ADVERTISEMENT

ಮೆದುಳಿನ ಶಸ್ತ್ರಚಿಕಿತ್ಸೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 10:42 IST
Last Updated 10 ಜುಲೈ 2013, 10:42 IST

ಬಾಗಲಕೋಟೆ:  ಶಾಂತಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಮೆದುಳಿಗೆ ಸಂಬಂಧಿಸಿದ ಅಪರೂಪದ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಡಾ. ಅಮರೇಶ ದೇಗಿನಾಳ ಯಶಸ್ವಿಯಾಗಿದ್ದಾರೆ.

ಯಂಕಂಚಿ ಗ್ರಾಮದ ಅಂದಾಜು 50 ವರ್ಷದ ವ್ಯಕ್ತಿಯೊಬ್ಬರು ವೀಪರಿತ ತಲೆನೋವು, ವಾಂತಿ, ಅಪಸ್ಮಾರ ರೋಗದಿಂದ ಬಳಲುತ್ತಿದ್ದರು. ನಡೆಯುವಾಗ ಬಲಭಾಗಕ್ಕೆ ವಾಲುತ್ತಿದ್ದರು. ಕಳೆದ ಆರು ತಿಂಗಳಿನಿಂದ ರೋಗದಿಂದ ನರಳುತ್ತಿದ್ದರು. ಅನೇಕ ತಜ್ಞ ವೈದ್ಯರನ್ನು ಕಂಡರೂ ಸಮಸ್ಯೆ ಬಗೆಹರಿಸಲು ಆಗಿರಲಿಲ್ಲ. ಕೊನೆಗೆ ಶಾಂತಿ ಆಸ್ಪತ್ರೆಯ ಮೆದುಳು ಮತ್ತು ನರರೋಗ ತಜ್ಞ ಡಾ. ಅಮರೇಶ ದೇಗಿನಾಳ ಅವರನ್ನು ಸಂಪರ್ಕಿಸಿದರು. ವೈದ್ಯರು ತಪಾಸಣೆ ಮಾಡಿ ಮೆದುಳಿನ ಹಿಂಭಾಗದ ಬಲಭಾಗದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ರಕ್ತನಾಳಗಳು ಇರುವುದು ಕಂಡುಬಂದಾಗ  ರಕ್ತನಾಳಗಳು ಹುಳುಗಳ ಆಕಾರದಲ್ಲಿದ್ದು ಒಂದೆಡೆ ಸೇರಿರುವುದು ಮತ್ತು ನಿರುಪಯುಕ್ತವಾಗಿರುವುದು ಕಂಡುಬಂದಿತು. ಇವುಗಳನ್ನು ಸ್ವಲ್ಪ ಮುಟ್ಟಿದರೂ ವಿಪರೀತ ರಕ್ತಸ್ರಾವ ಆಗುವ ಹಂತದಲ್ಲಿತ್ತು. ಈ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಸೂಕ್ಷ್ಮ ದರ್ಶಕದ ಸಹಾಯದಿಂದ ಮಾಡಿದರು.  ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಶಸ್ತ್ರಚಿಕಿತ್ಸೆಯಾಗಿದ್ದು, ಯಶಸ್ವಿಯಾಗಿ ಮಾಡಿರುತ್ತಾರೆ. ಶಸ್ತ್ರಚಿಕಿತ್ಸೆಗೆ ಡಾ. ಅನಿಲ ಅರವಳಿಕೆ ತಜ್ಞ ಸಹಕರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.