ADVERTISEMENT

ಸಂಶೋಧನೆ ಕೈಗೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 7:55 IST
Last Updated 21 ಮಾರ್ಚ್ 2012, 7:55 IST

ಬಾಗಲಕೋಟೆ: ವಿದ್ಯಾರ್ಥಿಗಳು ಸಂಶೋಧನೆ ಕೈಗೊಳ್ಳಲು ಅನುಕೂಲ ಒದಗಿಸುವ ಸಂಬಂಧ ಜಮಖಂಡಿ ತಾಲ್ಲೂಕಿನ 350 ಶಾಲೆಗಳಿಗೆ ರೂ. 17.65 ಲಕ್ಷ  `ಇನ್‌ಸ್ಫೈರ್~ ಹಣನೀಡಲಾಗಿದೆ ಎಂದು  ಜಮಖಂಡಿಯ ಸಮೂಹ ಸಂಪನ್ಮೂಲ ಕೇಂದ್ರದ ನೋಡೆಲ್ ಅಧಿಕಾರಿ ಎಚ್.ವೈ ಜರಾಳಿ ಹೇಳಿದರು.

ಬೆಂಗಳೂರಿನ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ,  ಸಾಗರದ ವಿಜ್ಞಾನ ವೇದಿಕೆ ಮತ್ತು ಕ್ಷೇತ್ರ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಜಮಖಂಡಿಯ ತುಂಗಳಶಾಲೆಯಲ್ಲಿ ನಡೆದ `ಇನ್‌ಸ್ಫೈರ್ ಅವಾರ್ಡ್ ಮಾಹಿತಿ ಹಾಗೂ ಯೋಜನೆ ತಯಾರಿಕೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

 ಇನ್‌ಸ್ಪೈರ್ ಮೂಲಕ  ಸಂಶೋಧನೆ ಕೈಗೊಳ್ಳಲು ಪೂರಕವದ ಸಾಧನ ಸಲಕರಣೆಗಳನ್ನು ಸಿದ್ಧಪಡಿಸಲು, ಕ್ಷೇತ್ರ ಕಾರ್ಯ ಕೈಗೊಳ್ಳಲು ಎಂಬುದನ್ನು ಈ ಕಾರ್ಯಾಗಾರದ ಮೂಲಕ ತಿಳಿದು ಕೊಳ್ಳಬೇಕು ಎಂದರು.
 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಎಚ್.ಎಲ್. ಸೂರ್ಯನಾರಾಯಣರಾವ್, ಇನ್‌ಸ್ಫೈರ್ ಅವಾರ್ಡ್ ಎಂದರೆ  ವಿದ್ಯಾರ್ಥಿಗಳು ಸಂಶೋಧನೆ ಮಾಡಲು ನೀಡುತ್ತಿರುವ ಸಹಾಯಧನವಾಗಿದೆ ಎಂದರು.

ಬಾಲ್ಯದಿಂದಲೇ ವಿಜ್ಞಾನದ ಕುರಿತು ಆಸಕ್ತಿ, ಕುತೂಹಲ ಮೂಡಿಸಿ  ಭವಿಷ್ಯದಲ್ಲಿ ದೇಶದ ಅಭಿವೃದ್ಧಿಗೆ ಕಾರಣವಾಗುವ ವಿಜ್ಙಾನಿ ಆಗಲಿ ಎಂಬುದು ಇದರ ಮುಖ್ಯ ಉದ್ಧೇಶ ಎಂದರು.
ಪ್ರೊ.ಎಂ.ಆರ್.ನಾಗರಾಜ, ಡಿ.ಜಿ.ವಾಲಿ, ಅಗಸ್ತ್ಯ ಪೌಂಡೇಶನ್‌ನ ಚಂದ್ರಕಾಂತ ಉಪಸ್ಥಿತರಿದ್ದರು. ಸಾಗರದ  ವಿಜ್ಙಾನ ವೇದಿಕೆಯ ಪೂರ್ಣಪ್ರಜ್ಞ ಬೇಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು.  ತುಂಗಳ ಶಾಲೆಯ ಡಿ.ಜಿ.ವಾಲಿ ವಂದಿಸಿದರು.

ಕಾರ್ಯಾಗಾರದಲ್ಲಿ  ಸುಮಾರು 159 ಶಿಕ್ಷಕರು ಭಾಗವಹಿಸಿದ್ದರು. ಯೋಜನೆಗಳ ಪ್ರಾತ್ಯಕ್ಷಿಕೆ ಹಾಗೂ ತಯಾರಿಕೆಗಳನ್ನು ಮಾಡಲಾಯಿತು. ಜೊತೆಗೆ ಅಗಸ್ತ್ಯ ಪೌಂಡೇಶನ್ ವತಿಯಿಂದ ವಿಜ್ಞಾನ ಮಾದರಿ ಪ್ರದರ್ಶನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.