ADVERTISEMENT

ಸಿದ್ದೇಶ್ವರ ಶ್ರೀಗಳ ಅದ್ದೂರಿ ಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 6:23 IST
Last Updated 20 ಡಿಸೆಂಬರ್ 2013, 6:23 IST

ಶಿರೂರ(ಗುಳೇದಗುಡ್ಡ): ಗ್ರಾಮದ ಸಿದ್ದೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಲಿಂ, ಸಿದ್ದೇಶ್ವರ ಶ್ರೀಗಳವರ 43ನೇ ಪುಣ್ಯಸ್ಮರಣೆಯ ನಿಮಿತ್ತ ಶ್ರೀಗಳವರ ಗದ್ದುಗೆಗೆ ರುದ್ರಾಭಿಷೇಕ ವಿಸೇಷ ಪೂಜೆಯ ನಂತರ ವಿವಿಧ ಹೂವುಗಳಿಂದ ಅಲಂಕಾರಗೊಳಿಸಿದ ಪಲ್ಲಕ್ಕಿ ಉತ್ಸವದ ಮೆರವಣಿಗೆ ಶಿವಯೋಗಾಶ್ರಮದ ಸಿದ್ದಲಿಂಗ ಶ್ರೀಗಳವರ ನೇತೃತ್ವದಲ್ಲಿ ಸಡಗರ ಸಂಭ್ರಮದಿಂದ ಗುರುವಾರ ಗ್ರಾಮದಲ್ಲಿ ನಡೆಯಿತು.

ಬೆಳಿಗ್ಗೆ 7ಗಂಟೆಗೆ ಲಿಂ,  ಸಿದ್ದಲಿಂಗ ಶ್ರೀಗಳವರ ಬೆಳ್ಳಿ ಮೂರ್ತಿ ಇರುವ ಪಲ್ಲಕ್ಕಿ ಉತ್ಸವದ ಹೂವಿನ ಆಟ, ಕೋಲಾಟ, ಕರಡಿ ಮಜಲ, ಡೊಳ್ಳಿನ ಮೇಳ, ಪುರವಂತರ ಕುಣಿತ ಹಾಗೂ ಸುಮಂಗಲಿಯರ ಕಳಸಾರತಿಗಳೊಂದಿಗೆ ಮೆರವಣಿಗೆ ಸಿದ್ದೇಶ್ವರ ದೇವಸ್ಥಾನದಿಂದ ಹೊರಟು ನೇಕಾರರ ಓಣಿ, ಸಿದ್ದೇಶ್ವರ ಪ್ರೌಢ ಹಾಗೂ ಪ್ರಾಥಮಿಕ ಶಾಲೆ, ದೊಡ್ಡ ಓಣಿ, ಕಂಬಾರ, ಗೌಡರ ಓಣಿಯ ಮೂಲಕ ಸಂಜೆ ಸಿದ್ದೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು.

ಪಲ್ಲಕಿ ಉತ್ಸವದ ಮೆರವಣಿಗೆಯ ಮಧ್ಯದಲ್ಲಿ ಭಕ್ತರು ಶ್ರದ್ಧೆ, ಭಕ್ತಿಯಿಂದ ಪಲ್ಲಕ್ಕಿಯಲ್ಲಿ ಇರುವ  ಬೆಳ್ಳಿ ಮೂರ್ತಿಗೆ ಹೂವು. ಹಣ್ಣು. ಆರತಿಗಳೊಂದಿಗೆ ಪೂಜೆ ನೆರವೇರಿಸಿ ಹರಕೆ ಮುಟ್ಟಿಸಿದರು. ಮೆರವಣಿಗೆಯಲ್ಲಿ ಕುಂಬಾರ ಓಣೆಯ ಗಜಾನನ ಯುವಕ ಮಂಡಳದ ಹೂವಿನ ನೃತ್ಯ, ಕೋಲಾಟ, ಕರಡಿ ಮಜಲ, ಡೊಳ್ಳಿನ ಮೇಳ ಹಾಗೂ ಸುಮಂಗಲಿಯರ ಕಳಸ, ಆರತಿ ಮೆರವಣಿಗೆಗೆ ಮೆರಗು ತಂದಿತು.

ಪಲ್ಲಕ್ಕಿ ಉತ್ಸವದ ಮೆರವಣಿಗೆಯಲ್ಲಿ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಹಾಗೂ ತರುಣ ಸಂಘದವರು ಪಾಲ್ಗೊಂಡಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.