ADVERTISEMENT

₹6 ಲಕ್ಷ ಮೌಲ್ಯದ ನಕಲಿ ಮದ್ಯವಶ

ಕೂಡಲಸಂಗಮ: ಹೊಲದಲ್ಲಿ ಮುಚ್ಚಿಟ್ಟಿದ್ದ 135 ಬಾಕ್ಸ್ ಪತ್ತೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 4:30 IST
Last Updated 29 ಏಪ್ರಿಲ್ 2018, 4:30 IST

ಕೂಡಲಸಂಗಮ: ಸಮೀಪದ ಬಿಸಲದಿನ್ನಿ ಗ್ರಾಮದ ಹೊಲವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಂದಾಜು ₹6 ಲಕ್ಷ ಮೌಲ್ಯದ ನಕಲಿ ಮದ್ಯವನ್ನು ಶುಕ್ರವಾರ ಮಧ್ಯರಾತ್ರಿ ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಿಸಲದಿನ್ನಿ ಗ್ರಾಮದ ಮಾನನಗೌಡ ಪಾಟೀಲ ಹೊಲದಲ್ಲಿ ಮುಚ್ಚಿಟ್ಟಿದ್ದ 135 ಬಾಕ್ಸ್ ಗೋವಾ ಮೇಡ್‌ ನಕಲಿ ಮದ್ಯ ಪತ್ತೆಯಾಗಿದೆ. ನಿಖರ ಮಾಹಿತಿ ಮೇರೆಗೆ ಬಾಗಲಕೋಟೆ ಅಬಕಾರಿ ಉಪ ಆಯುಕ್ತ ಡಿ.ಆರ್. ಹಿರೇಮಠ, ಕಚೇರಿ ನಿರೀಕ್ಷ ಪ್ರಭು ಪಾಟೀಲ, ಹುನಗುಂದ ಅಬಕಾರಿ ನಿರೀಕ್ಷಕ ರಮೇಶಬಾಬು ನೇತೃತ್ವದ ತಂಡ ದಾಳಿ ನಡೆಸಿದರು.

ನಕಲಿ ಮದ್ಯ ವಶಪಡಿಸಿಕೊಂಡಿರುವ ಅಬಕಾರಿ ಇಲಾಖೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಹೊಲದ ಮಾಲಿಕರ ಖಚಿತ ಮಾಹಿತಿ ಪಡೆದು ಅವರನ್ನು ಬಂಧಿಸುವ ತಯಾರಿಯಲ್ಲಿ ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.