ADVERTISEMENT

ಹುದ್ದೆ ಕಾಯಮಾತಿಗೆ ಶುಶ್ರೂಷಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 9:45 IST
Last Updated 7 ಫೆಬ್ರುವರಿ 2012, 9:45 IST

ಬಾಗಲಕೋಟೆ: ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷ ಕರನ್ನು ಕಾಯಂಗೊಳಿಸಬೇಕು ಮತ್ತು ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಕರ ಸಂಘದ ಜಿಲ್ಲಾ ಘಟಕದ ಪದಾಧಿ ಕಾರಿಗಳು ಸೋಮವಾರ ಜಿಲ್ಲಾ ಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಗುತ್ತಿಗೆ ವೈದ್ಯರನ್ನು ಹಾಗೂ ದಂತ ವೈದ್ಯರನ್ನು ಮೂರು ವರ್ಷದ ಸೇವೆಯ ನಂತರ ಖಾಯಂ ಮಾಡಿರುವಂತೆ ನಮ್ಮನ್ನು ಸಹ ಅದೇ ರೀತಿ ಖಾಯಂಗೊಳಿಸಬೇಕು ಎಂದು ಆಗ್ರಹಿಸಿದರು.

ಆರೋಗ್ಯ ಇಲಾಖೆಯಲ್ಲಿ ಹಾಲಿ ಖಾಲಿ ಇರುವ ಶುಶ್ರೂಷಕರ ಹುದ್ದೆ ಗಳಿಗೆ ನೇರ ನೇಮಕಾತಿ ಮಾಡದೇ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿ ಸುತ್ತಿರುವ ಶುಶ್ರೂಷಕರನ್ನು ಜೇಷ್ಠತಾ ಆಧಾರದ ಮೇಲೆ ಖಾಯಂಗೊ ಳಿಸಬೇಕು ಎಂದು ಒತ್ತಾಯಿಸಿದರು.

ಖಾಯಂ ಶುಶ್ರೂಷಕರಿಗೆ ನೀಡುತ್ತಿ ರುವ ವೇತನದಲ್ಲಿ ರೂ. 100 ಕಡಿಮೆ ಮಾಡಿ ಗುತ್ತಿಗೆ ಶುಶ್ರೂಷಕರನ್ನು ಖಾಯಂಗೊಳಿಸುವವರೆಗೂ ವೇತನ ನೀಡಬೇಕು ಎಂದು ಆಗ್ರಹಿಸಿದರು.

10 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದಿನದ 24 ಗಂಟೆ ಹಗಲು-ರಾತ್ರಿಗಳೆನ್ನದೆ ಹಳ್ಳಿಗಾಡಿನಿಂದ ಹಿಡಿದು ಪಟ್ಟಣದ ಜಿಲ್ಲಾ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ, ಆಸ್ಪತ್ರೆ ಗಳಿಗೆ ಬರುವ ರೋಗಿಗಳಿಗೆ ಪ್ರಾಮಾ ಣಿಕವಾಗಿ ಸೇವೆ ಸಲ್ಲಿಸುತ್ತಿದ್ದೇವೆ ಆದರೆ ಪ್ರತಿ ದಿನ ಹಲವು ರೀತಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಿದರು.

ಹೆಚ್ಚಿನ ಸಮಯ ದುಡುಸಿ ಕೊಂಡರೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುತ್ತಿಲ್ಲ, ರಜಾ ಸೌಲಭ್ಯ ಇಲ್ಲ, ಸಂಬಳ ಕಡಿಮೆ ಇರುವುದರಿಂದ ಜೀವನ ಸಾಗಿಸುವುದು ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಂಡರು.

ರಾಜ್ಯದ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ 4700 ಗುತ್ತಿಗೆ ಶುಶ್ರೂಷಕರು ಕಾರ್ಯನಿರ್ವ ಹಿಸು ತ್ತಿದ್ದು, ಬಾಗಲಕೋಟೆ ಜಿಲ್ಲೆ ಯೊಂದ ರಲ್ಲೇ 154 ಗುತ್ತಿಗೆ ಶುಶ್ರೂ ಷಕರು ಇರುವುದಾಗಿ ಮನವಿಯಲ್ಲಿ ತಿಳಿಸಿದರು.

ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಕರ ಸಂಘದ ಜಿಲ್ಲಾ ಘಟಕದ ಸಾವಿತ್ರಿ ಬಿ. ಸಾರಥಿ, ಟಿ.ಎಂ. ಮಕಾನದಾರ, ವೀಣಾ ಜಿ. ಬೋರ ಣ್ಣವರ, ಜೆ.ಎಸ್.ವಾಗ್ಮೋರೆ, ಎಚ್.ಬಿ.ಸಾವಿತ್ರಿ, ಮಮತಾಜ್ ನದಾಪ್, ಅಶ್ವಿನಿ ಸೂರ್ಯವಂಶಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.