ADVERTISEMENT

ಸಾಧನೆ ಜಾತಿಗೆ ಸೀಮಿತವಲ್ಲ: ಸಚಿವ ಕಾರಜೋಳ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2011, 8:30 IST
Last Updated 13 ಅಕ್ಟೋಬರ್ 2011, 8:30 IST

ಮುಧೋಳ: `ಮನುಕುಲಕ್ಕೆ ಕಂಟಕವಾಗಿದ್ದ ಬೇಡ ಜನಾಂಗದ ವಾಲ್ಮೆಕಿ ಮನುಕುಲವೇ ಮೆಚ್ಚುವಂಥ ಮಹಾಪುರುಷ ಶ್ರೀರಾಮನ ಆದರ್ಶಗಳನ್ನು ತನ್ನ ಸ್ಪಷ್ಟ ಬರಹದಿಂದ ಜಗತ್ತಿಗೇ ಸಾರಿದ. ಸಾಧನೆಯು ಯಾವುದೇ ಜಾತಿ ಜನಾಂಗದ ಆಧಾರಿತವಲ್ಲವೆಂಬುದನ್ನು ತೋರಿಸಿಕೊಟ್ಟ~ ಎಂದು ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ನಗರದ ಹೇಮರಡ್ಡಿ ಮಲ್ಲಮ್ಮ ಕಲ್ಯಾಣಮಂಟಪದಲ್ಲಿ ಮಹರ್ಷಿ ವಾಲ್ಮೆಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಭಾರತೀಯರ ಗ್ರಾಮೀಣ ಬದುಕಿನ ಬಗ್ಗೆ, ತನ್ನ ಕಾಲದಲ್ಲಿ ನಡೆದ ಸತ್ಯ ಘಟನೆಯ ಬಗ್ಗೆ ರಾಮಾಯಣದ 2400 ಶ್ಲೋಕಗಳಲ್ಲಿ ಉಲ್ಲೇಖಿಸಿದ್ದಾನೆ.

ಪ್ರತಿ ಶ್ಲೋಕಗಳು ಅರ್ಥಪೂರ್ಣ ಹಾಗೂ ಮಾನವೀಯ ಮೌಲ್ಯಗಳನ್ನು ಬಿಂಬಿಸುತ್ತವೆ. ರಾಮಾಯಣ ಜಗತ್ತಿನ ಮಹಾಕಾವ್ಯವೆಂದು ತಿಳಿಸಿದರು.

ವಾಲ್ಮೀಕಿ ಭವನಕ್ಕೆ ಹಣ: ನಗರದಲ್ಲಿ ವಾಲ್ಮೀಕಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ರೂ 25 ಲಕ್ಷ ಬಿಡುಗಡೆ ಮಾಡುವುದಾಗಿ ತಿಳಿಸಿದ ಸಚಿವರು, ಬರುವ ವರ್ಷದಲ್ಲಿ ವಾಲ್ಮೆಕಿ ಜಯಂತ್ಯುತ್ಸವವನ್ನು ನೂತನ ಭವನದಲ್ಲಿಯೇ ಆಚರಿಸುವುದಾಗಿ ತಿಳಿಸಿದ ಅವರು ಸಮಾಜದ ಮುಖಂಡರು ಸೂಕ್ತ ಸ್ಥಳದಲ್ಲಿ ಭೂಮಿ ಖರೀದಿಗೆ ಸಹಾಯ ಮಾಡಬೇಕು ಎಂದರು.

ನಗರದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರವನ್ನು ಮೆರವಣಿಗೆಯ ಮೂಲಕ ತರಲಾಯಿತು. ವಾಲ್ಮೀಕಿಯ ಭಾವಚಿತ್ರಕ್ಕೆ ಸಚಿವರು ಹಾಗೂ ಪ್ರಮುಖರು ಪೂಜೆ ಸಲ್ಲಿಸಿದರು.

ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ, ಪುರಸಭೆ ಅಧ್ಯಕ್ಷ ರಾಜು ಪಾಲೋಜಿ, ಬಿ.ಜೆ.ಪಿ ಅಧ್ಯಕ್ಷ ಬಿ.ಎಚ್.ಪಂಚಗಾಂವಿ, ತಾಪಂ ಅಧ್ಯಕ್ಷೆ ಬಾಯಕ್ಕ ಕುಂಬಾರ, ಜಿ.ಪಂ. ಸದಸ್ಯ ಮಹಾಂತೇಶ ಹಿಟ್ಟಿನಮಠ, ತಹಸೀಲ್ದಾರ ಶಂಕರಗೌಡ ಸೋಮನಾಳ, ಸಮಾಜ ಕಲ್ಯಾಣಾಧಿಕಾರಿ ಡಿ.ಕೆ.ಹೊಸಮನಿ, ಸಿ.ಪಿ.ಐ ಸುರೇಶ ರೆಡ್ಡಿ, ಗೋವಿಂದ ಕೌಲಗಿ, ದಶರಥ ತಳವಾರ, ಭೀಮನಗೌಡ ಪಾಟೀಲ,  ಪುರಸಭೆ ಸದಸ್ಯ ಬಸವರಾಜ ಮಾನೆ, ಸೋನಾಪಿ ಕುಲಕರ್ಣಿ, ಮಹಾದೇವ ಬಿದರಿ, ಎ.ಪಿ.ಎಂ.ಸಿ ಅಧ್ಯಕ್ಷ ಹಣಮಂತ ತುಳಸೀಗೇರಿ, ಮಲ್ಲಪ್ಪಗೌಡ ದೊಡಮನಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಮಹರ್ಷಿ ವಾಲ್ಮೆಕಿ ಭಾವಚಿತ್ರಕ್ಕೆ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಮಾಲಾರ್ಪಣೆ ಮಾಡಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜೊತೆಯಲ್ಲಿ  ಎಚ್.ಎ.ಕಡಪಟ್ಟಿ, ಹಣಮಂತ ಅಡವಿ,ಲಕ್ಷ್ಮಣ ಮಾಲಗಿ, ಸುಭಾಷ ಗಸ್ತಿ, ಸಿದ್ದು ದೇವಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.