ADVERTISEMENT

ಸಂತ್ರಸ್ತರ ಹೆಸರಿನಲ್ಲಿ ರಾಜಕೀಯ ಬೇಡ: ಮೇಟಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 5:17 IST
Last Updated 18 ಡಿಸೆಂಬರ್ 2013, 5:17 IST

ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮನೆ, ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಅನ್ಯಾಯವಾಗಲು ಎಂದಿಗೂ ಬಿಡುವುದಿಲ್ಲ, ಸಂತ್ರಸ್ತರ ಹೆಸರಿನಲ್ಲಿ ಯಾರೂ ರಾಜಕೀಯ ಮಾಡುವುದೂ ಬೇಡ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.
ನಗರದ ಹವೇಲಿಯ ವಾರ್ಡ್‌ ನಂ. 11ರಲ್ಲಿ ನಗರಸಭೆ ವತಿಯಿಂದ ರೂ. 10 ಲಕ್ಷ ಅನುದಾನದಲ್ಲಿ ಕೈಗೊಳ್ಳ ಲಾಗಿರುವ ರಸ್ತೆ ಡಾಂಬರೀಕಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಯುಕೆಪಿ-–3 ಹಂತದಲ್ಲಿ ಮುಳುಗಡೆ ಯಾಗುವ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ನಿವೇಶನ ಹಂಚಿಕೆ ಯಲ್ಲಿ ಅನ್ಯಾಯವಾಗದಂತೆ ನೋಡಿ ಕೊಳ್ಳಲಾಗುವುದು ಎಂದರು.

ಆಲಮಟ್ಟಿ ಜಲಾಶಯವನ್ನು 510.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿದಾಗ ಬಾಗಲ ಕೋಟೆ ನಗರವನ್ನು 527 ಮೀಟರ್ ವರೆಗೆ ಮುಳುಗಡೆ ಎಂದು ಘೋಷಣೆ ಮಾಡಬೇಕೆಂದು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲಾಗಿದೆ. ಅಲ್ಲದೇ, ಈ ಹಿಂದೆ ಹಂತ-1ರಲ್ಲಿ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡಿದ ಮಾದರಿಯಲ್ಲಿ ಹಂತ-2 ಮತ್ತು 3ರಲ್ಲಿ ಬರುವ ಸಂತ್ರಸ್ತರಿಗೂ ನೀಡಬೇಕು. ಸಂತ್ರಸ್ತರಲ್ಲಿ ತಾರತಮ್ಯ ಮಾಡ ಬಾರದು ಎಂದು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.

ಸಂತ್ರಸ್ತರಿಗೆ ಪರಿಹಾರ ಮತ್ತು ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ತಾರತಮ್ಯವಾಗಲು ಬಿಡುವು ದಿಲ್ಲ. ಈ ಕುರಿತು ಯಾರಿಗೂ ಆತಂಕ ಬೇಡ. ಸಂತ್ರಸ್ತರ ಸಮಸ್ಯೆಗಳ ಕುರಿತು ಎಲ್ಲ ಪಕ್ಷಗಳ ಪ್ರಮುಖರು, ಸಂತ್ರಸ್ತ ರೊಂದಿಗೆ ಚರ್ಚಿಸಿಯೇ ನಿರ್ಣಯ ಕೈಗೊಳ್ಳಲಾಗುವುದು. ಸಂತ್ರಸ್ತರ ಹೆಸರಿನಲ್ಲಿ ರಾಜಕೀಯ ಮಾಡದೇ, ಪಕ್ಷಾತೀತವಾಗಿ ಕೆಲಸ ಮಾಡಲಾಗು ವುದು ಎಂದರು.

ನಗರದ ಹವೇಲಿಯಲ್ಲಿ ರಸ್ತೆ ಅಭಿವೃದ್ಧಿ ಮಾಡಬೇಕು ಎಂಬುದು ಈ ಭಾಗದ ಜನರು ಬೇಡಿಕೆಯಾಗಿತ್ತು. ನಗರಸಭೆಯಿಂದ ಅನುದಾನ ಒದಗಿಸ ಲಾಗಿದ್ದು, ರಸ್ತೆ ಅಭಿವೃದ್ಧಿ ಮಾಡ ಲಾಗುತ್ತಿದೆ. ಕಾಮಗಾರಿ ಗುಣಮಟ್ಟ ದಿಂದ ಕೂಡಿರಲು ವಾರ್ಡ್‌ನ ಸಾರ್ವ ಜನಿಕರೂ ನಿಗಾ ವಹಿಸಬೇಕು ಎಂದು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ಸುರೇಶ ಕುದರಿ ಕಾರ, ಉಪಾಧ್ಯಕ್ಷ ಮಹೇಶ ಕಮತಗಿ, ಹವೇಲಿ ವಾರ್ಡ್ ನ ಸದಸ್ಯ ಹಾಜಿಸಾಬ ದಂಡಿನ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಎಂ. ಮಣಿಯಾರ, ಸದಸ್ಯ ರಾದ ಶಫೀಕ್‌ ಅಹ್ಮದ್ ಜಮಾದಾರ, ಬಸವರಾಜ ನಾಶಿ, ಯಲ್ಲಪ್ಪ ಬೆಂಡಿ ಗೇರಿ, ಗುತ್ತಿಗೆದಾರ ಮಂಜುನಾಥ ಕೆಂಚನಗುಡ್ಡ, ನಗರಸಭೆ ಸಹಾಯಕ ಎಂಜಿನಿಯರ್ ಬಿ.ಎಸ್. ಹಾಲವರ, ಪ್ರಮುಖರಾದ ನಾಗೇಶ ಹೊಸೂರ, ಶಂಸುದ್ದೀನ್ ಜತ್ತರಗಾರ, ಕೆ.ಬಿ. ಸೂಳಿ ಭಾವಿ, ಇಮಾಮ್‌ ಸಾಬ್‌ ಕರಜಗಿ, ಬೋಜಪ್ಪ ದೊಡಮನಿ, ಖಾಜಿಸಾಬ್‌ ಸೂಳಿಭಾವಿ, ಡೋಂಗ್ರಿ ಸಾಬ ಕಡಪೆ, ಹಾಜಿಸಾಬ್‌ ಪಿತಲಿ, ನಾಗರಾಜ ಹದ್ಲಿ, ಸಂಜೀವ ವಾಡ್ಕರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.