಜಿ ಸಚಿವ ಬಿ.ಬಿ.ಚಿಮ್ಮನ ಕಟ್ಟಿ ಅವರ ಹೆಸರು ಕೈಬಿಟ್ಟಿದ್ದರಿಂದ ಕ್ಷೇತ್ರದಲ್ಲಿ ಚುನಾವಣೆಯ ಪ್ರಚಾರದ ಕಾವು ರಂಗೇರದಂತಾಗಿದೆ.

ಬದಾಮಿ ಕ್ಷೇತ್ರದ ಬಿಜೆಪಿಯಲ್ಲಿ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸಿದ್ದ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಈ ಹಿಂದಿನ ಚುನಾವಣೆಯಲ್ಲಿ ಟಿಕೆಟ್‌ಗಾಗಿ ತೀವ್ರ ಸ್ಪರ್ಧೆ ಒಡ್ಡಿದ್ದರು.  ಅಂದು ಟಿಕೆಟ್ ಕೈತಪ್ಪಿದ್ದರಿಂದ  ಅಸ ಮಾಧಾನಗೊಂಡಿದ್ದರು, ಮುಂದಿನ ಚುನಾವಣೆಯ ಅವಧಿಯಲ್ಲಿ ಟಿಕೆಟ್ ಬಿಟ್ಟು ಕೊಡಲಾಗುವುದೆಂದು ಶಾಸಕ ಎಂ.ಕೆ.ಪಟ್ಟಣಶೆಟ್ಟಿ ಹಾಗೂ ರಾಜ ಶೇಖರ ಶೀಲವಂತರ ನಡುವೆ ಒಳ ಒಪ್ಪಂದವಾಗಿತ್ತು ಎನ್ನಲಾಗಿದೆ.

ಆಗಲೂ ಕೂಡಾ ಶಾಸಕ ಎಂ.ಕೆ.ಪಟ್ಟಣ ಶೆಟ್ಟಿ ಅವರು ಟಿಕೆಟ್ ಬಿಟ್ಟುಕೊಡದೇ ಟಿಕೆಟ್ ಗಿಟ್ಟಿಸಿ ಕೊಂಡಿದ್ದು, ರಾಜ ಶೇಖರ ಶೀಲವಂತ ಅವರ ಬೆಂಬಲಿತ ಬಿಜೆಪಿ ಕಾರ್ಯಕರ್ತರು ಮುನಿಸಿ ಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಇನ್ನು ಚುನಾವಣೆಯ ಪ್ರಚಾರದ ತಯ್ಯಾರಿಯ ಲಕ್ಷಣ ಕಾಣಿಸಿಕೊಳ್ಳು ತ್ತಿಲ್ಲ.

ಜೆಡಿಎಸ್ ಅಧಿಕೃತ ಅಭ್ಯರ್ಥಿ ಮಹಾಂತೇಶ ಮಮದಾಪೂರ ಅವರು ಬದಾಮಿ, ಗುಳೇದಗುಡ್ಡ ಹಾಗೂ ಕೆರೂರ ಪಟ್ಟಣದ ಹಾಗೂ ಗ್ರಾಮೀಣ ಭಾಗದಲ್ಲಿ ಮತಯಾಚನೆ ಪ್ರಚಾರ ಕಾರ್ಯ ಚುರುಕುಗೊಂಡಿಲ್ಲ, ಇನ್ನು ಪ್ರಚಾರದ ಕಾವು ಏರಿಲ್ಲ ಮಂದಗತಿ ಯಲ್ಲಿ ನಡೆದಿದೆ.

ಜೆಡಿಎಸ್ ಅಭ್ಯರ್ಥಿಗೆ ಗುಳೇದಗುಡ್ಡ ದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಪಕ್ಷದ ಮುಖಂಡರ, ಕಾರ್ಯಕರ್ತರ, ನಾಯಕತ್ವದ ಕೊರತೆ ಎದ್ದುಕಾಣುತ್ತಿದೆ. ಹೀಗಾಗಿ ಚುನಾವಣೆ ಪ್ರಚಾರದ ಕಾವು ಚುರುಕುಗೊಂಡಿಲ್ಲ ಎನ್ನುವಂತಾಗಿದೆ. 

ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರ ಹೆಸರು ಟಿಕೆಟ್ ಹಂಚಿಕೆಯಲ್ಲಿ ಕೈಬಿಟ್ಟು ಡಾ, ದೇವರಾಜ ಪಾಟೀಲ ಹೆಸರು ಘೋಷಣೆ ಮಾಡಿದ್ದರಿಂದ ದಶಕದಿಂದ ಅಧಿಕಾರ ಇಲ್ಲದೇ ವಿಲಿವಿಲಿ ಒದ್ದಾಡು ತ್ತಿರುವ ಕ್ಷೇತ್ರದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತ ರಲ್ಲಿ ಇದೀಗ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ ಎನ್ನುವ ಸುದ್ದಿ ಆಕಾಂಕ್ಷಿ ಗಳಲ್ಲಿ ಮತ್ತಷ್ಟು ಆಸೆ ಗರಿಗೆದರುವಂತೆ  ಮಾಡಿತ್ತು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊರೆತ ಅಚ್ಚರಿಯ ಗೆಲುವುನಿಂದಾಗಿ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಅವರ ಹೆಸರು ಟಿಕೆಟ್ ಹಂಚಿಕೆಯಲ್ಲಿ ಕೈಬಿಟ್ಟು, ಕ್ಷೇತ್ರದ ಪರಿಚಯವಿಲ್ಲದ, ಪಕ್ಷಕ್ಕೆ ದುಡಿಯ ಲಾರದ ಡಾ, ದೇವರಾಜ ಪಾಟೀಲ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಕ್ಕಾಗಿ ಬದಾಮಿ ಕ್ಷೇತ್ರದ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರಲ್ಲಿ ಅಸಮಾಧಾನದ ಹೋಗೆ ಬುಗಿಲೆದ್ದು, ಚಿಮ್ಮನಕಟ್ಟಿ ಅವರ ಬೆಂಬಲಿಗರಲ್ಲಿ ಅಲ್ಲೋಲ ಕಲ್ಲೋಲ ಸೃಷ್ಠಿಯಾಗಿ, ಬೀದಿಗಳಿದು ಪ್ರತಿಭಟನೆ ನಡೆಸಿದರು.

ಈ ಪ್ರತಿಭಟನೆಯಲ್ಲಿ ಸ್ವತ: ಬಿ.ಬಿ. ಚಿಮ್ಮ ನಕಟ್ಟಿ ಭಾಗವಹಿಸಿದ್ದಲ್ಲದೇ ಹೈಕ ಮಾಂಡ್ ವಿರುದ್ಧ ರಣಕಹಳೆ ಮೊಳಗಿಸಿದರು.
ಟಿಕೆಟ್ ಕೊಡದಿದ್ದಲ್ಲಿ ಬಂಡಾಯ ಅಥವಾ ಪಕ್ಷೇತರ ಅಭ್ಯರ್ಥಿ ಯಾಗಿ ಚುನಾವಣಾ ಖಣಕ್ಕಿಳಿಯುವು ದಾಗಿ ಎಚ್ಚರಿಸಿದ್ದಾರೆ. 

ಅಲ್ಲದೇ ಗುಳೇದಗುಡ್ಡ ಭಾಗದಲ್ಲಿ ಬರುವ ಹಂಸನೂರ ಜಿ.ಪಂ. ಸದಸ್ಯೆ ಮಂಜುಳಾ ಶೇಖರ ರಾಠೋಡ, ನಂದ ಕೇಶ್ವರ ಜಿ.ಪಂ. ಸದಸ್ಯ ಎಂ.ಜಿ. ಕಿತ್ತಲಿ, ಜಾಲಿಹಾಳ ಜಿ.ಪಂ. ಸದಸ್ಯ  ಎಫ್.ಆರ್.ಪಾಟೀಲ ಹಾಗೂ ಲಾಯದಗುಂದಿ ತಾ.ಪಂ. ಸದಸ್ಯ ಹನಮಂತ ಕೆ.ಪತ್ತಾರ, ಆಡಗಲ್ ತಾ.ಪಂ. ಸದಸ್ಯರು ಸೇರಿ 5 ಜನರು, ಬದಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ. ಯಲಿಗಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಡಿ. ಜೋಗಿನ, ಜಿ.ಪಂ. ಮಾಜಿ ಉಪಾಧ್ಯಕ್ಷ ಪಿ.ಆರ್. ಗೌಡರ, ಗುಳೇದಗುಡ್ಡ, ಬದಾಮಿ ಪುರಸಭೆ, ಕೆರೂರು ಪಟ್ಟಣ ಪಂಚಾಯತಿ ಸೇರಿ 23 ಜನ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು 22 ಜನ ಹಾಗೂ ಪಕ್ಷದ ಮುಖಂಡರಿಂದ ಹೈಖಮಾಂಡ್‌ಗೆ ರಾಜೀನಾಮೆ ಪತ್ರ ವನ್ನು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರಿಗೆ ಕಳುಹಿಸಲಾಗಿದೆ.

ಟಿಕೆಟ್ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ಕೈತಪ್ಪಿದ್ದರಿಂದ ಇಷ್ಟೂಂದು ಗೊಂದಲ, ಅಸಮಾಧಾನ ಉಂಟಾಗಿದ್ದರಿಂದ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಡಾ, ದೇವರಾಜ ಪಾಟೀಲ ಕ್ಷೇತ್ರದಲ್ಲಿ ಚುನಾ ವಣೆ ಪ್ರಚಾರ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಚುನಾವಣೆ ಪ್ರಚಾರ ತೈಯಾರಿ ನಡೆಸದೆ ಕಾರ್ಯ ಕರ್ತರ ಹುಮ್ಮಸ್ಸು ಮಂಕು ಕವಿದಂತಾ ಗಿದೆ. ಧಗಧಗಿಸುತ್ತಿರುವ ಈ ಬಂಡಾಯ ವನ್ನು ಶಮನ ಮಾಡಲು ಪಕ್ಷದ ವರಿ ಷ್ಠರು ಯಾರಿಗೆ ಭಿ.ಫಾರಂ    ಕೊಡುವ ಮಾನದಂಡ ಅನುಸರಿಸುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.