ADVERTISEMENT

ರನ್ನ ವೈಭವ ರಥಯಾತ್ರೆಗೆ ಅದ್ದೂರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 8:55 IST
Last Updated 20 ಡಿಸೆಂಬರ್ 2012, 8:55 IST

ಮಹಾಲಿಂಗಪುರ: ಸಮೀಪದ  ರನ್ನಬೆಳಗಲಿಯಲ್ಲಿ ಬುಧವಾರ ರನ್ನವೈಭವ ನಿಮಿತ್ತ 6 ದಿನಗಳ ರನ್ನ ರಥಯಾತ್ರೆಗೆ ಅದ್ದೂರಿ ಚಾಲನೆ ನೀಡಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳರವರು  ತಾಲೂಕಿನ ಹಾಗೂ ರನ್ನನ ಇತಿಹಾಸ ಬಿಂಬಿಸುವ ರಥಕ್ಕೆ ಪೂಜೆ ಸಲ್ಲಿಸಿ ರನ್ನನ ಸಂಕೇತವಾದ ಗದೆಯನ್ನು ಪ್ರದರ್ಶಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ರನ್ನ ವೈಭವವನ್ನು 24 ರಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ ಉದ್ಘಾಟಿಸಲಿದ್ದಾರೆ  24 ರಿಂದ ಮೂರು ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ ಉತ್ಸವದಲ್ಲಿ ನಾಡಿನ ಪ್ರಖ್ಯಾತ ವಿವಿಧ ಸಾಹಿತಿ ಹಾಗೂ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.

ರಥಯಾತ್ರೆಯು ಗ್ರಾಮದ ವಿವಿಧ ಬಿದಿಗಳಲ್ಲಿ ಮೇರವಣಿಗೆಯ ಮೂಲಕ ಸಂಚರಿಸಿ ಕೆಸರಗೊಪ್ಪ ಗ್ರಾಮಕ್ಕೆ  ತೆರಳಿತು. ಮೇರವಣಿಗೆಯಲ್ಲಿ ಗ್ರಾಮದ ವಿವಿಧ ಶಾಲೆಯ ಸಾವಿರಾರು ಮಕ್ಕಳು ಹಾಗೂ ಕುಂಭಮೇಳದೊಂದಿಗೆ ಮಹಿಳೆಯರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.