ADVERTISEMENT

ಮಕ್ಕಳ ವಿಜ್ಞಾನ ಹಬ್ಬ: ರಾಷ್ಟ್ರಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 8:51 IST
Last Updated 4 ಡಿಸೆಂಬರ್ 2013, 8:51 IST

ಕೆರೂರ: ಭಾರತ ಜ್ಞಾನ ವಿಜ್ಞಾನ ಸಮಿತಿ ಈಚೆಗೆ ಬೀದರ್‌ನ ಕರ್ನಾಟಕ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಹಬ್ಬದಲ್ಲಿ ಪಟ್ಟಣದ ಎ.ಆರ್. ಹಿರೇಮಠ ಪ್ರೌಢ ಶಾಲೆ (ನಗರ ವಿಭಾಗ)ಯ ವಿದ್ಯಾರ್ಥಿ ಗಳು ಅತ್ಯುತ್ತಮ ಸಂಶೋಧನಾ ತಂಡ ಪ್ರಶಸ್ತಿಯ ಗಳಿಸುವ ಜೊತೆಗೆ ರಾಷ್ಟ್ರ ಮಟ್ಟದ ವಿಜ್ಞಾನ ಸಮಾವೇಶಕ್ಕೆ ಆಯ್ಕೆ ಗೊಂಡಿದ್ದಾರೆ ಎಂದು ಮುಖ್ಯಗುರು ವೈ.ಡಿ.ರಡ್ಡೇರ ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.

ಇದೇ ಸಮಾವೇಶದಲ್ಲಿ ಗ್ರಾಮೀಣ ವಿಭಾಗದಿಂದ ಭಾಗವಹಿಸಿದ್ದ ಸಮೀಪದ ಹೇಮ–ವೇಮ ಪ್ರೌಢಶಾಲೆ ವಿದ್ಯಾರ್ಥಿ ಗಳು ಸಹ ಉತ್ತಮ ಯೋಜನೆ ಮಂಡಿಸಿ, ರಾಜ್ಯಮಟ್ಟದ ಉತ್ತಮ ಸಂಶೋಧನಾ ತಂಡ ಪ್ರಶಸ್ತಿಯೊಂದಿಗೆ ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆದ ಸಾಧನೆ ಗಳಿಸಿದ್ದಾರೆ.

ಕೆರೂರ ಹಿರೇಮಠ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಓಂಪ್ರಕಾಶ ಕ್ವಾಣ್ಣೂರ, ಜಾವೇದ್‌ ಪಠಾಣ, ಬಸವರಾಜ ಸ್ವಾರಿ, ಪ್ರವೀಣ ಜುಮ್ಮ ನ್ನವರ, ಮಾಗುಂಡಯ್ಯ ವಸ್ತ್ರದ, ಅನು ಪಮಾ ಉಮದಿ, ಮೇಘಾ ಗುಗ್ಗರಿ, ಕಾವೇರಿ ಪೂಜಾರ ಮುಂತಾದವರು ವಿಜ್ಞಾನ ಶಿಕ್ಷಕ ಶಿವಾನಂದ ಜುಮ್ಮನ್ನ ವರ ಮಾರ್ಗದರ್ಶನದಲ್ಲಿ ಭಾಗವಹಿ ಸಿದ್ದರು. ಪಕ್ಕದ ಉಗಲವಾಟದ ಹೇಮ–ವೇಮ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ವಿಷ್ಣು ಚವ್ಹಾಣ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ, ಸುನೀಲ ಹಂಚಿನಾಳ, ಗೋಕುಲ ಚೌಹಾಣ, ಅಬ್ದುಲ್ ಕೋನಮಗಿ, ರೋಹಿಣಿ ಹಿರೇಮಠ, ಗೀತಾ ಕಲ್ಯಾಣ ಶೆಟ್ಟಿ, ಶಿಲ್ಪಾ ಬಡಿಗೇರ ಪಾಲ್ಗೊಂಡಿದ್ದರು.

ಹೆಮ್ಮೆಯ ಸಾಧನೆಯೊಂದಿಗೆ ರಾಷ್ಟ್ರ ಮಟ್ಟಕ್ಕೆ ಅರ್ಹತೆ ಗಿಟ್ಟಿಸಿದ ಉಭಯ ಪ್ರೌಢಶಾಲೆಯ ಮಾರ್ಗದರ್ಶಿ ಶಿಕ್ಷಕ ರುನ್ನು, ವಿದ್ಯಾರ್ಥಿಗಳನ್ನು ಧಾರವಾಡದ ನಿರ್ದೇಶಕ ಸಿದ್ಧರಾಮ ಮನಹಳ್ಳಿ, ಡಿಡಿಪಿಐ ಎ.ಎಂ.ಮಡಿವಾಳರ, ವಿಜ್ಞಾನ ವಿಷಯ ಪರಿವೀಕ್ಷಕಿ ಜಾಸ್ಮಿನ್ ಕಿಲ್ಲೇ ದಾರ, ಎ.ಬಿ. ಆದಾಪೂರ, ನಾಯಕ ಬದಾಮಿ, ಬಿಇಒ ಎ.ಎಂ. ವಡಗೇರಿ ಉಭಯ ಶಿ,ಸಂಸ್ಥೆಯ ಚೇರಮನ್ ಮಹಾಂತೇಶ ಮೆಣಸಗಿ ಹಾಗೂ ಎಸ್.ಟಿ. ಪಾಟೀಲ ಮತ್ತು ಕಾರ್ಯ ದರ್ಶಿ ಎಂ.ಟಿ. ಹರಗದ, ಶಿರಬೂರ ಮತ್ತು ಆಡಳಿತ ಮಂಡಳಿ ಸದಸ್ಯರು, ಪ್ರಮುಖರು ಅಭಿನಂದಿಸಿದ್ದಾರೆ ಎಂದು ಉಭಯ ಶಾಲೆ ಮುಖ್ಯಗುರು ವೈ.ಡಿ. ರಡ್ಡೇರ, ಎಂ.ಎಚ್. ಮಹೇಂದ್ರಕರ ಜಂಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.