ADVERTISEMENT

ಬಾಬು ಜಗಜೀವನರಾಂ ತತ್ವಾದರ್ಶ ಪಾಲಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 6:46 IST
Last Updated 6 ಏಪ್ರಿಲ್ 2013, 6:46 IST

ಬಾಗಲಕೋಟೆ:`ಹಸಿರು ಕ್ರಾಂತಿಯ ಹರಿಕಾರ, ಶೋಷಿತ ಮತ್ತು ದುರ್ಬಲರ ವರ್ಗದವರಿಗಾಗಿ ತಮ್ಮ ಜೀವನವನ್ನೆ ಮೀಸಲಾಗಿಟ್ಟ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಆದರ್ಶಗಳನ್ನು ನಾವೆಲ್ಲ ರೂಡಿಸಿಕೊಳ್ಳಬೇಕು' ಎಂದು ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಸಲಹೆ ನೀಡಿದರು.

ನವನಗರದ ಜಿ.ಪಂ ಸಭಾಭವನದಲ್ಲಿ ಶುಕ್ರವಾರ ನಡೆದ ಬಾಬು ಜಗಜೀವನರಾಂ ಅವರ 106ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಅವರು ಮಾತನಾಡಿದರು.

`ಬಾಬು ಜಗಜೀವನರಾಂ ಅವರು ಸಂಘಟನಾ ಮನೋಭಾವವುಳ್ಳ ವ್ಯಕ್ತಿಯಾಗಿದ್ದರು. ತಮ್ಮ ಸೇವೆಯನ್ನು ಸಮರ್ಥವಾಗಿ ನಿಭಾಯಿಸಿದ ಒಬ್ಬ ಧೀಮಂತ ವ್ಯಕ್ತಿಯಾಗಿದ್ದರು. ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ಅವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತ' ಎಂದರು.
`ಬಾಬು ಜಗಜೀವನರಾಂ ಅವರು ರಾಷ್ಟ್ರಕ್ಕೆ ಹಾಗೂ ಸಮಾಜಕ್ಕೆ ಸಲ್ಲಿಸಿದ ಸೇವೆ ಅಪಾರ. ಅವರ ಪ್ರಯತ್ನದಿಂದ ರಾಷ್ಟ್ರವು ಸಶಕ್ತವಾಗಲು ಸಹಕಾರಿಯಾಗಿದೆ. ಸಮಾಜದ ಕೆಳಸ್ತರದಲ್ಲಿ ಹುಟ್ಟಿ ಬದುಕನ್ನೆ ಸವಾಲಾಗಿ ಸ್ವೀಕರಿಸಿ, ಮನುಕುಲಕ್ಕೆ ಮಾದರಿ ಎನ್ನುವಂತಹ ಕೊಡುಗೆ ನೀಡಿದ ಅವರ ಸಾಧನೆಗಳು ಇಂದಿಗೂ ಅಜರಾಮರವಾಗಿವೆ' ಎಂದು ತಿಳಿಸಿದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ. ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಈಶ್ವರಚಂದ್ರ ವಿದ್ಯಾಸಾಗರ, ಅಪರ ಜಿಲ್ಲಾಧಿಕಾರಿ ಪಿ.ಟಿ. ರುದ್ರಗೌಡ ಹಾಗೂ ಸಮಾಜ ಕಲ್ಯಾಣ ಅಧಿಕಾರಿ ಜೋಶಿ ಉಪಸ್ಥಿತರಿದ್ದರು.

ನಿಮ್ನ ವರ್ಗದ ಏಳಿಗೆ
ದೇಶ ಕಂಡ ಅಪ್ರತಿಮ ಸಂಸದೀಯ ಪಟು ಡಾ.ಜಗಜೀವನರಾಂ ಅವರಾಗಿದ್ದು, ತಮ್ಮ ಜೀವನದುದ್ದಕ್ಕೂ ದೇಶದ ಸರ್ವ ಸಮುದಾಯ ಹಾಗೂ ವಿಶೇಷವಾಗಿ ನಿಮ್ನ ವರ್ಗದವರ ಹಕ್ಕಿಗಾಗಿ ಮತ್ತು ಅವರ ಬದುಕು ಸಾಕಾರಗೊಳ್ಳಲು ಹಗಲಿರುಳು ಶ್ರಮಿಸಿದ ಧೀಮಂತ ನಾಯಕರು ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಂ. ಬಿ. ಸೌದಾಗರ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಸ್. ಸಿ. ವಿಭಾಗದಿಂದ ಹಮ್ಮಿಕೊಂಡಿದ್ದ ಡಾ. ಜಗಜೀವನರಾಂ ಅವರ 106ನೇ ಜಯಂತಿ ಆಚರಣೆ ಅಂಗವಾಗಿ ಶುಕ್ರವಾರ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಅವರು ಮಾತನಾಡಿದರು.

ಡಿ.ಸಿ.ಸಿ ಹಿರಿಯ ಉಪಾಧ್ಯಕ್ಷ ಡಾ. ಆರ್. ಕೆ. ಕಂಠಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾ ಖಜಾಂಚಿ ನಿಂಗನಗೌಡ ಪಾಟೀಲ, ಮುಖಂಡರಾದ ಅಶೋಕ ಲಾಗಲೋಟಿ, ನಗರ ಬ್ಲಾಕ್ ಅಧ್ಯಕ್ಷ ಎ. ಡಿ. ಮೋಕಾಶಿ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಆರ್. ಎ. ಪಟ್ಟಣದ, ವಕ್ತಾರ ಮಲ್ಲು ಶಿರೂರ, ಸಂಚಾಲಕರಾದ ಪ್ರೇಮನಾಥ ಗರಸಂಗಿ, ಎಸ್. ಎಂ. ಇದ್ದಲಗಿ, ಅಡಿವೆಪ್ಪ ಚಂದಾವರಿ, ಎಸ್. ಸಿ. ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ, ಮಲ್ಲು ಮೇಟಿ, ಪ್ರಭುದೇವ ರುದ್ರಾಕ್ಷಿ, ಮಹಮ್ಮದ ಮೋತಿವಾಲೆ, ನೂರಪಟ್ಟೆವಾಲೆ, ಶಫಿಕ ದೊಡಕಟ್ಟಿ, ಎಸ್. ಎನ್. ರಾಂಪೂರ, ಶಬ್ಬೀರ ನದಾಫ, ಅಲಿಂ ಬಾಗೇವಾಡಿ, ಸುರೇಶ ಲಮಾಣಿ, ರಜಾಕ ಹಳ್ಳೂರ, ಸುನೀಲ ಕೊಡಬಾಗಿ, ಶ್ರಿಕಾಂತ ಬೇವಿನಗಿಡದ, ಜಗ್ಗು ಗಡ್ಡಿ, ಪರಶುರಾಮ ನಾರಾಯಣಿ, ರಾಜು ಮನ್ನಿಕೇರಿ, ಹನಮಂತ ಬೆನ್ನೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.