ಬೀಳಗಿ: ಸ್ಥಳೀಯ ನೇಕಾರ ಗಲ್ಲಿಯ ಗೌರಿಶಂಕರ ಗಜಾನನ ಯುವಕ ಮಂಡಳದವರ ಗಣೇಶೋತ್ಸವ ಆಚರಣೆ ಪ್ರತಿ ವರ್ಷವೂ ವಿಭಿನ್ನವಾಗಿ ಆಚರಿಸಲಾಗುತ್ತದೆ. ಇಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿ ಚಿಕ್ಕದಾದರೂ ಈ ಗಜಾನನ ಮಂಡಳಿಯವರು ಪ್ರದರ್ಶಿಸುವ ವೈವಿಧ್ಯಮಯ ಕಥಾರೂಪಕಗಳು ಗಣೇಶೋತ್ಸವಕ್ಕೆ ಮತ್ತಷ್ಟು ಮೆರುಗು ತರುತ್ತವೆ.
ಧಾರ್ಮಿಕ, ಐತಿಹಾಸಿಕ ಹಿನ್ನೆಲೆಯ ಈ ಕಥಾರೂಪಕಗಳನ್ನು ಪ್ರತಿದಿನ ಸಂಜೆ 6.30ರಿಂದ ರಾತ್ರಿ 10 ರ ವರೆಗೆ ಪ್ರದರ್ಶಿಸಿದರು. 12 ವರ್ಷಗಳಿಂದ ಈ ಕಥಾರೂಪಕಗಳನ್ನು ಪ್ರದರ್ಶಿಸುತ್ತಾ ಬಂದಿದ್ದು, ಈ ಬಾರಿ ಭಕ್ತ ಸಿರಿಯಾಳ ದಂಪತಿಗಳ ಭಕ್ತಿಯ ಪರಾಕಾಷ್ಟೆಯನ್ನು ಬಿಂಬಿಸುವ ಕಥಾ ರೂಪಕವನ್ನು ಆಯ್ಕೆ ಮಾಡಿಕೊಂಡಿದ್ದರು.
ಪಾತ್ರಧಾರಿಗಳು ಶಿವ-ಆದಿತ್ಯ ಕೋಟಿ , ಸಿರಿಯಾಳ-ಸಂಗಮೇಶ ಹಲಗನಿ, ಮಂಗಲಾ- ಸಾಕ್ಷಿ ಶೆಟ್ಟೆಪ್ಪನವರ, ಮಗ-ಸಾತ್ವಿಕ ಶೆಟ್ಟೆಪ್ಪನವರ, ಸಾವಕಾರ-ಪೃಥ್ವಿ ದೇಶಟ್ಟಿ, ಸೇವಕ-ಸಮನ್ವಿತಾ ಕೋಟಿ ಪಾತ್ರ ನಿರ್ವಹಿಸಿದರು.
ನೇಕಾರ ಗಲ್ಲಿಯ ಗೌರಿಶಂಕರ ಗಜಾನನ ಯುವಕ ಮಂಡಳದ ಅಧ್ಯಕ್ಷ ಸಂಗಮೇಶ ಕೋಟಿ, ಸಿದ್ದಲಿಂಗೇಶ ದೇಶಟ್ಟಿ, ಗಂಗಾಧರ ಕಲ್ಬುರ್ಗಿ, ಮಲ್ಲಿಕಾರ್ಜುನ ಕಲಗುಡಿ, ಈರಣ್ಣ ಕುಂದರಗಿ, ರವಿ ಯಂಡಿಗೇರಿ, ಬಸವರಾಜ ಕೋಟಿ, ವಿನೋದ ಕಡಕೋಳ, ಸೋಮು ಕುಂದರಗಿ, ಮಲ್ಲು ಕಂಪನ್ನವರ, ಲೋಹಿತ ಕೊಪ್ಪದ, ಗೋಪಾಲ ರಕ್ಕಸಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.