ADVERTISEMENT

ಬಾಗಲಕೋಟೆ: ಮತ್ತಿಬ್ಬರಿಗೆ ಕೋವಿಡ್-19 ದೃಢ, ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 7:51 IST
Last Updated 24 ಏಪ್ರಿಲ್ 2020, 7:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಾಗಲಕೋಟೆ: ಕಳೆದ ಐದು ದಿನಗಳಿಂದ ಹೊಸ ಪ್ರಕರಣ ವರದಿಯಾಗದೇ ನಿರುಮ್ಮಳವಾಗಿದ್ದ ಜಿಲ್ಲೆಯ ಜನರಿಗೆ ಶುಕ್ರವಾರ ಮತ್ತೆ ಇಬ್ಬರಿಗೆ ಕೋವಿಡ್-19 ದೃಢಪಟ್ಟಿದೆ.

ಜಮಖಂಡಿಯ 46 ವರ್ಷದ ವ್ಯಕ್ತಿಗೆ ದೃಢಪಟ್ಟಿದೆ. ಅವರಿಗೆ ಯಾವುದೇ ಪ್ರವಾಸದ ಇತಿಹಾಸವಿಲ್ಲ. ಇನ್ನಷ್ಟೇ ಅವರ ಸಂಪರ್ಕಕ್ಕೆ ಬಂದವರ ಮಾಹಿತಿ ಕಲೆ ಹಾಕಬೇಕಿದೆ. ಮುಧೋಳದ ರೋಗಿ ಸಂಖ್ಯೆ 380 ಸಂಪರ್ಕಕ್ಕೆ ಬಂದಿದ್ದ ಎದುರು ಮನೆಯ 28 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ.

ಇಬ್ಬರನ್ನೂ ಬಾಗಲಕೋಟೆಯ ಕೋವಿಡ್-19 ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಇದರಿಂದ ಜಿಲ್ಲೆಯಲ್ಲಿ ಇಲ್ಲಿಯವರೆಗೆ 23 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಅವರಲ್ಲಿ 75ವರ್ಷದ ವೃದ್ಧ ಸಾವಿಗೀಡಾಗಿದ್ದಾರೆ. ಇಬ್ಬರುಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.