ADVERTISEMENT

ರಬಕವಿ ಬನಹಟ್ಟಿ | ದುರ್ಗಾದೇವಿ ಜಾತ್ರೆ ನಾಳೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 14:28 IST
Last Updated 16 ಏಪ್ರಿಲ್ 2025, 14:28 IST

ರಬಕವಿ ಬನಹಟ್ಟಿ: ಸಮೀಪದ ಜಗದಾಳ ಗ್ರಾಮದ ಭಟ್ಟಡ ಫಾರ್ಮ್ ಹೌಸ್‌ನಲ್ಲಿರುವ ದುರ್ಗಾ ದೇವಿಯ ಜಾತ್ರೆ ಏ.18 ರಂದು ನಡೆಯಲಿದೆ.

ಜಾತ್ರೆ ಅಂಗವಾಗಿ ಬೆಳಿಗ್ಗೆ ದೇವಸ್ಥಾನದಲ್ಲಿಅಭಿಷೇಕ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗುವುದು. ನಂತರ ಮಧ್ಯಾಹ್ನ ಮೂರ್ತಿಗಳಿಗೆ ಬೆಳ್ಳಿ ಅಲಂಕಾರ  ಪೂಜೆ ಮಾಡಲಾಗುವುದು. ನೂರಾರು ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ನಡೆಯಲಿದೆ.

ಬೆಳಿಗ್ಗೆ 8 ಕ್ಕೆ ಪ್ರಸಾದ ಸೇವೆ ಆರಂಭವಾಗಲಿದೆ. ಜಾತ್ರೆ ಅಂಗವಾಗಿ ರಾತ್ರಿ ದೇವಸ್ಥಾನದ ಆವರಣದಲ್ಲಿ ಸಾಮಾಜಿಕ ನಾಟಕ  ಪ್ರದರ್ಶನ  ನಡೆಯಲಿದೆ ಎಂದು ಸಂಘಟಕರು ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.