ADVERTISEMENT

ರಾಜಕೀಯ ಕ್ಷೇತ್ರದ ಅರಿವಿರಲಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 9:55 IST
Last Updated 5 ಅಕ್ಟೋಬರ್ 2012, 9:55 IST

ಅಮೀನಗಡ: ಪ್ರಾಥಮಿಕ ಹಂತದಿಂದಲೇ ರಾಜಕೀಯ ಕ್ಷೇತ್ರದ ಸಾಧಕ-ಬಾಧಕಗಳ ಅರಿವನ್ನು ಯುವಕರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಿಯು ಕಾಲೇಜು ಶಿಕ್ಷಣ ಇಲಾಖೆ ಉಪನಿರ್ದೇಶಕ ವೈ.ಎಚ್. ಇಲಾಳ ಹೇಳಿದರು.

ಕಮತಗಿ ಶಾಖಾಂಭರಿ ಪಿ.ಯು ಕಾಲೇಜಿನಲ್ಲಿ ಗುರುವಾರ ಸಂಸದೀಯ ವ್ಯವಹಾರಗಳ ಹಾಗೂ ಶಾಸನ ರಚನಾ ಇಲಾಖೆ, ಜಿಲ್ಲಾ ಪಿ.ಯು ಕಾಲೇಜು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ಧ ತಾಲ್ಲೂಕು ಮಟ್ಟದ  `ಯುವ ಸಂಸತ್ ಸ್ಪರ್ಧೆ~ಯ ಅಣಕು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ನೈಜ ರಾಜಕೀಯದ ಅರಿವು ಯುವ ಸಮುದಾಯದಲ್ಲಿ ಮೂಡಲಿ ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ತಾಲ್ಲೂಕು ಮಟ್ಟದಿಂದ ರಾಷ್ಟ್ರೀಯ ಮಟ್ಟದ ಸಂಸತ್ ಸ್ಪರ್ಧೆಯನ್ನು ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜನೆ ಮಾಡಿದೆ. ಪ್ರಜಾಪ್ರಭುತ್ವದ ಆಳ ಅಧ್ಯಯನ ಮಾಡಬೇಕು. ಸಾಮಾಜಿಕ, ರಾಜಕೀಯ ಪ್ರಜ್ಞೆಯೊಂದಿಗೆ ಧಾರ್ಮಿಕ  ಅರಿವು ಹೊಂದಬೇಕು ಎಂದರು.

ಪ್ರಾಂಶುಪಾಲ ಕೆ.ಎಂ. ಶೆಟ್ಟರ ಅಧ್ಯಕ್ಷತೆ ವಹಿಸಿದ್ಧರು. ತಾ.ಪಂ. ಸದಸ್ಯ ಯಲ್ಲಪ್ಪ ಆಡಿನ, ಗ್ರಾ.ಪಂ. ಅಧ್ಯಕ್ಷೆ ರತ್ನಾ ಹಳ್ಳದ, ಉಪಾಧ್ಯಕ್ಷೆ ಯಮನವ್ವ ಮಾದರ, ಸದಸ್ಯರಾದ ಲಕ್ಷ್ಮಣ ಯರಗಲ್ಲ, ರತ್ನಾ ಗಾಣಗೇರ, ಹುಚ್ಚೇಶ್ವರ ಪಿ.ಯು ಕಾಲೇಜಿನ ಪ್ರಾಂಶುಪಾಲ ಎಸ್.ವಿ. ಬಾಗೇವಾಡಿ ಹಾಜರಿದ್ದರು.

ಉಪನ್ಯಾಸಕ ಎಸ್.ಎಚ್. ಭಜಂತ್ರಿ ಸ್ವಾಗತಿಸಿದರು. ಜಿ.ಎಚ್. ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು. ಬಿ.ವಿ. ಬೀರಕಬ್ಬಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.